ಮೇಷ: ಕಾರ್ಯಕ್ಷೇತ್ರದಲ್ಲಿ ಒತ್ತಡ ಹೆಚ್ಚಬಹುದು. ಭಯ ಭೀತಿ ನಿವಾರಣೆ. ಮನಃಶಾಂತಿ ಸಿಗಲಿದೆ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 6.
ವೃಷಭ: ದೂರ ಪ್ರಯಾಣದ ಸಾಧ್ಯತೆ. ದುಃಖದಾಯಕ ಪ್ರಸಂಗಗಳು, ಕೋಪ ಜಾಸ್ತಿ. ದ್ರವ್ಯನಾಶ. ಆರ್ಥಿಕ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ: 4
ಮಿಥುನ: ಉದ್ಯೋಗದಲ್ಲಿ ಬಡ್ತಿ. ಅಧಿಕ ಖರ್ಚು. ಅನಾರೋಗ್ಯ. ಶೀತಸಂಬಂಧ ರೋಗಗಳು ಬಾಧಿಸಲಿದೆ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 8
ಕಟಕ: ಸ್ತ್ರೀಯರಿಗೆ ಶುಭ. ಭೂಲಾಭವಾದೀತು. ವಿವಾಹ ಯೋಗ. ಆಕಸ್ಮಿಕ ಧನಲಾಭ. ದುಷ್ಟಬುದ್ಧಿ. ದಾಯಾದಿ ಕಲಹ ಸಾಧ್ಯತೆ. ಶುಭಸಂಖ್ಯೆ: 2
ಸಿಂಹ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಅಕಾಲ ಭೋಜನ. ಆಲಸ್ಯ ಮನೋಭಾವ. ಶತ್ರು ಬಾಧೆ. ಅಧಿಕಾರಿಗಳಲ್ಲಿ ಕಲಹ ಉಂಟಾಗಬಹುದು. ಶುಭಸಂಖ್ಯೆ: 3
ಕನ್ಯಾ: ಯತ್ನ ಕಾರ್ಯದಲ್ಲಿ ವಿಘ್ನ. ಸಾಲಬಾಧೆ. ನಂಬಿದ ಜನರಿಂದ ಮೋಸ. ಮನಸ್ತಾಪ. ಹಣದ ತೊಂದರೆ. ಶುಭಸಂಖ್ಯೆ: 3
ತುಲಾ: ಋಣವಿಮೋಚನೆ. ಕೃಷಿಯಲ್ಲಿ ಲಾಭ. ಕೋರ್ಟ್ ಕಚೇರಿ ಕೆಲಸದಲ್ಲಿ ಮುನ್ನಡೆ. ಮನೋಸುಖವಿರದು, ಶತ್ರುಬಾಧೆ. ಶುಭಸಂಖ್ಯೆ: 1
ವೃಶ್ಚಿಕ: ಸಾಲಬಾಧೆ. ಇಲ್ಲಸಲ್ಲದ ತಕರಾರು. ಸ್ತ್ರೀಯರಿಗೆ ತೊಂದರೆ. ಸಾಧಾರಣ ಲಾಭ. ಸಣ್ಣ ಮಾತಿನಿಂದ ಕಲಹವೇ ಆದೀತು. ಶುಭಸಂಖ್ಯೆ: 5
ಧನುಸ್ಸು: ಆಸ್ತಿಯ ವಿವಾದ. ಗುರುಹಿರಿಯರ ಸಲಹೆ ಪಡೆಯಿರಿ. ಉನ್ನತ ವ್ಯಾಸಂಗದವರಿಗೆ ಓದಿನಲ್ಲಿ ಆಸಕ್ತಿ. ಕುಲದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 4
ಮಕರ: ಕಾರ್ಯಸಾಧನೆ. ದೂರಾಲೋಚನೆ. ನಿಂದನೆ. ಬಾಕಿ ವಸೂಲಿಯಾಗಲಿದೆ. ಕುಟುಂಬದಲ್ಲಿ ಸೌಖ್ಯ. ಋಣಭಾದೆಗಳಿಂದ ಮುಕ್ತಿ. ಶುಭಸಂಖ್ಯೆ: 3
ಕುಂಭ: ಮನಸ್ಸಿಗೆ ನಾನಾ ರೀತಿಯ ಚಿಂತೆ. ಸೇವಕರಿಂದ ಸಹಾಯ. ಶುಭಕಾರ್ಯಗಳ ಸಾಧ್ಯತೆ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಶುಭಸಂಖ್ಯೆ: 8
ಮೀನ: ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಮಹಿಳೆಯರಿಗೆ ಆಭರಣ ಲಾಭ. ವಿದೇಶ ಯಾತ್ರೆಯ ಕನಸಿನ ಸಾಕಾರ. ಶುಭಸಂಖ್ಯೆ: 9