ನ್ಯೂಸ್

ಈ ರಾಶಿಯವರಿಗಿಂದು ಶುಭ ಕಾರ್ಯಗಳಿಗೆ ಅನುಕೂಲ, ಸ್ನೇಹಿತರ ಸಂಪರ್ಕ: ನಿತ್ಯಭವಿಷ್ಯ

ಮೇಷ: ಅಧಿಕ ಖರ್ಚು ಮಾಡಬೇಕಾದೀತು. ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು. ನಿದ್ರಾಭಂಗ. ಸಾಲದ ಚಿಂತೆ ಹೆಚ್ಚು ಕಾಡಲಿದೆ. ಶುಭಸಂಖ್ಯೆ: 1

ವೃಷಭ: ಅನಗತ್ಯ ಮಾತು ಅನಾಹುತ ಉಂಟು ಮಾಡಬಹುದು. ಆರ್ಥಿಕ ಅನುಕೂಲವಿದೆ. ದಾಂಪತ್ಯ ಕಲಹ. ಸಮಾಧಾನವೇ ಪರಿಹಾರ. ಶುಭಸಂಖ್ಯೆ: 8

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ. ಹೆಣ್ಣು ಮಕ್ಕಳಿಂದ ಅನುಕೂಲವಾಗಲಿದೆ. ಸ್ವಂತ ವ್ಯಾಪಾರ ದಲ್ಲಿ ನಷ್ಟ ಅನುಭವಿಸುವಿರಿ. ಶುಭಸಂಖ್ಯೆ: 6

ಕಟಕ: ಪ್ರಯಾಣದ ಆಲೋಚನೆ ಮಾಡುವಿರಿ. ಮಿತ್ರರೊಡನೆ ಮನಸ್ತಾಪ ಆಗಬಹುದು. ಅನಗತ್ಯ ವಿಚಾರವಾಗಿ ನೋವು ಕಾಡಲಿದೆ. ಶುಭಸಂಖ್ಯೆ: 3

ಸಿಂಹ: ಮಾನಸಿಕವಾಗಿ ವೇದನೆ. ಉದ್ಯೋಗ ಒತ್ತಡ. ಆಕಸ್ಮಿಕ ಧನ ನಷ್ಟ. ಮಿತ್ರರಿಂದ ಆರ್ಥಿಕ ನೆರವು. ಉದ್ಯೋಗದ ಭರವಸೆ. ಶುಭಸಂಖ್ಯೆ: 5

ಕನ್ಯಾ: ಶುಭ ಕಾರ್ಯಗಳಿಗೆ ಅನುಕೂಲವಾಗುವುದು. ಸ್ನೇಹಿತರ ಸಂಪರ್ಕ. ದಾಯಾದಿ ಕಲಹ ನಿಯಂತ್ರಿಸಿ. ತಂದೆಗೆ ನೋವು ಕಾಡೀತು. ಶುಭಸಂಖ್ಯೆ: 9

ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ ಕಾಡಲಿದೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವೈದ್ಯರ ಸಲಹೆ ಪಡೆಯುವಿರಿ. ಧನ ನಷ್ಟ. ಶುಭಸಂಖ್ಯೆ: 7

ವೃಶ್ಚಿಕ: ದಾಂಪತ್ಯ ಕಲಹ. ಸಹನೆಯ ಮಾತುಗಳಿಂದ ಉಪಶಮನ. ಮಕ್ಕಳಿಂದ ಕಿರಿಕಿರಿ. ಅಪಮಾನ. ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ. ಶುಭಸಂಖ್ಯೆ: 1

ಧನುಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟ ಅನುಭವಿಸುವಿರಿ. ಆರೋಗ್ಯ ಸಮಸ್ಯೆ, ವೈದ್ಯರ ಸಲಹೆಯಿಂದ ಚೇತರಿಕೆ. ಶುಭಸಂಖ್ಯೆ: 4

ಮಕರ: ಶುಭಕಾರ್ಯದ ಯೋಗವಿದೆ. ಸ್ವಯಂಕೃತ ಅಪರಾಧದಿಂದ ಸಮಸ್ಯೆಯಾಗುವುದು. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 7

ಕುಂಭ: ಸಾಲಗಾರರೊಂದಿಗೆ ವಾಗ್ವಾದ. ಪ್ರೀತಿ ಪ್ರೇಮದ ವಿಚಾರದಲ್ಲಿ ಸಂಕಷ್ಟ. ಮಾನಸಿಕ ಉದ್ವೇಗ ಹಾಗೂ ಆತುರದಿಂದ ತೊಂದರೆ. ಶುಭಸಂಖ್ಯೆ: 2

ಮೀನ: ಬಂಧು ಬಾಂಧವರೊಂದಿಗೆ ಕಿರಿಕಿರಿ ಉಂಟಾಗಲಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಶಂಸೆ ದೊರೆಯಲಿದೆ. ದಾಯಾದಿ ಕಲಹ ಸಾಧ್ಯತೆ. ಶುಭಸಂಖ್ಯೆ: 8