ಮೇಷ: ಇಷ್ಟಪಟ್ಟು ಕೆಲಸ ಮಾಡುವಿರಿ. ಕುಟುಂಬದವರೇ ಕೈಕೊಡುವ ಸಾಧ್ಯತೆ ಇದೆ. ಇಷ್ಟ ದೇವರನ್ನು ಪ್ರಾರ್ಥಿಸಿದರೆ ಕಾರ್ಯಸಿದ್ಧಿ. ಶುಭಸಂಖ್ಯೆ: 2
ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅನಿರೀಕ್ಷಿತ ಲಾಭ. ಚಿತ್ತ ಚಾಂಚಲ್ಯವನ್ನು ನಿಯಂತ್ರಿಸುವುದು ಎಲ್ಲ ದೃಷ್ಟಿಯಿಂದಲೂ ಅಗತ್ಯ. ಶುಭಸಂಖ್ಯೆ: 6
ಮಿಥುನ: ಮನೆಯಲ್ಲಿ ಕಿರಿಕಿರಿ. ಕುಟುಂಬದ ಬಿಗುವಿನ ವಾತಾವರಣವನ್ನು ತಿಳಿಯಾಗಿಸಿ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 9
ಕಟಕ: ಸ್ನೇಹಿತನ ಭೇಟಿ. ಹಣದ ಅಪವ್ಯಯ ಆಗಬಹುದು, ಜಾಗರೂಕರಾಗಿರಿ. ಹಿರಿಯ ಅಧಿಕಾರಿಗಳಿಂದ ಛೀಮಾರಿ. ಶುಭಸಂಖ್ಯೆ: 1
ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಶ್ರಮ ಖಂಡಿತ ವ್ಯರ್ಥವಾಗುವುದಿಲ್ಲ. ದುಂದುವೆಚ್ಚ ಆಗದಂತೆ ಎಚ್ಚರವಹಿಸಿ. ಶುಭಸಂಖ್ಯೆ: 3
ಕನ್ಯಾ: ಆತ್ಮೀಯ ಸ್ನೇಹಿತನ ಭೇಟಿ. ಈ ದಿನ ನಿಮ್ಮ ಸ್ನೇಹಿತನ ನೈಜ ಅಂತರಾತ್ಮಗೊತ್ತಾಗುವುದು. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 4
ತುಲಾ: ಅನಗತ್ಯ ವಿಷಯಗಳಲ್ಲಿ ತಲೆ ಹಾಕಬೇಡಿ. ಮಕ್ಕಳಿಂದ ನಷ್ಟ. ಕಚೇರಿಯಲ್ಲಿ ಸ್ನೇಹಿತರ ಸಲಹೆ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 6
ವೃಶ್ಚಿಕ: ಸಮಯ ಸಾಧಕರಿಂದ ದೂರ ಇರಿ. ನಿಮ್ಮ ವಿಶೇಷ ಪ್ರತಿಭೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗ ಸಾಧ್ಯತೆ. ಶುಭಸಂಖ್ಯೆ: 2
ಧನುಸ್ಸು: ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 3
ಮಕರ: ಅನಿರೀಕ್ಷಿತ ಫಲಿತಾಂಶ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಾಲಿಸಿ. ಹಿರಿಯರಿಂದ ವಿಶೇಷ ಮಾರ್ಗದರ್ಶನ. ಶುಭಸಂಖ್ಯೆ: 4
ಕುಂಭ: ವೈದ್ಯರ ಸಲಹೆಗಳನ್ನು ಪಾಲಿಸಿ. ಅನವಶ್ಯಕ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಶ್ರಮ ಅನಿವಾರ್ಯ. ಶುಭಸಂಖ್ಯೆ: 9
ಮೀನ: ಆತ್ಮವಿಶ್ವಾಸದಿಂದ ಮುಂದುವರಿಯಿರಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಭೂಮಿ ಖರೀದಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 1