ಮೇಷ: ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ಹೊಸ ರೀತಿಯ ಯೋಜನೆಗಳನ್ನು ರೂಪಿಸುವಿರಿ. ಸುಮ್ಮನೆ ಕೋಪಿಸಿಕೊಳ್ಳಬೇಡಿ. ಶುಭಸಂಖ್ಯೆ: 7
ವೃಷಭ: ತಾಯಿ ಶ್ರೀ ದುರ್ಗಾದೇವಿಯ ಸ್ತೋತ್ರವನ್ನು ಪಠಿಸುವುದರಿಂದ ವಿವಿಧ ರೀತಿಯ ಕೆಲಸಗಳು ಶೀಘ್ರದಲ್ಲಿಯೇ ನೆರವೇರಲಿವೆ. ಶುಭಸಂಖ್ಯೆ: 5
ಮಿಥುನ: ನೆರೆಹೊರೆಯವರು ಒಣ ಚರ್ಚೆಗೆ ಬಂದಾರು. ನೀವು ಭಾಗವಹಿಸದಿರಿ. ಭಾಗವಹಿಸಿದರೆ ಸಂಘರ್ಷದ ದಾರಿ ತೆರೆದೀತು. ಶುಭಸಂಖ್ಯೆ: 3
ಕಟಕ: ಎಷ್ಟೇ ವಾತ್ಸಲ್ಯದಿಂದ ಕಾಳಜಿಪೂರ್ವಕವಾದ ಮಾತುಗಳನ್ನು ಆಡಿದರೂ ಬೆಲೆ ಇರದು. ಸದ್ಯಕ್ಕೆ ಮೌನವಾಗಿರುವುದೇ ಉತ್ತಮ. ಶುಭಸಂಖ್ಯೆ: 1
ಸಿಂಹ: ಯಾರನ್ನೂ ಕೂಡ ಎದುರು ಹಾಕಿಕೊಳ್ಳದೆ ಸಫಲರಾಗುವ ಆಲೋಚನೆ ತಪ್ಪಲ್ಲ. ಆದರೆ ದುಷ್ಟರಿಂದ ದೂರವೇ ಇರಿ. ಶುಭಸಂಖ್ಯೆ: 9
ಕನ್ಯಾ: ನೀವೇ ಮೇಲಧಿಕಾರಿ ಆಗಿದ್ದರೂ ಅಥವಾ ಮೇಲಧಿಕಾರಿ ಕೈಕೆಳಗೆ ನೀವಿದ್ದರೂ ತೊಂದರೆ ತಪ್ಪಿದ್ದಲ್ಲ. ಸಮಯಪ್ರಜ್ಞೆ ಇರಲಿ. ಶುಭಸಂಖ್ಯೆ: 2
ತುಲಾ: ಎಷ್ಟೋ ಥರದ ಸಮಸ್ಯೆಗಳನ್ನು ನಿಭಾಯಿಸಿದ ಆತ್ಮವಿಶ್ವಾಸ ನಿಮಗಿದೆ. ಆದರೂ ಎಚ್ಚರದಿಂದ ಇರುವುದೇ ಸದ್ಯಕ್ಕೆ ಉತ್ತಮ. ಶುಭಸಂಖ್ಯೆ: 4
ವೃಶ್ಚಿಕ: ನಿಮ್ಮಲ್ಲಿ ಅಪಾರವಾದ ಬೌದ್ಧಿಕ ಶಕ್ತಿ ಇದೆ. ಆದರೂ ಕೂಡ ಯುಕ್ತಿಯಿಂದ ಒತ್ತಡವನ್ನು ನಿಭಾಯಿಸಿದರೆ ಗೆಲುವಿದೆ. ಶುಭಸಂಖ್ಯೆ: 6
ಧನುಸ್ಸು: ಆತ್ಮೀಯ ಜನರೇ ನಿಮ್ಮ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳಬಹುದು.
ಆದರೆ ನಿರಾಶರಾಗಬೇಡಿ. ಶುಭಸಂಖ್ಯೆ: 8
ಮಕರ: ಶಿವನ ಪ್ರೀತ್ಯರ್ಥವಾಗಿ ಬಿಲ್ವಪತ್ರೆಗಳಿಂದ ಆರಾಧಿಸುತ್ತಿರಿ. ಶಿವನಾಮವು ನಿಮ್ಮ ಪಾಲಿಗೆ ಸಂಜೀವಿನಿಯಾಗಲಿದೆ. ಶುಭಸಂಖ್ಯೆ: 7
ಕುಂಭ: ಒಮ್ಮೆಲೇ ಹಲವು ರೀತಿಯ ಬದಲಾವಣೆಗಳನ್ನು ತಂದುಬಿಡುವಂತಹ ಆತುರಕ್ಕೆ ಮುಂದಾಗದಿರಿ. ತೊಂದರೆಗಳುಂಟಾಗಬಹುದು. ಶುಭಸಂಖ್ಯೆ: 5
ಮೀನ: ವ್ಯಕ್ತಿಗಳ ಮಧ್ಯೆ ಸದಾ ಅಭಿಪ್ರಾಯಭೇದ ಎಂಬುದು ಇದ್ದೇ ಇರುತ್ತದೆ. ಇತರರ ಮಾತನ್ನೂ ಕೇಳಿದರೆ ನಿಮಗೆ ಶುಭವಿದೆ. ಶುಭಸಂಖ್ಯೆ: 3