ಮೇಷ: ಕೆಲಸದ ಯೋಜನೆಗಳಲ್ಲಿ ಒಳ್ಳೆಯ ಲಾಭವಿದೆ. ಉತ್ತಮ ಆದಾಯ ದೊರೆಯುವುದು. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 8
ವೃಷಭ: ದೂರ ಪ್ರಯಾಣ ಮಾಡಬೇಕಾಗುವುದು. ಆರ್ಥಿಕತೆ ಉತ್ತಮವಾಗಿರುವುದಿಲ್ಲ. ಅಗತ್ಯ ಕೆಲಸ ಮೊದಲು ಮಾಡಿಕೊಳ್ಳಿ. ಶುಭಸಂಖ್ಯೆ: 9
ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಮುಂದುವರಿಯಲಿದೆ. ಅನಾರೋಗ್ಯ ಕಾಡುವುದು. ವೈದ್ಯರ ಸಲಹೆ ಅಗತ್ಯ. ವಿವಾಹ ಯೋಗ. ಶುಭಸಂಖ್ಯೆ: 1
ಕಟಕ: ವ್ಯವಹಾರದಲ್ಲಿ ಶುಭದಾಯಕ ದಿನ. ಸಂಗಾತಿಯೊಡನೆ ಪ್ರವಾಸ ಕೈಗೊಳ್ಳುವಿರಿ. ಮಹಿಳೆಯರಿಗೆ ಅನಿರೀಕ್ಷಿತ ಗೌರವ ಲಭ್ಯ. ಶುಭಸಂಖ್ಯೆ: 3
ಸಿಂಹ: ದೇವತಾರಾಧನೆ ಮಾಡುವಿರಿ. ನೂತನ ಮಿತ್ರರ ಭೇಟಿಯಾಗಿ ಉಲ್ಲಾಸದ ಕ್ಷಣಗಳು. ಮನಸ್ಸಿಗೆ ಮಂಕು ಕವಿದ ಭಾವ ಕಾಡುವುದು. ಶುಭಸಂಖ್ಯೆ: 9
ಕನ್ಯಾ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸಿನ ಸಮಾಧಾನ. ಕೆಲಸಗಳಲ್ಲಿ ಜಯಗಳಿಸುವಿರಿ. ವಿವಾಹಾಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ಬರುವುದು. ಶುಭಸಂಖ್ಯೆ: 4
ತುಲಾ: ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ದೊರೆತು ನೆಮ್ಮದಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 8
ವೃಶ್ಚಿಕ: ಆರೋಗ್ಯದ ಕಡೆ ಗಮನ ಹರಿಸಲೇಬೇಕಾದ ದಿನ. ದ್ರವ್ಯಲಾಭವಿದೆ. ಉದ್ಯೋಗದಲ್ಲಿ ತೊಂದರೆ ಆಗಬಹುದು, ಜಾಗ್ರತೆಯಿಂದಿರಿ. ಶುಭಸಂಖ್ಯೆ: 5
ಧನುಸ್ಸು: ಒತ್ತಡ ಅನುಭವಿಸುವಿರಿ. ಆಕಸ್ಮಿಕ ಧನಾಗಮ. ಸಾಹಸ ಕಾರ್ಯಗಳಲ್ಲಿ ಜಯ ದೊರೆತು ಸಮಾಧಾನ. ಶೀತ, ಕೆಮ್ಮಿನಿಂದ ಅಸ್ವಸ್ಥತೆ. ಶುಭಸಂಖ್ಯೆ: 3
ಮಕರ: ಅಜಾಗರೂಕತೆಯಿಂದ ದೂರವಿರಿ. ಅನವಶ್ಯಕ ಚರ್ಚೆಗಳನ್ನು ತಪ್ಪಿಸುವುದು ಒಳ್ಳೆಯದು. ಗಾಯ ಗೊಳ್ಳುವ ಸಾಧ್ಯತೆ ಇದೆ ಹುಷಾರು. ಶುಭಸಂಖ್ಯೆ: 7
ಕುಂಭ: ವಿದ್ಯಾರ್ಥಿಗಳಿಗೆ ಮುನ್ನಡೆ ದೊರೆಯುವುದು. ಆರ್ಥಿಕ ನೆರವು ಹರಿದು ಬರಲಿದೆ. ಯೋಜನೆಗಳಲ್ಲಿ ನಿಧಾನಗತಿಯಿಂದ ಬೇಸರ. ಶುಭಸಂಖ್ಯೆ: 6
ಮೀನ: ಕೌಟುಂಬಿಕ ಸಂತೋಷಕ್ಕಾಗಿ ಖರ್ಚು. ಸಿದ್ದ ಆಹಾರ ಮಾರಾಟಗಾರರಿಗೆ ಲಾಭ. ಅವಕಾಶಗಳ ಸದುಪಯೋಗ ಮಾಡಿಕೊಳ್ಳಿ. ಶುಭಸಂಖ್ಯೆ: 6