ನ್ಯೂಸ್

ಈ ರಾಶಿಯವರಿಗಿಂದು ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ: ನಿತ್ಯಭವಿಷ್ಯ

ಮೇಷ: ನ್ಯಾಯವಾದಿಗಳಿಗೆ ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ. ಮಕ್ಕಳಿಂದಲೇ ವಾದ-ವಿವಾದ ಗಳು ಹೆಚ್ಚಾಗಬಹುದು. ಶುಭಸಂಖ್ಯೆ: 4

ವೃಷಭ: ಮುಕ್ತ ಭಾವದಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ಸಹ ಬೆಂಬಲಿಸುವರು. ಶುಭಸಂಖ್ಯೆ: 7

ಮಿಥುನ: ಹಿರಿಯರ ಸಕಾಲಿಕ ಸಲಹೆಗಳಿಂದ ಸಾಕಷ್ಟು ನಷ್ಟವನ್ನು ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಶುಭಸಂಖ್ಯೆ: 1

ಕಟಕ: ಪದೇಪದೆ ನಿರ್ಧಾರಗಳನ್ನು ಬದಲಿಸುವ ನಡವಳಿಕೆಯಿಂದ ಕುಟುಂಬದಲ್ಲಿ ಅಸಹನೆ. ಕರಿದ ಪದಾರ್ಥ ಮಾರುವವರಿಗೆ ಲಾಭ. ಶುಭಸಂಖ್ಯೆ: 9

ಸಿಂಹ: ಯಾವುದೇ ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಕೌಟುಂಬಿಕ ವ್ಯವಹಾರದಲ್ಲಿ ತೃಪ್ತಿ. ಸಾಮಾಜಿಕ ಕಾರ್ಯದಲ್ಲಿ ಅವಕಾಶ. ಶುಭಸಂಖ್ಯೆ: 8

ಕನ್ಯಾ: ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಪಿತ್ರಾರ್ಜಿತ ಆಸ್ತಿ ಬಗ್ಗೆ ಮನಸ್ತಾಪದ ಸಾಧ್ಯತೆ. ಶುಭಸಂಖ್ಯೆ: 4

ತುಲಾ: ಸಂಪನ್ಮೂಲ ಕ್ರೋಡೀಕರಿಸಲು ಹಲವು ಪ್ರಯತ್ನಗಳನ್ನು ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ ಎದುರಾಗಬಹುದು. ಶುಭಸಂಖ್ಯೆ: 1

ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ಸಾಧ್ಯತೆ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಭಡ್ತಿ ಸಾಧ್ಯತೆ. ಶುಭಸಂಖ್ಯೆ:7

ಧನುಸ್ಸು: ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸ್ವಲ್ಪ ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಶುಭಸಂಖ್ಯೆ: 1

ಮಕರ: ಸತ್ಯಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಶುಭಸಂಖ್ಯೆ: 7

ಕುಂಭ: ಕೃಷಿ ಯಂತ್ರಗಳನ್ನು ಹೊಂದಿರುವವರಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೀತಿ- ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ ಆಗಲಿದೆ. ಶುಭಸಂಖ್ಯೆ: 1

ಮೀನ: ನಿಮ್ಮ ಸಾಮರ್ಥ್ಯವನ್ನು ಅರಿತು ಕೆಲಸ ಆಯ್ಕೆಮಾಡಿ ಕೊಳ್ಳಿ. ನೌಕರಿಯಲ್ಲಿರುವವರಿಗೆ ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 9