ಮೇಷ: ನಿಮ್ಮ ಉತ್ಕರ್ಷವನ್ನು ಸಹಿಸಲು ಸಾಧ್ಯವಾಗದ ಜನರು ಸೇರಿ ಸುಮ್ಮನೆ ಕಿರಿಕಿರಿ ಮಾಡಬಹುದು. ಸಾಕಷ್ಟು ಎಚ್ಚರಿಕೆ ಇದ್ದೇ ಇರಲಿ. ಶುಭಸಂಖ್ಯೆ: 8
ವೃಷಭ: ಸಹಾಯಕರು ನಿಮ್ಮ ವಿರುದ್ಧ ತಿರುಗಿಬೀಳುವ ಸಾಧ್ಯತೆಗಳಿವೆ. ಸಾಧ್ಯವಾದಷ್ಟು ಕುಶಲತೆಯಿಂದ ಅವರೆಲ್ಲರನ್ನೂ ನಿಭಾಯಿಸಿ. ಶುಭಸಂಖ್ಯೆ: 4
ಮಿಥುನ: ಈಗಿನ ಗೆಲುವಿನ ಬಗೆಗೆ ಸಂತೋಷ, ಸಂಭ್ರಮ ಇದ್ದೇ ಇರಲಿ. ಆದರೂ ಎದುರಾಳಿಗಳನ್ನು ಮಾತ್ರ ಹಗುರವಾಗಿ ಕಾಣುವುದು ಬೇಡ. ಶುಭಸಂಖ್ಯೆ: 9
ಕಟಕ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಮಾಡುವಂತಹ ಹಿತಶತ್ರುಗಳ ವಿರುದ್ಧವಾಗಿ ವಿಜಯವನ್ನು ಸಾಧಿಸಲಿದ್ದೀರಿ. ಶುಭಸಂಖ್ಯೆ: 2
ಸಿಂಹ: ಕಚೇರಿಯಲ್ಲಿ ತಾಳ್ಮೆ, ಸಮಯಾವಧಾನಗಳಿಂದ ವಿಶೇಷ ಜನಪ್ರಿಯತೆ ಗಳಿಸಲಿದ್ದೀರಿ. ಆರೋಗ್ಯದತ್ತ ಲಕ್ಷ್ಯ ಹರಿಸುವುದು ಉತ್ತಮ. ಶುಭಸಂಖ್ಯೆ: 6
ಕನ್ಯಾ: ಸುಮ್ಮನೆ ಖರ್ಚಿನ ದಾರಿಗಳನ್ನು ಹುಡುಕುತ್ತ ಹೊರಟಿದ್ದೀರಿ. ಆದರೆ ದಿಢೀರ್ ಧನಲಾಭವೇನೂ ಉಂಟಾಗದು. ತಾಳ್ಮೆ ಇರಲಿ. ಶುಭಸಂಖ್ಯೆ: 3
ತುಲಾ: ಹರಿದುಬರುವಂತಹ ನಿರಾಶೆಯ ಅಲೆಗಳು ಕಂಗೆಡಿಸಲಿವೆ. ವಿಶೇಷ ಆತ್ಮಸ್ಥೈರ್ಯದಿಂದ ಸೋಲುಗಳನ್ನು ಹಿಮ್ಮೆಟ್ಟಿಸಿ ಗೆಲ್ಲಿ. ಶುಭಸಂಖ್ಯೆ: 7
ವೃಶ್ಚಿಕ: ಅನ್ಯಾಯಗಳನ್ನು ಸಹಿಸಲಾರದ ನೀವು ಹೆಚ್ಚಿನ ಆತ್ಮವಿಶ್ವಾಸದಿಂದ ಶತ್ರುಗಳನ್ನು ಎದುರಿಸಬೇಕು. ಇದರಿಂದ ಮುಂದೆ ಒಳಿತಿದೆ. ಶುಭಸಂಖ್ಯೆ: 5
ಧನಸ್ಸು: ಹಲವು ಕಷ್ಟಕೋಟಲೆಗಳ ನಡುವೆಯೂ ನೀವು ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವಂಥ ಛಲವನ್ನು ತೋರಿಸುವಿರಿ. ಶುಭಸಂಖ್ಯೆ: 1
ಮಕರ: ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಕ್ರಿಯಾಶೀಲತೆ ನಿಮಗಿದ್ದಲ್ಲಿ ದೊಡ್ಡ ಪ್ರಮಾಣದ ಸಾಧನೆಯನ್ನೇ ಮಾಡುವಂಥ ಅವಕಾಶವಿದೆ. ಶುಭಸಂಖ್ಯೆ: 9
ಕುಂಭ: ನಿರೀಕ್ಷೆ, ಕನಸು, ಗೆದ್ದೇ ಗೆಲ್ಲುವೆ ಎಂಬಂತಹ ಧನಾತ್ಮಕ ಧೈರ್ಯದಿಂದ ಯಶಸ್ಸನ್ನು ಗಳಿಸಲು ಬೇಕಾದ ದಾರಿ ಕಾಣಿಸಲಿದೆ. ಶುಭಸಂಖ್ಯೆ: 4
ಮೀನ : ಹಳೆಯ ಸ್ನೇಹಿತರನ್ನು ಸಂಧಿಸಲಿದ್ದೀರಿ. ಮಾತಿನ ಕೌಶಲಗಳ ಮೂಲಕವಾಗಿ ಅವರಿಂದ ನೈತಿಕವಾದ ಬೆಂಬಲವನ್ನು ಗಳಿಸಿಕೊಳ್ಳಿ. ಶುಭಸಂಖ್ಯೆ: 8