ಮೇಷ: ಷೇರು ವ್ಯವಹಾರದಲ್ಲಿ ಲಾಭ. ರತ್ನಾಭರಣ ಖರೀದಿಗೆ ಯೋಚನೆ. ತಾಯಿಯಿಂದ ಧನಸಹಾಯ. ಕೃಷಿಕರಿಗೆ ಅನುಕೂಲವಿದೆ. ಶುಭಸಂಖ್ಯೆ: 9
ವೃಷಭ: ವ್ಯಾಪಾರದಲ್ಲಿ ಅನುಕೂಲ. ಅನಾರೋಗ್ಯದಿಂದ ಗಾಬರಿ. ಅವಮಾನ ಅಪವಾದಗಳು. ವಿದ್ಯಾಭ್ಯಾಸ ದಲ್ಲಿ ಗೊಂದಲ ಆಗಬಹುದು. ಶುಭಸಂಖ್ಯೆ: 1
ಮಿಥುನ: ಮೋಸ ಮತ್ತು ನಷ್ಟಗಳು. ಕೌಟುಂಬಿಕ ಚಿಂತೆ. ಮಾತಿನಿಂದ ತೊಂದರೆ. ಆಭರಣ ಕಳವು. ಮೋಜು ಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 5
ಕಟಕ: ಮಿತ್ರರಿಂದ ಅನುಕೂಲ. ಸಂಸ್ಥೆಗಳಿಂದ ಸಹಾಯ. ಅನಾರೋಗ್ಯದಿಂದ ಚೇತರಿಕೆ. ಕೆಲಸಗಾರರಿಂದ ಬಾಧೆ ಅನುಭವಿಸುವಿರಿ. ಶುಭಸಂಖ್ಯೆ: 8
ಸಿಂಹ: ಮಕ್ಕಳಿಂದ ಅನುಕೂಲ. ದುಶ್ಚಟಗಳಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ಅನುಕೂಲ. ಉದ್ಯೋಗ ಬದಲಾವಣೆಯಿಂದ ತೊಂದರೆ. ಶುಭಸಂಖ್ಯೆ: 2
ಕನ್ಯಾ: ಸ್ಥಿರಾಸ್ತಿಯಿಂದ ಅನುಕೂಲ. ವಾಹನ ಯೋಗ. ಅಧಿಕ ಲಾಭ. ಮಿತ್ರರಿಂದ ಸಹಾಯ. ಪ್ರಯಾಣದಲ್ಲಿ ಅನುಕೂಲ. ದೈವ ಚಿಂತನೆ. ಶುಭಸಂಖ್ಯೆ: 7
ತುಲಾ: ಉದ್ಯೋಗ ಬದಲಾವಣೆಯ ಚಿಂತೆ. ಸೋಲು - ನಷ್ಟ, ನಿರಾಸೆಗಳು. ಅನಿರೀಕ್ಷಿತ ಪ್ರಯಾಣ. ಮಿತ್ರರಿಂದ ಸಹಾಯದ ನಿರೀಕ್ಷೆ. ಶುಭಸಂಖ್ಯೆ: 4
ವೃಶ್ಚಿಕ: ಪಾಲುದಾರಿಕೆಯಿಂದ ಧನಲಾಭ. ಸಂಗಾತಿಯಿಂದ ಅನುಕೂಲ. ವಿಷಯಾಸಕ್ತಿಗಳ ವ್ಯಾಮೋಹ. ವ್ಯಾಪಾರದಲ್ಲಿ ಕಾರ್ಯಜಯ. ಶುಭಸಂಖ್ಯೆ: 3
ಧನುಸ್ಸು: ಶತ್ರು ಕಾಟ. ಅನಾರೋಗ್ಯದ ಚಿಂತೆ. ಕೆಲಸಗಾರರಿಂದ ಕಿರಿಕಿರಿ. ಮಹಿಳೆಯರಿಂದ ನಿಂದನೆ. ಆರ್ಥಿಕ ವ್ಯವಹಾರದಲ್ಲಿ ಅಡೆತಡೆ. ಶುಭಸಂಖ್ಯೆ: 6
ಮಕರ: ಮಕ್ಕಳಿಗೋಸ್ಕರ ಅಧಿಕ ಖರ್ಚು. ಪ್ರೀತಿ-ಪ್ರೇಮದಲ್ಲಿ ಆಸಕ್ತಿ ಹೆಚ್ಚು. ಕಲಾಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯದು. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 5
ಕುಂಭ: ಸ್ಥಿರಾಸ್ತಿ ಯೋಗ. ಅನಾರೋಗ್ಯ. ತಾಯಿಯಿಂದ ಅನುಕೂಲ. ಪವಿತ್ರ ಯಾತ್ರಾಸ್ಥಳ ದರ್ಶನ. ಶುಭಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ: 3
ಮೀನ: ದೂರ ಪ್ರಯಾಣ. ಭಾವನೆಗೆ ನೋವು. ಅನಗತ್ಯ ತಿರುಗಾಟ ಮಾಡಬೇಕಾದೀತು. ಉದ್ಯೋಗ ಸ್ಥಳದಲ್ಲಿ ಒತ್ತಡ. ಗೌರವಕ್ಕೆ ಹಿನ್ನಡೆ. ಶುಭಸಂಖ್ಯೆ: 4