ಮೇಷ: ಮೇಲಧಿಕಾರಿಗಳ ಕಿರಿಕಿರಿ. ಸಹೋದ್ಯೋಗಿಗಳ ಜತೆ ವಾಗ್ವಾದ. ವ್ಯಾಪಾರಸ್ಥರಿಗೆ ನಷ್ಟ ದಿನಾಂತ್ಯದಲ್ಲಿ ಆಯಾಸ ಶುಭಸಂಖ್ಯೆ: 8
ವೃಷಭ: ಹೊಸ ವ್ಯಾಪಾರಕ್ಕೆ ಚಾಲನೆ. ಭೂಮಿ ಖರೀದಿಗೆ ನಿರ್ಧಾರ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಕಿರಿಕಿರಿ. ಚರ್ಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 2
ಮಿಥುನ: ಅಷ್ಟಮದ ಗುರು ಕಾರ್ಯನಾಶಕ್ಕೆ ಕಾರಣ. ಕೆಲಸ ಕಳೆದುಕೊಳ್ಳುವ ಭೀತಿ. ಆರ್ಥಿಕ ಸಮಸ್ಯೆ ಆದೀತು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 9
ಕಟಕ: ನಂಬಿದವರಿಂದಲೇ ಮೋಸ. ಸುಬ್ರಹ್ಮಣ್ಯನನ್ನು ಆರಾಧಿಸಿ. ಅನಾರೋಗ್ಯ ಹೆಚ್ಚಾಗಬಹುದು. ದಿನಾಂತ್ಯದಲ್ಲಿ ಶುಭವಾರ್ತೆ ಶುಭಸಂಖ್ಯೆ: 6
ಸಿಂಹ: ಹಿತ ಶತ್ರುಗಳ ಕಾಟ. ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ. ವ್ಯಾಪಾರದಲ್ಲಿ ಅಧಿಕ ನಷ್ಟ. ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 4
ಕನ್ಯಾ: ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ವಿದೇಶದಿಂದ ಮಗನ ಆಗಮನದ ಸುದ್ದಿ. ಶುಭಸಂಖ್ಯೆ: 1
ತುಲಾ: ಮನೆಯಲ್ಲಿ ಸಡಗರ. ವಿವಾಹದ ಶುಭಸುದ್ದಿ. ಹಲವು ದಿನಗಳಿಂದ ಆಗದೇ ಉಳಿದ ಕೆಲಸಕ್ಕೆ ಚಾಲನೆ. ಶುಭಸಂಖ್ಯೆ: 3
ವೃಶ್ಚಿಕ: ಸಹೋದರರಿಂದ ಸಹಾಯ. ಮಗಳ ಮದುವೆಗೆ ಚಾಲನೆ. ಮೇಲಧಿಕಾರಿ ಹೇಳಿದ ಕೆಲಸದ ದಕ್ಷ ನಿರ್ವಹಣೆ. ದಿನಾಂತ್ಯಕ್ಕೆ ಸುಸ್ತು. ಶುಭಸಂಖ್ಯೆ: 2
ಧನಸ್ಸು: ಮಾತು ಮುತ್ತಿನಂತೆ ಇರಲಿ. ಯೋಚಿಸಿ ಮಾತನಾಡಿ. ಹಣ ಉಳಿಕೆಗೆ ಅವಕಾಶ. ಸೈಟ್ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6
ಮಕರ: ನಿಮ್ಮ ಕಾರ್ಯ ನೈಪುಣ್ಯಕ್ಕೆ ಪುರಸ್ಕಾರ. ಕೃಷಿಕರಿಗೆ ವಿಶೇಷ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸ್ನೇಹಿತನ ಸಲಹೆ. ಶುಭಸಂಖ್ಯೆ: 7
ಕುಂಭ: ಧನ ನಷ್ಟ. ವ್ಯಾಪಾರದಲ್ಲಿ ಮೋಸ ಹೋಗುತ್ತೀರಿ. ನಂಬಿದವರಿಂದಲೇ ದ್ರೋಹ. ಸಹೋದರಿಯ ಮನೆಗೆ ಭೇಟಿ. ಶುಭಸಂಖ್ಯೆ: 5
ಮೀನ : ಕೆಲಸಗಾರರಿಂದ ಪ್ರತಿರೋಧ. ಮನಸ್ಸಿನಲ್ಲಿ ಅವ್ಯಕ್ತ ಭಯ. ಪರಮೇಶ್ವರನನ್ನು ಸ್ತುತಿಸಿ. ಸಂಜೆಯ ಹೊತ್ತಿಗೆ ಶುಭವಾರ್ತೆ ನಿರೀಕ್ಷೆ. ಶುಭಸಂಖ್ಯೆ: 7