ವೇ. ಬ್ರ. ಶ್ರೀ ದೇವದತ್ತ ಶರ್ಮಾ ಗುರೂಜಿ
ಮೇಷ: ಮನೆಯೊಳಗಿನ ವಿವಾದ ಅಸ್ಥಿರತೆಗೆ ಕಾರಣ ಆಗಬಹುದು. ಕಠಿಣ ಪರಿಶ್ರಮ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮುನ್ನುಗ್ಗಿ ಜಯ ನಿಮ್ಮದೇ. ಸಾಮಾಜಿಕ ಕೆಲಸಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಿ. ಶುಭಸಂಖ್ಯೆ: 1
ಮಿಥುನ: ಅನವಶ್ಯಕ ಚಟುವಟಿಕೆಗಳಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ತರ ಸಲಹೆ ಪಡೆದು ಹೂಡಿಕೆ ಮಾಡಿ. ಶುಭಸಂಖ್ಯೆ: 6
ಕಟಕ: ವ್ಯವಹಾರಕ್ಕೆ ಸಂಬಂಧಪಟ್ಟಂತೆ ಅಂತಿಮನಿರ್ಧಾರ ತೆಗೆದುಕೊಳ್ಳಿ. ಪ್ರೇಮಿಗಳಿಗೆ ಶುಭದಿನ. ನಿರುದ್ಯೋಗಿಗಳಿಗೆ ಆಶಾಕಿರಣ. ಶುಭಸಂಖ್ಯೆ: 8
ಸಿಂಹ: ಕುಟುಂಬದಲ್ಲಿ ಅನಾರೋಗ್ಯದ ಸಮಸ್ಯೆ ಬಾಧಿಸಬಹುದು. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಸ್ನೇಹಿತರೊಂದಿಗೆ ಸಂಬಂಧ ವೃದ್ಧಿ. ಶುಭಸಂಖ್ಯೆ: 4
ಕನ್ಯಾ: ಸರ್ಕಾರಿ ಕ್ಷೇತ್ರದಲ್ಲಿ ಲಾಭ ಸಾಧ್ಯತೆ. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ವೃತ್ತಿ ಜೀವನದಲ್ಲಿ ಪ್ರಗತಿ. ಸಂಜೆ ಶುಭಸುದ್ದಿ. ಶುಭಸಂಖ್ಯೆ: 5
ತುಲಾ: ಹೊಸ ಅವಕಾಶದ ಸಾಧ್ಯತೆ. ಉದ್ದಿಮೆದಾರರಿಗೆ ಪ್ರಗತಿ. ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರು. ಆಸ್ತಿ ವಿವಾದದ ಒತ್ತಡ. ಶುಭಸಂಖ್ಯೆ: 6
ವೃಶ್ಚಿಕ: ವ್ಯಾಪಾರದಲ್ಲಿ ಹೊಸ ಪಾಲುದಾರರ ಪ್ರವೇಶ. ನ್ಯಾಯಾಲಯದ ಪ್ರಕರಣದಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 7
ಧನು: ಕಚೇರಿಯಲ್ಲಿ ವಿವಾದ ಸೃಷ್ಟಿಯಾಗಬಹುದು. ಮೇಲಧಿಕಾರಿಗಳಿಂದ ನಿಮ್ಮ ನಿರ್ಲಕ್ಸ್ಯ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 4
ಮಕರ: ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಸಾಮಾಜಿಕವಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಶುಭಸಂಖ್ಯೆ: 3
ಕುಂಭ: ಸಂಗಾತಿಯಿಂದ ಬೆಂಬಲ. ಮಾನಸಿಕ ಗೊಂದಲಕ್ಕೆ ಗುರಿಯಾಗುವಿರಿ. ನಿಮ್ಮ ದೌರ್ಬಲ್ಯಗಳನ್ನು ಯಾರಿಗೂ ಹೇಳಬೇಡಿ. ಶುಭಸಂಖ್ಯೆ: 8
ಮೀನ: ವ್ಯಾಪಾರಸ್ಥರಿಗೆ ಉತ್ತಮ ಫಲಿತಾಂಶ. ಪ್ರಭಾವಿಗಳ ಸಂಪರ್ಕ. ಆತ್ಮವಿಶ್ವಾಸ ಹೆಚ್ಚಿಸುವ ಟನೆ. ಗೆಳೆಯರೊಂದಿಗೆ ಮನಸ್ತಾಪ. ಶುಭಸಂಖ್ಯೆ: 2