ಮೇಷ: ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಗೃಹ ಆರಂಭಕ್ಕೆ ಸಿದ್ಧತೆ ಮಾಡುವಿರಿ. ಪಾಲುದಾರಿಕೆ ಉದ್ಯಮದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 8
ವೃಷಭ: ಜನ್ಮರಾಶಿಯ ರಾಹುವಿನಿಂದ ಅನಾರೋಗ್ಯ ಸಮಸ್ಯೆ. ಸ್ನೇಹಿತರಿಗಾಗಿ ದುಂದುವೆಚ್ಚ. ಕೃಷಿಕರಿಗೆ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 2
ಮಿಥುನ: ಕಬ್ಬಿಣ ವ್ಯಾಪಾರಿಗಳಿಗೆ ಧನಲಾಭ. ಉದ್ಯೋಗಸ್ಥ ಮಹಿಳೆಯರು ಎಚ್ಚರಿಕೆಯಿಂದಿರಿ. ಅಮೂಲ್ಯ ವಸ್ತು ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 9
ಕಟಕ: ನಿಮ್ಮ ಶ್ರಮಕ್ಕೆ ಸರಿಯಾದ ಫಲ ಸಿಗಲಿದೆ. ಸತ್ಪುರುಷರ ದರ್ಶನ. ಕುಟುಂಬದಲ್ಲಿ ಕಿರಿ-ಕಿರಿ. ಆರ್ಥಿಕ ಮುಗ್ಗಟ್ಟು ಕಾಣಿಸಬಹುದು. ಶುಭಸಂಖ್ಯೆ: 2
ಸಿಂಹ: ನಿರೀಕ್ಷೆಯಲ್ಲಿದ್ದ ಕಾರ್ಯದಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ಪ್ರಯತ್ನ ಸಫಲ. ಸಂಗಾತಿಯ ಸಲಹೆಯಿಂದ ಪ್ರಗತಿ. ಶುಭಸಂಖ್ಯೆ: 6
ಕನ್ಯಾ: ವಿದ್ಯಾರ್ಥಿಗಳ ಗುರಿಸಾಧನೆಯಲ್ಲಿ ಮುನ್ನಡೆ. ರಾಜಕೀಯದವರಿಗೆ ಹುದ್ದೆ ಕಳಕೊಳ್ಳುವ ಭೀತಿ. ವೈದ್ಯರಿಗೆ ಬಡ್ತಿ ಸಿಗುವ ಸಂಭವ. ಶುಭಸಂಖ್ಯೆ: 8
ತುಲಾ: ನಟರಿಗೆ ಸಾಹಿತಿಗಳಿಗೆ ಅಪೂರ್ವ ಅವಕಾಶ. ಆರ್ಥಿಕ ಸ್ಥಿತಿ ಸುಧಾರಣೆ. ಸ್ತ್ರೀಯರಿಂದ ಅಪಾಯ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 7
ವೃಶ್ಚಿಕ: ಕಚೇರಿಯಲ್ಲಿ ಜವಾಬ್ದಾರಿಯುತ ಕೆಲಸದ ಹೊಣೆ. ಖಾಸಗಿ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ. ಚಿಕ್ಕ ವ್ಯಾಪಾರಸ್ಥರಿಗೆ ಧನ ನಷ್ಟ. ಶುಭಸಂಖ್ಯೆ: 3
ಧನುಸ್ಸು: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಸಮಾಜದಲ್ಲಿ ಗೌರವ, ಮನ್ನಣೆ ಪ್ರಾಪ್ತಿ. ಬಂದು ಬಾಂಧವರಲ್ಲಿ ವಿಶ್ವಾಸ ಹೆಚ್ಚುವುದು. ಶುಭಸಂಖ್ಯೆ: 5
ಮಕರ: ಮಗನ ವಿವಾಹಕ್ಕೆ ಅಡಚಣೆ. ಹಿತಶತ್ರುಗಳಿಂದ ಅಪಪ್ರಚಾರ. ಕುಟುಂಬದಲ್ಲಿ ಘರ್ಷಣೆ. ನ್ಯಾಯಾಲಯದ ವಿವಾದ ಇತ್ಯರ್ಥ. ಶುಭಸಂಖ್ಯೆ: 9
ಕುಂಭ: ಷೇರು ವ್ಯಾಪಾರದಲ್ಲಿ ಲಾಭ. ಸಾಲ ಪಡೆದವರಿಂದ ತೊಂದರೆ. ವಿದೇಶ ಪ್ರವಾಸ ಯೋಗ. ಮಹಿಳೆಯರಿಗೆ ವಿಶೇಷ ಧನಲಾಭ. ಶುಭಸಂಖ್ಯೆ: 1
ಮೀನ: ಸೇವಾವೃತ್ತಿಯವರಿಗೆ ಲಾಭ. ವೃದ್ಧರ ಸೇವೆ ಮಾಡಿ. ಧಾರ್ವಿುಕ ಚಟುವಟಿಕೆಯಿಂದ ನೆಮ್ಮದಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 4