ನ್ಯೂಸ್

ಈ ರಾಶಿಯವರಿಗಿಂದು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ, ದಿನಾಂತ್ಯದಲ್ಲಿ ಸಿಹಿಸುದ್ದಿ: ನಿತ್ಯಭವಿಷ್ಯ

ಮೇಷ: ವಿಪರೀತ ಖರ್ಚು ಉಂಟಾಗಬಹುದು. ಮಾತಿನಲ್ಲಿ ಹಿಡಿತವಿದ್ದರೆ ಅನಾಹುತವಾಗದು. ಕುಟುಂಬ ಸದಸ್ಯರಿಂದ ಹಿತವಚನ. ಶುಭಸಂಖ್ಯೆ: 1

ವೃಷಭ: ಅನೇಕ ವಿಷಯಗಳ ಚರ್ಚೆ. ಧನಹಾನಿ. ಆಲಸ್ಯ ಮನೋಭಾವ ಕಾಡೀತು. ಮಾನಸಿಕ ವೇದನೆ. ಗೊಂದಲಮಯ ವಾತಾವರಣ. ಶುಭಸಂಖ್ಯೆ: 9

ಮಿಥುನ: ಅನ್ಯಜನರಲ್ಲಿ ಪ್ರೀತಿ ತೋರುವಿರಿ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ವಾಹನ ರಿಪೇರಿ ಅಗತ್ಯ. ಮನಸ್ಸಿನಲ್ಲಿ ಭಯಭೀತಿ. ಶುಭಸಂಖ್ಯೆ: 3

ಕಟಕ: ಮಿತ್ರರಲ್ಲಿ ಸ್ನೇಹ ವೃದ್ಧಿಯಾಗುವುದು. ಅಲ್ಪ ಕಾರ್ಯಸಿದ್ಧಿ. ಶೀತ ಸಂಬಂಧ ರೋಗ. ತಾಳ್ಮೆಯಿಂದ ವರ್ತಿಸಿ. ಕೃಷಿಕರಿಗೆ ಅಲ್ಪ ಲಾಭ. ಶುಭಸಂಖ್ಯೆ: 2

ಸಿಂಹ: ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ. ಮನಃಶಾಂತಿ ದೊರೆಯುವುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭಸಂಖ್ಯೆ: 6

ಕನ್ಯಾ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ತಾಯಿಯಿಂದ ಪ್ರಶಂಸೆ. ಆತ್ಮೀಯರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರುವಿರಿ. ಶುಭಸಂಖ್ಯೆ: 2

ತುಲಾ: ಕಾರ್ಯ ವಿಫಲವಾಗುವುದು. ಆಸ್ತಿ ವಿಚಾರದಲ್ಲಿ ಕಲಹ ಸಾಧ್ಯತೆ. ಹಿತ ಶತ್ರು ಬಾಧೆ. ಪರರಿಂದ ಮೋಸ ಹೋಗುವಿರಿ, ಎಚ್ಚರ. ಶುಭಸಂಖ್ಯೆ: 2

ವೃಶ್ಚಿಕ: ಹೊಸ ಸಮಸ್ಯೆ ಉದ್ಭವವಾಗುವುದು. ಮೌನವಾಗಿರು ವುದು ಉತ್ತಮ ಉಪಾಯ. ನಡೆಯುವಾಗ ಬೀಳುವ ಸಾಧ್ಯತೆ, ಹುಷಾರು. ಶುಭಸಂಖ್ಯೆ: 7

ಧನುಸ್ಸು: ಪರರಿಂದ ಸಹಾಯ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವುದು. ಖರ್ಚಿನ ಬಗ್ಗೆ ನಿಯಂತ್ರಣ ತೀರ ಅಗತ್ಯ. ಶುಭಸಂಖ್ಯೆ: 4

ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ. ಅಪರಿಚಿತರಿಂದ ದೂರವಿರಿ. ಹಿರಿಯರಲ್ಲಿ ಪ್ರೀತಿ. ದಿನಾಂತ್ಯದಲ್ಲಿ ಸಿಹಿ ಸುದ್ದಿ. ಶುಭಸಂಖ್ಯೆ: 6

ಕುಂಭ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಚಂಚಲ ಸ್ವಭಾವದಿಂದ ಅನಿರೀಕ್ಷಿತ ತೊಂದರೆ. ಹೇಳಿ ಕೊಡುವವರ ಮಾತು ಕೇಳಬೇಡಿ. ಶುಭಸಂಖ್ಯೆ: 3

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಹೋದರರಿಂದ ಪ್ರೀತಿ. ಸಾಮಾಜಿಕ ಗೌರವ ದೊರೆಯುವುದು. ಶುಭಸಂಖ್ಯೆ: 4