ನ್ಯೂಸ್

ಈ ರಾಶಿಯವರಿಗೆ ಇಂದು ಸಂಗಾತಿಯಿಂದ ಸೂಕ್ತ ಸಲಹೆ: ನಿತ್ಯಭವಿಷ್ಯ

ಮೇಷ: ಮಾನಸಿಕ ಖಿನ್ನತೆಯಿಂದ ಹೊರಬನ್ನಿ. ಕಚೇರಿಯಲ್ಲಿ ತಾಳ್ಮೆಯಿಂದ ವರ್ತಿಸಿ. ವ್ಯಾಪಾರಸ್ಥರಿಗೆ ಕೆಲಸಗಾರರಿಂದ ಕಿರಿಕಿರಿ. ಶುಭಸಂಖ್ಯೆ: 7

ವೃಷಭ: ಬಂಧುಗಳಿಂದ ತೊಂದರೆಯಾಗಬಹುದು. ಕಾರ್ಯಸಿದ್ಧಿಯಲ್ಲಿ ನಿಮ್ಮವರಿಂದಲೇ ಪ್ರತಿರೋಧ. ಮನೋವ್ಯಥೆ. ಧನಹಾನಿ. ಶುಭಸಂಖ್ಯೆ: 9

ಮಿಥುನ: ಮನೆಯಲ್ಲಿ ಬಿಗುವಿನ ವಾತಾವರಣ ಮುಂದುವರಿಯುವಿಕೆ. ಸರ್ಕಾರಿ ಉದ್ಯೋಗಿಗಳಿಗೆ ಕಿರುಕುಳ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 3

ಕಟಕ: ಉದ್ದಿಮೆ, ವ್ಯಾಪಾರ ಪ್ರಗತಿಯಲ್ಲಿ ಸಾಗುತ್ತವೆ. ನಿಮ್ಮ ಹಲವು ವರ್ಷಗಳ ಪರಿಶ್ರಮಕ್ಕೆ ಫಲ ದೊರೆಯುವ ಸಮಯ. ಶುಭಸಂಖ್ಯೆ: 8

ಸಿಂಹ: ಬಂಧುಗಳೊಂದಿಗೆ ಮನಸ್ತಾಪ ಉಂಟಾಗಬಹುದು. ದುರ್ಬಲರಿಗೆ ಸಹಾಯಮಾಡಿ. ಭೂಮಿ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 1

ಕನ್ಯಾ: ಆಸ್ತಿವಿಚಾರಕ್ಕಾಗಿ ಸಹೋದರಿಯರೊಂದಿಗೆ ಮನಸ್ತಾಪ. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಮಗಳ ವಿವಾಹದ ಪ್ರಸ್ತಾಪ. ಶುಭಸಂಖ್ಯೆ: 6

ತುಲಾ: ನಿರೀಕ್ಷಿಸಿದಂತೆ ಲಾಭಪ್ರಾಪ್ತಿ. ಮಕ್ಕಳಿಂದ ಧನಹಾನಿ ಉಂಟಾಗುವ ಸಾಧ್ಯತೆ. ಸಾರ್ವಜನಿಕ ಜೀವನದಲ್ಲಿ ಪ್ರಗತಿ. ಶುಭಸಂಖ್ಯೆ: 6

ವೃಶ್ಚಿಕ: ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು, ಕಾಳಜಿ ವಹಿಸಿ. ಆಸ್ತಿ ಖರೀದಿಗೆ ನಿರ್ಧಾರ. ಮನೆಯಲ್ಲಿ ಮಂಗಳಕಾರ್ಯ. ಶುಭಸಂಖ್ಯೆ: 4

ಧನುಸ್ಸು: ಹಿರಿಯರ ಸಹಾಯದಿಂದ ಜಟಿಲ ಸಮಸ್ಯೆ ಇತ್ಯರ್ಥ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 1

ಮಕರ: ಆರ್ಥಿಕ ಕಾರಣಕ್ಕೆ ಮನೆಯಲ್ಲಿ ವಾಗ್ವಾದ. ನಿರೀಕ್ಷಿತ ಕೆಲಸದಲ್ಲಿ ವೈಫಲ್ಯ. ಆರೋಗ್ಯದಲ್ಲಿ ತೊಂದರೆ. ಮಕ್ಕಳಿಂದ ಸಮಾಧಾನ. ಶುಭಸಂಖ್ಯೆ: 7

ಕುಂಭ: ತಂದೆ ತಾಯಿಯ ಆರೋಗ್ಯದಲ್ಲಿ ವ್ಯತ್ಯಯ. ಕುಟುಂಬದೊಂದಿಗೆ ಸಮಯ ಕಳೆಯಿರಿ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 7

ಮೀನ: ಸಂಗಾತಿಯಿಂದ ಸೂಕ್ತಸಲಹೆ. ಕಾರ್ಯಸಿದ್ಧಿ. ಸಹೋದರರೊಂದಿಗೆ ವಿರಸ. ಕುಟುಂಬದಲ್ಲಿ ಹೊಂದಾಣಿಕೆ ಸಮಸ್ಯೆ. ಒತ್ತಡ. ಶುಭಸಂಖ್ಯೆ: 7