ನ್ಯೂಸ್

ನಿತ್ಯಭವಿಷ್ಯ| ಈ ರಾಶಿಯವರು ಸಮಯ ವ್ಯರ್ಥ ಎಂದುಕೊಂಡ ವಿಷಯವೇ ಗೆಲುವಿಗೆ ದಾರಿ ತೋರಲಿದೆ..

ಮೇಷ: ಸಮಯ ವ್ಯರ್ಥ ಎಂದುಕೊಂಡಿದ್ದ ವಿಷಯವೇ ಅದ್ಭುತವಾದ ಗೆಲುವಿಗಾಗಿ ದಾರಿಯೊಂದನ್ನು ತಯಾರಿಸಿ ನಿಮಗೆ ಕೊಡಲಿದೆ. ಶುಭಸಂಖ್ಯೆ: 5

ವೃಷಭ: ಕೆಲವರ ಕುಮ್ಮಕ್ಕಿನಿಂದ ಸ್ವಲ್ಪ ಅಹಂಕಾರ ಪ್ರದರ್ಶಿಸುತ್ತಿದ್ದೀರಿ. ಅದು ನಿಮಗೆ ಖಂಡಿತ ಬೇಡ. ಆತ್ಮಗೌರವ ಬಿಡದಿರಿ. ಶುಭಸಂಖ್ಯೆ: 9

ಮಿಥುನ: ಏನು ಮಾಡಿದರೂ ನಡೆಯುತ್ತದೆ ಎಂಬಂಥ ಧೋರಣೆಗಳನ್ನು ಬಿಡಿ. ಇತರರ ಶಿಸ್ತನ್ನು ಕೂಡ ಗೌರವಿಸಿದರೆ ಶುಭವಾಗಲಿದೆ. ಶುಭಸಂಖ್ಯೆ: 1

ಕಟಕ: ಒಮ್ಮೆಲೇ ಲಾಭಕ್ಕೆ ಹೊಸ ದಾರಿ ಸಿಗಲಾರದು. ತಾಳ್ಮೆಯಿಂದ ಹುಡುಕಾಡಿದರೆ ನಿಶ್ಚಿತವಾಗಿಯೂ ದಾರಿಯೊಂದು ದೊರೆಯಲಿದೆ. ಶುಭಸಂಖ್ಯೆ: 8

ಸಿಂಹ : ಖರ್ಚಿಗೆ ದೊಡ್ಡ ದಾರಿಯೇ ಇದೆ ಎಂಬುದು ಸರಿ. ಆದರೆ ಅದನ್ನು ನಿಮ್ಮ ಜಾಣತನದಿಂದ ಕಿರಿದಾಗಿಸುವುದಕ್ಕೆ ಯತ್ನಿಸಿ. ಶುಭಸಂಖ್ಯೆ: 4

ಕನ್ಯಾ: ಅಕ್ಕಪಕ್ಕದವರನ್ನು ವಿಮಶಿಸುವ ಉದ್ಧಟತನ ಬಿಡಿ. ನಿಮ್ಮನ್ನು ನೀವು ನಿಯಂತ್ರಿಸಿಕೊಂಡರೆ ಸಾಕು. ಅದರಿಂದ ಒಳಿತಾಗಲಿದೆ. ಶುಭಸಂಖ್ಯೆ: 2

ತುಲಾ: ಹೊಸದೇ ಆದ ಪ್ರಯಾಣಕ್ಕೆ ದಾರಿಯೊಂದು ಸಿದ್ಧವಾಗಲಿದೆ. ಪ್ರವಾಸ ಅನಿವಾರ್ಯವೇ ಆದರೂ ಅದನ್ನು ಆನಂದಿಸಿ. ಶುಭಸಂಖ್ಯೆ: 6

ವೃಶ್ಚಿಕ: ಒತ್ತಡವನ್ನು ತಾಳಲಾಗದು ಎಂದು ಇದ್ದ ಕೆಲಸ ಬಿಡಲು ಹೊರಡದಿರಿ. ಇನ್ನೂ ಹೆಚ್ಚಿನ ತಾಳ್ಮೆಯೇ ನಿಮ್ಮೊಳಗಿರಲಿ. ಶುಭಸಂಖ್ಯೆ: 3

ಧನುಸ್ಸು: ತಲೆ ಗಟ್ಟಿ ಇದೆಯೆಂದು ಬಂಡೆಗೆ ಬಡಿದುಕೊಳ್ಳಲು ಹೊರಟಿದ್ದೀರಿ. ಆ ಸಾಹಸವನ್ನು ಅಲ್ಲಿಗೇ ಬಿಟ್ಟು ಬುದ್ಧಿಶಕ್ತಿಯನ್ನೇ ಬಳಸಿ ನೋಡಿ. ಶುಭಸಂಖ್ಯೆ: 7

ಮಕರ: ಉತ್ಸಾಹದಿಂದ ಕ್ರಿಯಾಶೀಲರಾದರೆ ಲಾಭವಿದೆ. ಪ್ರತಿನಿತ್ಯ ಯಾರೂ ಕೂಡ ಅವಕಾಶಗಳನ್ನು ಒದಗಿಸಿಕೊಡಲಾರರು. ಶುಭಸಂಖ್ಯೆ: 5

ಕುಂಭ: ಎಲ್ಲರನ್ನೂ ಸಮಾನತೆಯಿಂದ ಕಾಣುವವರು ನೀವು. ಈ ಸದ್ಗುಣದ ಕಾರಣಕ್ಕೆ ಪ್ರಶಂಸೆ, ಮನ್ನಣೆಗಳೆಲ್ಲ ದೊರೆಯಲಿವೆ. ಶುಭಸಂಖ್ಯೆ: 9

ಮೀನ: ನೀವು ಖಂಡಿತವಾಗಿಯೂ ಪ್ರಯತ್ನವನ್ನು ಮಾಡುವಿರಿ. ಅಂತಿಮ ನಿರ್ಧಾರ ದೈವದ್ದು. ಅದು ನಿಮ್ಮನ್ನು ಕಾಪಾಡಲಿದೆ. ಶುಭಸಂಖ್ಯೆ: 1