ನ್ಯೂಸ್

ಈ ರಾಶಿಯವರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಇಂದು ಉತ್ತರ ಸಿಗುವುದು: ನಿತ್ಯಭವಿಷ್ಯ

ಮೇಷ: ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪ್ರಶಂಸೆಗೆ ಪಾತ್ರವಾಗುತ್ತದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅನಿವಾರ್ಯ. ಶುಭಸಂಖ್ಯೆ: 9

ವೃಷಭ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ವ್ಯವಹಾರಗಳಲ್ಲಿ ನುರಿತವರ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 1

ಮಿಥುನ: ಉದ್ಯೋಗ ಬದಲಿಸುವ ವಿಚಾರದಲ್ಲಿ ಮರು ಚಿಂತಿಸಿ. ವಿದೇಶ ವ್ಯವಹಾರದಿಂದ ಅಧಿಕ ಸಮಯವನ್ನು ಮೀಸಲಿಡಬೇಕಾಗುತ್ತದೆ. ಶುಭಸಂಖ್ಯೆ: 8

ಕಟಕ: ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯುವಿರಿ. ನೂತನ ವಸ್ತು ಖರೀದಿ. ದಾನ ಧರ್ಮ ಮಾಡಿಸುವುದ ರಿಂದ ಕಷ್ಟಗಳು ದೂರ. ಶುಭಸಂಖ್ಯೆ: 4

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾದಾವು. ಒಪ್ಪಂದಗಳು, ಹಣದ ಹೂಡಿಕೆ ಬೇಡ. ಮಹಿಳೆಯರಿಗೆ ಆಭರಣಗಳ ಲಾಭ. ಶುಭಸಂಖ್ಯೆ:4

ಕನ್ಯಾ: ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳಬೇಡಿ. ಸೇವಕ ವರ್ಗದವರಲ್ಲಿ ವಿಶ್ವಾಸದಿಂದ ವ್ಯವಹರಿಸಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಶುಭಸಂಖ್ಯೆ: 7

ತುಲಾ: ಸಾಧನೆಯ ಫಲವಾಗಿ ಆತ್ಮವಿಶ್ವಾಸ ಹೆಚ್ಚುವುದು. ಸ್ನೇಹಿತರಿಂದ ಸಲಹೆ. ಸ್ಥಗಿತಗೊಂಡಿದ್ದ ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ:1

ವೃಶ್ಚಿಕ: ಹೊಸದಾಗಿ ಉದ್ಯೋಗಕ್ಕೆ ಸೇರಲು ಸಿದ್ಧತೆ. ಶ್ರೀಮಂತ ಬದುಕಿನತ್ತ ಮನ ಮಾಡುವಿರಿ. ಯೋಜನೆಗಳು ವ್ಯವಸ್ಥಿತವಾಗಿ ಸಾಗಲಿವೆ. ಶುಭಸಂಖ್ಯೆ: 2

ಧನುಸ್ಸು: ಕುಟುಂಬ ನಿರ್ವಹಣೆಗಾಗಿ ಅಧಿಕ ಖರ್ಚು ಮಾಡಬೇಕಾದರೂ ಆದಾಯಕ್ಕೆ ಕೊರತೆ ಇರುವುದಿಲ್ಲ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 1

ಮಕರ: ಹೂವು-ಹಣ್ಣು, ಹಾಲಿನ ವ್ಯಾಪಾರಿಗಳಿಗೆ ಅಧಿಕ ಲಾಭ. ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬಾಧಿಸುವ ಸಂಭವಿದೆ. ಶುಭಸಂಖ್ಯೆ: 2

ಕುಂಭ: ನಿಮ್ಮ ಉದಾರತೆಯ ದುರುಪಯೋಗವಾಗದಂತೆ ಜಾಗೃತೆ ವಹಿಸಿ. ಸಹ ಕೆಲಸಗಾರರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 8

ಮೀನ: ಕಾಡುತ್ತಿರುವ ಸಮಸ್ಯೆಗಳಿಗೆ ಇಂದು ಉತ್ತರ ಸಿಗುವುದು. ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ. ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 2