ನ್ಯೂಸ್

ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ವೈಮನಸ್ಸು

ಮೇಷ: ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬದ ನೆಮ್ಮದಿ ಕೆಡಿಸುತ್ತವೆ. ಯೋಚಿಸಿ ನಿರ್ಧರಿಸಿ. ಮಕ್ಕಳಿಂದ ಕಿರಿಕಿರಿ. ಶುಭಸಂಖ್ಯೆ: 1

ವೃಷಭ: ಆತ್ಮೀಯ ಸ್ನೇಹಿತನ ಸಲಹೆಯನ್ನು ಪಾಲಿಸಿ. ಸಹೋದ್ಯೋಗಿಗಳಿಂದ ಒತ್ತಡ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9

ಮಿಥುನ: ಸಾರ್ವಜನಿಕ ರಂಗದಲ್ಲಿ ಜನಬೆಂಬಲ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ ದೊರೆಯಲಿದೆ. ಸಂಗೀತಗಾರರಿಗೆ ಶುಭ ದಿನ. ಶುಭಸಂಖ್ಯೆ: 5

ಕಟಕ: ಉನ್ನತ ಶಿಕ್ಷಣದ ಪ್ರಯತ್ನದಲ್ಲಿ ಇರುವವರಿಗೆ ಶುಭ. ಸರ್ಕಾರಿ ರಂಗದಲ್ಲಿ ಕಾರ್ಯಸಿದ್ದಿ. ಭೂ ವಿವಾದ ಅಂತ್ಯ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 2

ಸಿಂಹ: ಕುಟುಂಬದವರ ಕಡೆ ಗಮನ ಕೊಡಿ. ಕಾರ್ಯದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 6

ಕನ್ಯಾ: ಕಲಾವಿದರಿಗೆ ಪುರಸ್ಕಾರ. ಗಾಯಕರಿಗೆ ಶುಭದಿನ. ರೈತರ ಪ್ರಯತ್ನಕ್ಕೆ ವಿಶೇಷ ಫಲ. ದಿನಾಂತ್ಯದಲ್ಲಿ ಆಯಾಸ ಕಾಡಬಹುದು. ಶುಭಸಂಖ್ಯೆ: 8

ತುಲಾ: ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರಿ. ಗೊಂದಲಕ್ಕೆ ಅವಕಾಶ ಬೇಡ. ಮಕ್ಕಳ ಭವಿಷ್ಯದ ಚಿಂತೆ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 2

ವೃಶ್ಚಿಕ: ಪಿತ್ರಾರ್ಜಿತ ಆಸ್ತಿಗಾಗಿ ಸಹೋದರರೊಂದಿಗೆ ಮನಸ್ತಾಪ. ಕಚೇರಿಯ ಹಿರಿಯರಿಂದ ಛೀಮಾರಿ. ಸ್ನೇಹಿತನಿಂದ ಸಮಾಧಾನ. ಶುಭಸಂಖ್ಯೆ: 6

ಧನಸ್ಸು: ಧಾರ್ವಿುಕ ವ್ಯಕ್ತಿಗಳ ಭೇಟಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಸಂಸೆ. ವ್ಯಾಪಾರದಲ್ಲಿ ಲಾಭ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 4

ಮಕರ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಪ್ರಮುಖ ನಿರ್ಧಾರ. ಉನ್ನತ ವಿದ್ಯಾಭ್ಯಾಸಕ್ಕೆ ಮಗಳ ವಿದೇಶ ಪ್ರಯಾಣ. ಶುಭಸಂಖ್ಯೆ: 2

ಕುಂಭ: ಕೂಡಿಟ್ಟ ಹಣದ ನಷ್ಟ. ಸಂಗಾತಿಯೊಂದಿಗೆ ವೈಮನಸ್ಯ. ದೂರದ ಬಂಧುಗಳ ಆಗಮನ. ವ್ಯಾಪಾರದಲ್ಲಿ ಅಧಿಕ ನಷ್ಟ ಶುಭಸಂಖ್ಯೆ: 3

ಮೀನ : ಆತ್ಮೀಯರ ಆಗಮನ. ಕೃಷಿಕರಿಗೆ ನಷ್ಟ. ಹಳೆಯ ಸ್ನೇಹಿತನ ಭೇಟಿ. ಬಂಧುಗಳೊಂದಿಗೆ ಭೋಜನ. ಸಂಜೆಯ ಹೊತ್ತಿಗೆ ಶುಭವಾರ್ತೆ. ಶುಭಸಂಖ್ಯೆ: 7