ನ್ಯೂಸ್

ಈ ರಾಶಿಯವರಿಗೆ ಇಂದು ಸಂಗಾತಿಯ ಸಲಹೆ ಕೇಳುವುದರಿಂದ ಒಳಿತಾಗಲಿದೆ..

ಮೇಷ: ವ್ಯಾವಹಾರಿಕ ಮಾರ್ಗದಲ್ಲಿ ಗೋಜಲುಗಳಿವೆ.

ಆದರೂ ದುರ್ಗಾಂಬಿಕೆಯ ಆಶೀರ್ವಾದದಿಂದ

ಕಾರ್ಯಸಿದ್ಧಿ ಇದೆ. ಶುಭಸಂಖ್ಯೆ: 4

ವೃಷಭ: ಅಕ್ಕಪಕ್ಕದವರೊಡನೆ ಮನಸ್ತಾಪ

ಸಂಭವಿಸಬಹುದು. ಆದರೆ ಕೋಪಕ್ಕೆ ಬುದ್ಧಿ

ಕೊಡದೆ ಶಾಂತಿಮಂತ್ರ ಪಠಿಸಿ. ಶುಭಸಂಖ್ಯೆ: 6

ಮಿಥುನ: ಸಣ್ಣ ಕಾರಣಕ್ಕಾಗಿ ಮನೆಯಲ್ಲಿ ಅಶಾಂತಿ

ಸಂಭವಿಸೀತು. ಎಲ್ಲೆಡೆ ಗೆಲ್ಲುವ ಹಠ ಬೇಡ.

ಸೋತೇ ಜಯ ಗಳಿಸಿ. ಶುಭಸಂಖ್ಯೆ: 9

ಕಟಕ: ಭೂವ್ಯವಹಾರದ ಕ್ಷೇತ್ರದವರಿಗೆ ಲಾಭವಿದೆ.

ಮನೆಯ ಕಿರಿಕಿರಿಗಳನ್ನು ಸಹಿಸಿಕೊಳ್ಳುವ

ತಾಳ್ಮೆಯನ್ನು ಪ್ರದರ್ಶಿಸಿ. ಶುಭಸಂಖ್ಯೆ: 2

ಸಿಂಹ: ದಿನದ ಆರಂಭದಲ್ಲಿ ಗುರುಸ್ತುತಿ

ಮಾಡಿ ಕೆಲಸಕ್ಕೆ ತೊಡಗಿ. ಆಕಸ್ಮಿಕ

ಕಷ್ಟಗಳನ್ನು ಧೈರ್ಯದಿಂದ ಎದುರಿಸಬಹುದು. ಶುಭಸಂಖ್ಯೆ: 7

ಕನ್ಯಾ: ಮಕ್ಕಳು ಸಮಸ್ಯೆ ತಂದೊಡ್ಡಿಯಾರು.

ಅವರಿಗೆ ಮಾರ್ಗದರ್ಶನ ಮಾಡಿ. ಸಂಗಾತಿಯ

ಸಲಹೆಗಳಿಂದ ಒಳಿತಿದೆ. ಶುಭಸಂಖ್ಯೆ: 3

ತುಲಾ: ಆಸ್ತಿಯ ವಿಚಾರದಲ್ಲಿ ಅಶಾಂತಿ

ಉಂಟಾಗಬಹುದು. ನ್ಯಾಯವಾದಿಗಳ ಭೇಟಿಯಿಂದ

ಯಶಸ್ಸಿನ ಲಭ್ಯತೆ ಹೆಚ್ಚು. ಶುಭಸಂಖ್ಯೆ: 5

ವೃಶ್ಚಿಕ: ರಾಜಕೀಯ ಕ್ಷೇತ್ರದವರಿಗೆ ಅಧಿಕಾರ

ಪ್ರಾಪ್ತಿ. ಸಂಗಾತಿಯೊಡನೆ ಮನಸ್ತಾಪ

ಸಂಭವಿಸಬಹುದು. ಜಾಗ್ರತೆ ವಹಿಸಿ. ಶುಭಸಂಖ್ಯೆ: 1

ಧನಸ್ಸು: ವಿಮೆಗಾಗಿ ಹೆಚ್ಚಿನ ಹಣ ವ್ಯಯವಾಗುವ

ಲಕ್ಷಣಗಳಿವೆ. ಆತ್ಮೀಯ ಗೆಳೆಯರು

ಅನುಕೂಲಕ್ಕೆ ಒದಗಿಬರಲಿದ್ದಾರೆ. ಶುಭಸಂಖ್ಯೆ: 8

ಮಕರ: ಆಪ್ತರ ಬಳಿ ಒತ್ತಡಗಳನ್ನು ಹೇಳಿಕೊಳ್ಳಿ.

ವಿದ್ಯಾಭ್ಯಾಸಕ್ಕೆ ಖರ್ಚುಗಳಾಗಬಹುದು.

ಮಹಾಗಣಪತಿ ಸ್ತುತಿ ಮಾಡಿ. ಶುಭಸಂಖ್ಯೆ: 6

ಕುಂಭ: ಆಮದು ರಫ್ತುಗಳ ವಹಿವಾಟಿಗೆ

ಸಂಬಂಧಿಸಿದ ಮುಖ್ಯ ನಿರ್ಧಾರ ಮುಂದೂಡಿ.

ಮುಂದೆ ಒಳ್ಳೆಯದಾಗಲಿದೆ. ಶುಭಸಂಖ್ಯೆ: 4

ಮೀನ: ಷೇರುಗಳಲ್ಲಿ ಹಣಹೂಡುವ ಇಚ್ಛೆ

ಮೂಡಿದರೂ ಹೆಚ್ಚು ಬಂಡವಾಳ ಬೇಡ.

ಆಸ್ತಿಯ ವ್ಯಾಪಾರ ಕುದುರಲಿದೆ. ಶುಭಸಂಖ್ಯೆ 9