ಮೇಷ: ನಿಮಗೆ ನೀಡಲಾದ ಹೊಣೆಯನ್ನು ನಿಭಾಯಿಸಿ. ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯ ತಾನಾಗಿ ಲಭ್ಯವಾಗಲಿದೆ. ಶುಭಸಂಖ್ಯೆ: 9
ವೃಷಭ: ಆತ್ಮೀಯ ಸ್ನೇಹಿತರೇ ಮನಸ್ಸಿಗೆ ನೋವನ್ನು ತರುವಂಥ ಕೆಲಸ ಮಾಡಬಹುದು. ಆದರೆ ಹತಾಶರಾಗುವುದೇನೂ ಬೇಡ. ಶುಭಸಂಖ್ಯೆ: 1
ಮಿಥುನ: ಯಾರದೋ ನೆರವು ಒದಗಿಬರಬಹುದು ಎಂಬ ಅತಿ ನಿರೀಕ್ಷೆ ಬೇಡ. ಮುನ್ನುಗ್ಗಿದರೆ ನಿಮಗೇ ಜಯವಿದೆ. ಶುಭಸಂಖ್ಯೆ: 8
ಕಟಕ: ವಾದದಲ್ಲಿಯೇ ಕಾಲ ಕಳೆಯುವ ಆಲಸಿ ಮಿತ್ರರನ್ನು ದೂರವಿಡಿ. ಒಳಿತಿನ ದಾರಿ ಸ್ಪಷ್ಟವಾಗಿ ಗೋಚರಿಸಲಿದೆ. ಶುಭಸಂಖ್ಯೆ: 2
ಸಿಂಹ: ಕುಲದೇವರಿಗೆ ಸಂಬಂಧಪಟ್ಟ ಆರಾಧನೆ, ಸ್ತುತಿಗಳನ್ನು ಕೈಗೊಳ್ಳಿ. ಕಾರ್ಯಸಾಧನೆಯಲ್ಲಿ ಜಯಶೀಲರಾಗಲು ಸಾಧ್ಯ. ಶುಭಸಂಖ್ಯೆ: 7
ಕನ್ಯಾ: ಘನತೆಯನ್ನು ಮರೆತು ಮಾತನಾಡಲು ಮುಂದಾಗದಿರಿ. ನಿಮ್ಮ ಬಗ್ಗೆ ಜನ ಅನಾದರ ತೋರುವ ಸಾಧ್ಯತೆ ಹೆಚ್ಚು. ಶುಭಸಂಖ್ಯೆ: 3
ತುಲಾ: ಮೇಲಧಿಕಾರಿಗಳಿಗೆ ಸಂಶಯ ಬರುವಂತೆ ವರ್ತಿಸಲು ಹೋಗದಿರಿ. ವೃಥಾ ಅಪವಾದ ಬಂದುಬಿಟ್ಟೀತು. ಎಚ್ಚರ. ಶುಭಸಂಖ್ಯೆ: 6
ವೃಶ್ಚಿಕ: ವಿವಿಧ ಬಗೆಯ ಅಡೆತಡೆಗಳನ್ನು ದಾಟಿದ್ದೀರಿ. ಇಚ್ಛಾಶಕ್ತಿಯಿಂದ ದೊಡ್ಡ ಕದನದಲ್ಲಿಯೇ ಗೆಲುವನ್ನು ಸಾಧಿಸಲಿದ್ದೀರಿ. ಶುಭಸಂಖ್ಯೆ: 4
ಧನು: ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಮಾತನ್ನು ನೆನಪಿಡಿ. ಉದ್ಯೋಗ ಬಿಡದಿರಿ. ಕ್ಷೇಮವಿದೆ. ಶುಭಸಂಖ್ಯೆ: 5
ಮಕರ: ಅನ್ಯರು ನಿಮ್ಮ ಧೈರ್ಯವನ್ನು ಕೆಡಿಸುವ ಮಾತುಗಳನ್ನು ಆಡಬಹುದು. ಅವನ್ನು ನಂಬದಿರಿ. ಆತ್ಮವಿಶ್ವಾಸ ಇರಲಿ. ಶುಭಸಂಖ್ಯೆ: 1
ಕುಂಭ: ನಿಶ್ಚಿತವಾಗಿಯೂ ದೈವಪ್ರೇರಣೆಯಿಂದಲೇ ಸ್ನೇಹಿತರೊಬ್ಬರ ಸಹಾಯವು ಒದಗಿಬರಲಿದೆ. ಚಿಂತಿಸದೆ ನಿಶ್ಚಿಂತರಾಗಿರಿ. ಶುಭಸಂಖ್ಯೆ: 9
ಮೀನ: ಪರಿಶ್ರಮದಿಂದ ಧನವನ್ನು ಸಂಪಾದಿಸಲು ಮುಂದಾಗಿ. ಗ್ರಹಬಲದ ಕಾರಣದಿಂದ ಪ್ರಗತಿಗೆ ದಾರಿ ಸುಲಭವಾಗಿದೆ. ಶುಭಸಂಖ್ಯೆ: 8