ನ್ಯೂಸ್

ಈ ರಾಶಿಯವರಿಗಿಂದು ಅಡೆತಡೆಗಳ ಮಧ್ಯೆಯೂ ಸಾಧಿಸಿದ ತೃಪ್ತಿ: ನಿತ್ಯಭವಿಷ್ಯ

ಮೇಷ: ಕಬ್ಬಿಣ ವ್ಯಾಪಾರಿಗಳಿಗೆ ಕಾರ್ವಿುಕರಿಂದ ತೊಂದರೆ. ಹಣಕಾಸು ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ವಾಹನ ರಿಪೇರಿ. ಶುಭಸಂಖ್ಯೆ: 1

ವೃಷಭ: ತರಕಾರಿ ವ್ಯಾಪಾರಿಗಳಿಗೆ ಲಾಭ. ಹಣಕಾಸಿನ ಮುಗ್ಗಟ್ಟು. ಅನಿರೀಕ್ಷಿತ ಅತಿಥಿ ಆಗಮನ. ಸ್ನೇಹಿತ ನಿಂದ, ಸ್ತ್ರೀಯರಿಂದ ಸಹಾಯ. ಶುಭಸಂಖ್ಯೆ: 6

ಮಿಥುನ: ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ವೈದ್ಯ ವೃತ್ತಿಯಲ್ಲಿ ಸನ್ಮಾನ. ಬರಹಗಾರರಿಗೆ ಕೀರ್ತಿ ಪ್ರಾಪ್ತಿ. ಸಾಲ ತೀರಿಸುವಿರಿ. ಶುಭಸಂಖ್ಯೆ: 9

ಕಟಕ: ಕೌಟುಂಬಿಕ ವ್ಯವಹಾರದಲ್ಲಿ ಅನ್ಯರ ಹಸ್ತಕ್ಷೇಪ. ಪತಿ-ಪತ್ನಿಯರಲ್ಲಿ ವಿರಸ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ದೊರೆಯಲಿದೆ. ಶುಭಸಂಖ್ಯೆ: 9

ಸಿಂಹ: ಅಪರಿಚಿತರಿಂದ ಮೋಸ ಹೋಗುವಿರಿ. ದುಂದು ವೆಚ್ಚ ಮಾಡಬೇಡಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಸ್ವಲ್ಪ ಹೆಚ್ಚೇ ಕಾಡಲಿದೆ. ಶುಭಸಂಖ್ಯೆ: 2

ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಬೆಂಬಲ. ಹಿತಶತ್ರುಗಳಿಂದ ತೊಂದರೆ. ಶತ್ರು ವೃದ್ಧಿ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಶುಭಸಂಖ್ಯೆ: 5

ತುಲಾ: ವ್ಯಾಪಾರದ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ವ್ಯವಸಾಯಗಾರರಿಗೆ ನಷ್ಟ. ಆತ್ಮೀಯರ. ವಿಯೋಗವಾಗುವ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ. ಅನಿರೀಕ್ಷಿತ ಖರ್ಚು ಮಾಡಬೇಕಾಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆತು ಸಂತಸ. ಶುಭಸಂಖ್ಯೆ: 8

ಧನುಸ್ಸು: ಮನೆ ಕೆಲಸ ಪೂರ್ಣವಾಗಲಿದೆ. ಒಂದು ವರ್ಗದಲ್ಲಿ ಅವಮಾನ. ಶತ್ರುಗಳಿಂದ ತೊಂದರೆ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 6

ಮಕರ: ಅಡೆತಡೆಗಳ ಮಧ್ಯೆಯೂ ಸಾಧಿಸಿದ ತೃಪ್ತಿ. ಸಹೋದ್ಯೋಗಿಗಳಿಂದ ದೂರು. ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 3

ಕುಂಭ: ಉತ್ತಮ ವ್ಯಾಪಾರ ಅಭಿವೃದ್ಧಿ. ವ್ಯವಹಾರದಲ್ಲಿ ವಂಚನೆ. ಸಹೋದ್ಯೋಗಿಗಳ ಸಹಕಾರ. ಒತ್ತಡ ಅನುಭವಿಸಲೇಬೇಕಾದ ಸ್ಥಿತಿ. ಶುಭಸಂಖ್ಯೆ: 9

ಮೀನ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ನಿವೇಶನ ಖರೀದಿ ಸಾಧ್ಯತೆ. ತೀರ್ಥಯಾತ್ರೆಯಿಂದ ಮನಸಿಗೆ ನೆಮ್ಮದಿ. ಶುಭಸಂಖ್ಯೆ: 9