ನ್ಯೂಸ್

ನಿತ್ಯ ಭವಿಷ್ಯ: ಮೂಗಿನ ತುದಿಯಲ್ಲೇ ಕೋಪ ಇರುವವರು ಇಂದು ಸುಮ್ಮನಿದ್ದು ಬಿಡಿ

ಮೇಷ: ಮಕ್ಕಳು ಸ್ವಲ್ಪ ಮಟ್ಟಿಗೆ ಕಿರಿಕಿರಿ ಮಾಡುತ್ತಾರೆ. ಹಿರಿಯತನವನ್ನು ತೋರಿಸಿ ಗಂಭೀರವಾಗಿ ವರ್ತಿಸಿದರೆ ನಿಮಗೆ ಕ್ಷೇಮವಿದೆ. ಶುಭಸಂಖ್ಯೆ: 7

ವೃಷಭ: ಹಗಲುಗನಸುಗಳ ಹಿಂದೆ ಬಿದ್ದಿದ್ದೀರಿ. ವಾಸ್ತವಕ್ಕೆ ಪ್ರಾಮುಖ್ಯತೆಯನ್ನು ನೀಡಿ. ಪರಿಶ್ರಮದಿಂದಲೇ ಲಾಭವಿದೆ. ಶುಭಸಂಖ್ಯೆ: 8

ಮಿಥುನ: ನಿರಂತರ ಕೆಲಸಕಾರ್ಯ, ಕಿರಿಕಿರಿಗಳಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದೀತು. ವಿಶ್ರಾಂತಿಗೂ ಅವಕಾಶ ಇರಲಿ. ಶುಭಸಂಖ್ಯೆ: 6

ಕಟಕ: ಮಹಾಲಕ್ಷ್ಮಿದೇವಿಯನ್ನು ಶ್ರೀಸೂಕ್ತದಿಂದ ಸ್ತುತಿಸಿ. ಇದರಿಂದಾಗಿ ಧನಲಾಭಕ್ಕೆ ಸೂಕ್ತ ಅನುಕೂಲ ಉಂಟಾಗಲಿದೆ. ಶುಭಸಂಖ್ಯೆ: 5

ಸಿಂಹ: ಮೇಲಧಿಕಾರಿಗಳು ನಿಮ್ಮ ಬಗ್ಗೆ ಸಿಟ್ಟಾಗಬಹುದು. ಪ್ರತಿಯಾಗಿ ಒರಟು ಉತ್ತರಗಳನ್ನು ನೀಡದಿರಿ. ಕ್ರಿಯಾಶೀಲತೆಯಿಂದ ಜಯವಿದೆ. ಶುಭಸಂಖ್ಯೆ: 1

ಕನ್ಯಾ: ಮೂಗಿನ ತುದಿಯಲ್ಲೇ ಇರುವ ಕೋಪದಿಂದ ಕಷ್ಟ ಅನುಭವಿಸಿದ್ದೀರಿ. ಇಷ್ಟಾದ ಮೇಲೆಯೂ ಸುಮ್ಮಸುಮ್ಮನೆ ಸಿಟ್ಟಾಗಬೇಡಿ. ಶುಭಸಂಖ್ಯೆ: 2

ತುಲಾ: ತೀರ ಹತ್ತಿರದವರೇ ಗಲಾಟೆ ಮಾಡುತ್ತಾರೆ. ನಗುನಗುತ್ತಲೇ ಬಿಕ್ಕಟ್ಟನ್ನು ಎದುರಿಸಿಬಿಡಿ. ಶಾಂತಿಯ ಸನ್ಮಾರ್ಗ ಸಿಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ನ್ಯಾಯ ಹಾಗೂ ಅನ್ಯಾಯಗಳಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳುವಂತಹ ಸಂದಿಗ್ಧತೆ ಎದುರಾಗಲಿದೆ. ಸತ್ಯನಿಷ್ಠರಾಗಿರಿ. ಶುಭಸಂಖ್ಯೆ: 3

ಧನುಸ್ಸು: ಅಗ್ನಿಪರೀಕ್ಷೆ ಎದುರಿಸಬೇಕಾದ ಸಂದರ್ಭ ಬರಲಿದೆ. ಪ್ರಾಮಾಣಿಕತೆಯೇ ನಿಮ್ಮನ್ನು ರಕ್ಷಿಸಲಿದೆ. ಭಯಪಡಬೇಡಿ. ಶುಭಸಂಖ್ಯೆ: 9

ಮಕರ: ಪ್ರತ್ಯಕ್ಷ ಕಂಡರೂ ಪರಾಮರ್ಶೆ ಮಾಡಿ ನೋಡಲೇಬೇಕು. ಇಲ್ಲವಾದರೆ ನಿಮಗೇ ತೊಂದರೆ ಉಂಟಾಗಬಹುದು. ಶುಭಸಂಖ್ಯೆ: 7

ಕುಂಭ: ಬದುಕಿನ ಹೊಸ ದಾರಿಯ ಕಡೆಗೆ ಸಾಗಲು ಕುಟುಂಬದ ಸದಸ್ಯರಿಂದ ವಿಶೇಷ ಬೆಂಬಲ, ಒತ್ತಾಸೆಗಳು ಒದಗಿಬರಲಿವೆ. ಶುಭಸಂಖ್ಯೆ: 8

ಮೀನ: ಹಲವರು ಬಂದು ತಲೆನೋವು ತರಬಹುದು. ಅಂಥವರನ್ನು ನಿಧಾನವಾಗಿ ಜಾಣ್ಮೆಯಿಂದ ದೂರಕ್ಕೆ ಕಳಿಸಿಬಿಟ್ಟರೆ ಕ್ಷೇಮವಿದೆ. ಶುಭಸಂಖ್ಯೆ: 6