ಮೇಷ: ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೊಸ ವ್ಯಾಪಾರ ಪ್ರಾರಂಭಿಸಲು ನಿರ್ಧಾರ. ಪಿತೃ ಮೂಲವಾದ ಧನಪ್ರಾಪ್ತಿ. ಶುಭಸಂಖ್ಯೆ: 8
ವೃಷಭ: ಹೆಚ್ಚಿನ ಆಸಕ್ತಿಯಿಂದ ಕಾರ್ಯ ನಿರ್ವಹಿಸಿ. ಕುಟುಂಬದಲ್ಲಿ ಶುಭಕಾರ್ಯಕ್ಕೆ ಚಾಲನೆ. ನನೆಗುದಿಗೆ ಬಿದ್ದ ಕಾರ್ಯ ಪುನರಾರಂಭ. ಶುಭಸಂಖ್ಯೆ: 3
ಮಿಥುನ: ಆರ್ಥಿಕ ಮುಗ್ಗಟ್ಟು ಪರಿಹಾರ. ಕೂಡಿಟ್ಟ ಹಣ ಇಂದು ನಿಮಗೆ ಸಹಕಾರಿ ಆಗಲಿದೆ. ಕುಟುಂಬದೊಂದಿಗೆ ಸಂತಸ ಹಂಚಿಕೊಳ್ಳಿ. ಶುಭಸಂಖ್ಯೆ: 6
ಕಟಕ: ಕಾನೂನು ವಿಚಾರದಲ್ಲಿ ಸಮಸ್ಯೆ. ಮಗಳ ಮದುವೆಯ ವಿಷಯದಲ್ಲಿ ಸಿಹಿಸುದ್ದಿ. ಉದ್ಯೋಗಾಕಾಂಕ್ಷಿಗಳಿಗೆ ಕಾರ್ಯಸಿದ್ದಿ. ಶುಭಸಂಖ್ಯೆ: 3
ಸಿಂಹ: ನಿಮ್ಮ ನೇರ ನಡೆ ನುಡಿಯಿಂದ ಸಹೋದ್ಯೋಗಿಗಳ ಮನಗೆಲ್ಲಲಿದ್ದೀರಿ. ಹಿತಶತ್ರುಗಳು ಹೆಣೆದ ತಂತ್ರಕ್ಕೆ ಬಲಿಯಾಗುವ ಸಾಧ್ಯತೆ. ಶುಭಸಂಖ್ಯೆ: 1
ಕನ್ಯಾ: ನೂತನ ಮನೆ ಕಟ್ಟಲು ಚಾಲನೆ. ಸ್ವಂತ ಗ್ರಾಮಕ್ಕೆ ಭೇಟಿ, ಸಮಾಧಾನ. ಸಾರ್ವಜನಿಕ ರಂಗದಲ್ಲಿ ನಿಮ್ಮ ಅಸಹನೆಯಿಂದ ಕಿರಿಕಿರಿ. ಶುಭಸಂಖ್ಯೆ: 9
ತುಲಾ: ಚಿತ್ರಕಾರರಿಗೆ ವಿಶೇಷ ಪುರಸ್ಕಾರ. ಸೃಜನಶೀಲತೆಯಿಂದ ಜನಪ್ರಿಯತೆಯ ಉತ್ತುಂಗ. ಮನಸ್ಸಿಗೆ ಮುದನೀಡುವ ಘಟನೆ. ಶುಭಸಂಖ್ಯೆ: 6
ವೃಶ್ಚಿಕ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಕಾರ್ಯಒತ್ತಡ. ಕೃಷಿಕರಿಗೆ ಶುಭ ದಿನ. ಶುಭಸಂಖ್ಯೆ: 5
ಧನುಸ್ಸು: ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ. ಪ್ರೀತಿಪಾತ್ರರೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 7
ಮಕರ: ನಿಮ್ಮ ಮೇಲಿನ ಭರವಸೆಗಳನ್ನು ದೃಢಪಡಿಸಿ. ಬಂಧುಗಳ ಆಗಮನದಿಂದ ಸಂತಸ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 3
ಕುಂಭ: ವರಾನ್ವೇಷಣೆಗೆ ಸೂಕ್ತ ಪ್ರತಿಕ್ರಿಯೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕೂಡಿ ಬರಲಿದೆ. ನಿವೇಶನ ಖರೀದಿ ಸಾಧ್ಯತೆ. ಶುಭಸಂಖ್ಯೆ: 4
ಮೀನ: ಸಗಟು ವ್ಯಾಪಾರಿಗಳಿಗೆ ಆರ್ಥಿಕ ಲಾಭದ ಸಾಧ್ಯತೆ. ಕುಟುಂಬದೊಂದಿಗೆ ಪ್ರವಾಸ. ಸಾಲದಿಂದ ಮುಕ್ತಿ ಹೊಂದಲು ಅವಕಾಶ. ಶುಭಸಂಖ್ಯೆ: 1