ನ್ಯೂಸ್

ಈ ರಾಶಿಯವರಿಗೆ ಆರೋಗ್ಯದ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಮೇಷ: ಎಷ್ಟೇ ಹೋರಾಟ ಮಾಡಿದರೂ ವಿರೋಧಿಗಳ ಕೈ ಮೇಲಾಗುವ ಸಾಧ್ಯತೆಗಳೇ ಇವೆ. ಆದರೆ ದಿನದ ಅಂತ್ಯಕ್ಕೆ ಗೆಲುವಿದೆ. ಶುಭಸಂಖ್ಯೆ: 1

ವೃಷಭ: ಮಕ್ಕಳು ಸಹಾಯಕ್ಕಾಗಿ ಬರುವುದರಿಂದ ತುಂಬ ಸಂತೋಷಪಡಲಿದ್ದೀರಿ. ಸಂಗಾತಿಯಿಂದ ಹರ್ಷವಿದೆ. ಶುಭಸಂಖ್ಯೆ: 7

ಮಿಥುನ: ದಿಢೀರ್ ಹಣ ಗಳಿಸುವ ಒತ್ತಡವನ್ನು ಸೃಷ್ಟಿಸಿಕೊಳ್ಳದಿರಿ. ಇದರಿಂದ ಕಿರಿಕಿರಿಗಳೇ ಹೆಚ್ಚಾಗಿ ಎದುರಾಗಬಹುದು. ಶುಭಸಂಖ್ಯೆ: 5

ಕಟಕ: ಉದ್ಯಮದ ಬೆಳವಣಿಗೆಗಾಗಿ ಹೆಚ್ಚಿನ ಬಂಡವಾಳ ತೊಡಗಿಸಲು ಹೋಗದಿರಿ. ಕಷ್ಟಗಳನ್ನೇ ಕಾಣಬೇಕಾಗುತ್ತದೆ. ಶುಭಸಂಖ್ಯೆ: 3

ಸಿಂಹ: ಕೃಷಿಕರಿಗೆ ತುಸು ಹಿನ್ನಡೆ ಉಂಟಾದರೂ ದೂರದ ಬಂಧುಗಳ ಸಕಾಲಿಕ ನೆರವಿನಿಂದ ಸಾಫಲ್ಯವನ್ನು ಪಡೆಯುವಿರಿ. ಶುಭಸಂಖ್ಯೆ: 8

ಕನ್ಯಾ: ಪ್ರಾಮಾಣಿಕತೆಯಿಂದ ಗೆಲುವು ಸಾಧಿಸುವಿರಿ. ಹೀಗಾಗಿ ಯಾರಿಂದಲೂ ತೊಂದರೆಗಳನ್ನು ಎದುರಿಸುವ ಸಂದರ್ಭ ಬರದು. ಶುಭಸಂಖ್ಯೆ: 2

ತುಲಾ: ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಲಕ್ಷ್ಮೀನರಸಿಂಹನ ಸ್ತುತಿಯಿಂದ ಕನಸಿನ ಸಿದ್ಧಿ ಸಾಕಾರವಾಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ಕೆಲಸಕಾರ್ಯಗಳು ಸರಾಗವಾಗಿ ಜರುಗಲು ಏನೂ ತೊಂದರೆಗಳಿಲ್ಲ. ಶುಭಸಂಖ್ಯೆ: 6

ಧನುಸ್ಸು: ನಿಮ್ಮ ಹೊಸ ಸಾಹಸದ ಕುರಿತಾಗಿ ಅನಿರೀಕ್ಷಿತ ವಲಯದಿಂದಲೂ ಮೆಚ್ಚುಗೆ ದೊರೆಯುವ ಸಾಧ್ಯತೆ ಇದೆ. ಶುಭಸಂಖ್ಯೆ: 9

ಮಕರ: ದಿಢೀರ್ ಲಾಭದ ಆಸೆ ಹುಟ್ಟಿಸುವಂತಹ ಜೂಜು, ರೇಸ್ ಮುಂತಾದವುಗಳಿಗಾಗಿ ಹಣ ವ್ಯಯಿಸದಿದ್ದರೆ ಒಳ್ಳೆಯದು. ಶುಭಸಂಖ್ಯೆ: 1

ಕುಂಭ: ಹೆಚ್ಚಿನ ಖರ್ಚುವೆಚ್ಚಗಳನ್ನು ಮಾಡಬೇಕಾಗಿ ಬರಬಹುದು. ಹೀಗಾಗಿ ಎಚ್ಚರದಿಂದ ವ್ಯಯ ಮಾಡುವುದು ಯುಕ್ತ. ಶುಭಸಂಖ್ಯೆ: 7

ಮೀನ: ಜತೆಗಾರರೇ ಕೆಲವು ತೊಂದರೆಗಳನ್ನು ತಂದಿಡಬಹುದು. ಆದರೆ ಇದರಿಂದ ನಿಮ್ಮ ಓಟಕ್ಕೆ ಅಡ್ಡಿಯಾಗದು. ಶುಭಸಂಖ್ಯೆ: 5