ಮೇಷ: ಬಂಧು ಮಿತ್ರರಲ್ಲಿ ಸಹನೆಯಿಂದ ಇರಿ. ವ್ಯವಹಾರ ಉತ್ತಮ. ಶುಭಕಾರ್ಯಾಸಕ್ತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಶುಭಸಂಖ್ಯೆ: 3
ವೃಷಭ: ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಂಡು ವ್ಯವಹರಿಸಿ. ಉತ್ತಮರು ಜತೆಗೂಡುವರು. ಚಾಲನೆಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 2
ಮಿಥುನ: ನಿಮ್ಮ ತಾಳ್ಮೆಯ ಸತ್ವ ಪರೀಕ್ಷೆಯಾಗಲಿದೆ. ನ್ಯಾಯಾಲಯದ ವ್ಯವಹಾರ ಇತ್ಯರ್ಥ. ಹೂಡಿಕೆ ವ್ಯವಹಾರಗಳು ಕುದುರಲಿವೆ. ಶುಭಸಂಖ್ಯೆ:6
ಕಟಕ: ಸಾಹಸ ಪ್ರವೃತ್ತಿಯಿಂದ ಗೌರವ. ಹೂಡಿಕೆಯಲ್ಲಿ ಹುಷಾರು. ಖರೀದಿಯಲ್ಲಿ ಮೋಸ. ವೈದ್ಯರಿಗೆ ಅನುಕೂಲದ ವಾತಾವರಣ. ಶುಭಸಂಖ್ಯೆ: 8
ಸಿಂಹ: ಮಾತು ಮಿತವಾಗಿರಲಿ. ಅನಾರೋಗ್ಯ ಸಂಭವ. ಆಹಾರ ಸೇವಿಸುವಾಗ ಎಚ್ಚರಿಕೆ ಇರಲಿ. ಋಣಬಾಧೆ ತೀರಲಿದೆ. ಶುಭಸಂಖ್ಯೆ: 9
ಕನ್ಯಾ: ಕಾರ್ಯ ಒತ್ತಡದಿಂದ ಅನಾರೋಗ್ಯ. ಮೇಲಧಿಕಾರಿಗಳಿಂದ ಪ್ರಶಂಸೆ. ರಾಜಕೀಯದಲ್ಲಿ ಇರುವವರಿಗೆ ಉತ್ತಮ ಭವಿಷ್ಯ. ಶುಭಸಂಖ್ಯೆ:1
ತುಲಾ: ಕೆಲಸಕಾರ್ಯಗಳಲ್ಲಿ ಕಿರಿಕಿರಿ ಹೆಚ್ಚುವುದು. ಹಿರಿಯರ ಸಲಹೆ ತೆಗೆದುಕೊಳ್ಳಿ. ಅಸಹನೆಯಿಂದ ವೈಮನಸ್ಯ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 2
ವೃಶ್ಚಿಕ: ಪರಿವರ್ತನೆಯ ದಿನ. ರಾಜಕೀಯದವರಿಗೆ ವಿಶೇಷ ದಿನ. ಸ್ನೇಹಿತನ ಭೇಟಿ. ಗೆಳೆಯರೊಂದಿಗೆ ಬಿಗುಮಾನ ಬಿಟ್ಟು ವ್ಯವಹರಿಸಿ. ಶುಭಸಂಖ್ಯೆ:5
ಧನುಸ್ಸು: ಕುಟುಂಬ ಸಮಸ್ಯೆಗಳಿಗೆ ಪ್ರತಿಕ್ರಿಯೆ ಬೇಡ. ಶುಭ ಕಾರ್ಯ ವಿಳಂಬ. ಅವಿವಾಹಿತರಿಗೆ ಶುಭ. ಸಂತಾನ ಅಪೇಕ್ಷಿತರಿಗೆ ಸಂತಸ. ಶುಭಸಂಖ್ಯೆ: 9
ಮಕರ: ಆಸ್ತಿ ವಿವಾದಗಳು ಸೌಹಾರ್ದದಿಂದ ಪರಿಹಾರ. ಹಣಕಾಸಿನ ಮುಗ್ಗಟ್ಟು. ಕಿರಿಯರಿಂದ ಕಿರಿಕಿರಿ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ಶುಭಸಂಖ್ಯೆ: 6
ಕುಂಭ: ಚೈತನ್ಯದಾಯಕ ದಿನ. ರೋಗ ಉಪಶಮನ. ಕಚೇರಿಯಲ್ಲಿ ಒತ್ತಡ. ದೂರಪ್ರಯಾಣ ಸಾಧ್ಯತೆ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 8
ಮೀನ: ಸಾಲದ ಸಮಸ್ಯೆಗೆ ಮುಕ್ತಿ. ಗೃಹ ಆರಂಭಕ್ಕೆ ಸಿದ್ಧತೆ. ನಿವೇಶನ ಖರೀದಿಗೆ ಆರ್ಥಿಕ ಸಮಸ್ಯೆ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 3