ನ್ಯೂಸ್

ಈ ರಾಶಿಯವರಿಗೆ ಇಂದು ಧನಲಾಭವೂ ಆಗಲಿದೆ: ನಿತ್ಯಭವಿಷ್ಯ

ಮೇಷ: ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಆತ್ಮೀಯರ ಭೇಟಿಯಿಂದ ಸಂತಸ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ. ಶುಭಸಂಖ್ಯೆ: 9

ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು. ಶುಭಸಂಖ್ಯೆ: 5

ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ ತರುವ ಘಟನೆ ನಡೆದೀತು. ಮನಸ್ಸಿನ ಚಂಚಲತೆಯೇ ಸಮಸ್ಯೆಗಳಿಗೆ ಕಾರಣವಾದೀತು. ಶುಭಸಂಖ್ಯೆ: 1

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ವಸ್ತುಲಾಭ ಸಾಧ್ಯತೆ. ಶುಭಸಂಖ್ಯೆ: 7

ಸಿಂಹ: ಮನಸ್ಸಿಗೆ ಕ್ಲೇಶ. ಸಾರ್ವಜನಿಕವಾಗಿ ಅವಮಾನ ಸಾಧ್ಯತೆ, ತಾಳ್ಮೆಯಿಂದಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ಯಶ. ಶುಭಸಂಖ್ಯೆ: 3

ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತ ವಾಗಿ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಬಂಧುಗಳ ಭೇಟಿ. ಶುಭಸಂಖ್ಯೆ: 1

ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಸಹನೆ ಇರಲಿ. ಶುಭಸಂಖ್ಯೆ: 9

ವೃಶ್ಚಿಕ: ಎಲ್ಲ ಕೆಲಸಗಳಲ್ಲಿ ವಿಲಂಬವಾಗಬಹುದು. ಕಚೇರಿ ಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಪರಿಶ್ರಮಕ್ಕೆ ಸರಿಯಾದ ಕಾರ್ಯಸಿದ್ಧಿ. ಶುಭಸಂಖ್ಯೆ: 7

ಧನುಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 4

ಮಕರ: ದೈಹಿಕ ಶ್ರಮ. ಮಕ್ಕಳ ಪ್ರಗತಿಯ ಬಗ್ಗೆ ನಿರಾಸೆ ಕಾಡೀತು. ಒತ್ತಡದ ಜೀವನ. ಸ್ನಾಯುಗಳಿಗೆ ಸಂಬಂಧಪಟ್ಟಂತೆ ನೋವು. ಶುಭಸಂಖ್ಯೆ: 2

ಕುಂಭ: ಶತ್ರುಗಳಿಂದ ತೊಂದರೆ. ದೃಢತೆಯ ಕೊರತೆ. ಆಹಾರ ಸೇವನೆಯಲ್ಲಿ ಎಚ್ಚರ, ಮಿತಿ ಇರಲಿ. ಆಪ್ತರ ಮಾತಿಗೆ ಮನ್ನಣೆ ಕೊಡಿ. ಶುಭಸಂಖ್ಯೆ: 5

ಮೀನ: ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಉತ್ತಮ ಭೋಜನದಿಂದ ಖುಷಿ. ಧನಲಾಭವೂ ಆಗಲಿದೆ. ಆಸ್ತಿ ವಿವಾದಕ್ಕೆ ಅಂತ್ಯ. ಶುಭಸಂಖ್ಯೆ: 2