ನ್ಯೂಸ್

ಮನಸು ದೃಢವಾಗಿರಲಿ ಈ ರಾಶಿಯವರಿಗೆ; ಹತ್ತಿರದವರೇ ನೋವುಂಟು ಮಾಡಬಹುದು !

ಮೇಷ: ಬಹಳ ದಿನಗಳಿಂದ ಭೇಟಿಯಾಗಿರದ ಹಳೆಯ ಮಿತ್ರರಿಂದ ಸಂತಸದ ಸಮಾಚಾರ ಲಭ್ಯವಾಗಿ ಸಂತಸ ನೀಡಲಿದೆ. ಶುಭಸಂಖ್ಯೆ: 7

ವೃಷಭ: ತಮ್ಮ ಹಕ್ಕು ಎಂಬ ಕಾರಣವನ್ನು ಮುಂದೆ ಮಾಡಿ ವ್ಯಾಜ್ಯ ಹೂಡಲು ಪ್ರಯತ್ನಿಸುವವರನ್ನು ನಿರ್ಲಕ್ಷಿಸಿದರೆ ಒಳಿತು. ಶುಭಸಂಖ್ಯೆ: 2

ಮಿಥುನ: ಖರ್ಚಿನ ಯಾದಿಯೊಂದು ಅನಿರೀಕ್ಷಿತವಾಗಿ ಎದುರಾಗಿ ಕಂಗೆಡುವಿರಿ. ಸಂದರ್ಭವನ್ನು ಹುಷಾರಾಗಿ ಎದುರಿಸಿ. ಶುಭಸಂಖ್ಯೆ: 8

ಕಟಕ: ಹತ್ತಿರದವರಿಂದಲೇ ಕೆಲವು ನೋವಿನ ಮಾತುಗಳು ಕೇಳಿಬರಬಹುದು. ಮನಸ್ಸು ಸದೃಢವಾಗಿದ್ದರೆ ಉತ್ತಮ. ಶುಭಸಂಖ್ಯೆ: 6

ಸಿಂಹ: ಅದೃಷ್ಟದ ಮೂಲಕ ನಿಮಗಿಂದು ಹೊಸದೆ ಚೈತನ್ಯವನ್ನು ಸಂಪಾದಿಸಿಕೊಳ್ಳುವಂಥ ಶುಭಸಂದರ್ಭ ಸೃಷ್ಟಿಯಾಗಲಿದೆ. ಶುಭಸಂಖ್ಯೆ: 9

ಕನ್ಯಾ: ನಿಮ್ಮ ಪ್ರತಿಭೆ ವಿಶಿಷ್ಟವಾದುದು. ಅದನ್ನು ಪ್ರದರ್ಶಿಸುವ ವಿಚಾರದಲ್ಲಿ ಯೋಗ್ಯ ಜನರನ್ನು ಭೇಟಿಯಾಗಿ. ಒಳಿತಿದೆ. ಶುಭಸಂಖ್ಯೆ: 4

ತುಲಾ: ಚಲನಚಿತ್ರ ನಿರ್ಮಾಪಕರು, ಹೋಟೆಲ್ ಉದ್ಯಮಿಗಳು ಹಣ ಹೂಡುವ ಮುನ್ನ ಯೋಚಿಸಿ ನಿರ್ಧರಿಸಿದರೆ ಉತ್ತಮ. ಶುಭಸಂಖ್ಯೆ: 5

ವೃಶ್ಚಿಕ: ನಾನಾ ಥರದ ಆಮಿಷಗಳನ್ನು ತೋರುವ, ಮಾತಿನಿಂದ ಮೋಡಿಮಾಡುವ ಜನ ಮೋಸ ಮಾಡಿಯಾರು. ಎಚ್ಚರ. ಶುಭಸಂಖ್ಯೆ: 3

ಧನಸ್ಸು: ಮಕ್ಕಳನ್ನು ಚಿಕ್ಕವರೆಂದು ಅಲಕ್ಷ್ಯ ಮಾಡದೆ ಪ್ರೀತಿಯಿಂದ ಮಾತನಾಡಿ. ತಿದ್ದಿ ಪಾಠ ಕಲಿಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 7

ಮಕರ: ತಿಳಿದ ವಿಚಾರಗಳನ್ನು ಶಾಂತ ರೀತಿಯಲ್ಲಿ ನಿರೂಪಿಸಿ. ಮಾತನಾಡದೆ ಹಿಂಜರಿಕೆ ತೋರಿದರೆ ಸೋಲಬೇಕಾದೀತು. ಶುಭಸಂಖ್ಯೆ: 2

ಕುಂಭ: ವಿವಾಹಾಪೇಕ್ಷಿಗಳು ನಿರೀಕ್ಷೆಯಿಂದ ಕಷ್ಟಪಡುತ್ತಿದ್ದೀರಿ. ಹಿರಿಯ ಮಹಿಳೆಯಿಂದ ಉತ್ತಮ ಸಲಹೆಗಳು ಸಿಗಲಿವೆ. ಶುಭಸಂಖ್ಯೆ: 8

ಮೀನ: ಯಶಸ್ಸಿಗಾಗಿ ಒಂದೇ ದಾರಿಯನ್ನು ನೆಚ್ಚದೆ ವಿವಿಧ ದಾರಿಗಳ ಆಯ್ಕೆಗೆ ಅವಕಾಶ ಕೊಡಿ. ನೆಮ್ಮದಿಯನ್ನು ಪಡೆಯುವಿರಿ. ಶುಭಸಂಖ್ಯೆ: 1