ಮೇಷ: ಎದುರಾಗುವ ವಿಷಮ ಸಂದರ್ಭಗಳನ್ನು ಎದುರಿಸುವ ಸಂಕಲ್ಪಶಕ್ತಿಗೆ ಕೊರತೆ ಇರದು. ಅಂಜದೆ ಬಂದಿದ್ದನ್ನು ಎದುರಿಸಿ. ಶುಭಸಂಖ್ಯೆ: 4
ವೃಷಭ: ವ್ಯಾಪಾರಕ್ಕೆ ಸಂಬಂಧಿಸಿದ ಪ್ರವಾಸವೊಂದಕ್ಕೆ ಚಾಲನೆ ದೊರೆಯಲಿದೆ. ಆದರೆ ಆತುರಪಡದಿರಿ. ನಿಧಾನಗತಿಯ ನಿರ್ಧಾರವಿರಲಿ. ಶುಭಸಂಖ್ಯೆ: 7
ಮಿಥುನ: ಶುಭಕರವಾದ ಸಮಾಚಾರವನ್ನು ಕೇಳುವಿರಿ. ರತ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ಮುಂದಾಗದಿರುವುದೇ ಉತ್ತಮ. ಶುಭಸಂಖ್ಯೆ: 1
ಕಟಕ: ಅಂತರ್ಗತ ಪ್ರತಿಭೆಯಿಂದ ಜನಮನಗಳನ್ನು ಗೆಲ್ಲಲು ಹೆಚ್ಚಿನದಾದ ಅವಕಾಶಗಳಿವೆ. ಈ ಬಗ್ಗೆ ಬಾಳಸಂಗಾತಿಯ ಬಳಿ ರ್ಚಚಿಸಿ. ಶುಭಸಂಖ್ಯೆ: 5
ಸಿಂಹ: ಉತ್ತಮವಾದ ದಿನಗಳಿಗೆ ತಳಹದಿಯೊಂದು ಸಿದ್ಧವಾಗಲಿದೆ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸಲು ಶ್ರಮಿಸಬೇಕು. ಶುಭಸಂಖ್ಯೆ: 3
ಕನ್ಯಾ: ತಂದೆ-ತಾಯಿಯಿಂದ ಅತ್ಯಮೂಲ್ಯವಾದ ವಿಚಾರವೊಂದನ್ನು ಪಡೆದುಕೊಳ್ಳಲಿದ್ದೀರಿ. ಸನ್ನಡತೆಯಿಂದ ಲಾಭವಾಗಲಿದೆ. ಶುಭಸಂಖ್ಯೆ: 8
ತುಲಾ: ಕಟ್ಟಡ ವಿನ್ಯಾಸಕಾರರಿಗೆ ವಿಶೇಷ ಬೇಡಿಕೆಯ ದಿನ. ಉತ್ತಮವಾದ ಕೆಲಸಕ್ಕೆ ದಾರಿಯೊಂದು ಲಭ್ಯ. ತುಸು ನಿರಾಳರಾಗಿರಿ. ಶುಭಸಂಖ್ಯೆ: 6
ವೃಶ್ಚಿಕ: ಮೇಲಧಿಕಾರಿಗಳು ನಿಮ್ಮ ಕಾರ್ಯಗಳನ್ನೆಲ್ಲ ಮೆಚ್ಚಿಕೊಳ್ಳಲಿದ್ದಾರೆ. ಹೊಸದಾದ ಯೋಜನೆಗಳಿಗೆ ಹಸಿರು ನಿಶಾನೆಯೇ ಕಾಣಿಸಲಿದೆ. ಶುಭಸಂಖ್ಯೆ: 2
ಧನುಸ್ಸು: ಮಕ್ಕಳ ಕಾರಣದಿಂದಾಗಿ ನೀವು ಹೆಮ್ಮೆಪಡುವ ಯೋಗವಿದೆ. ಇಲ್ಲಿಯವರೆಗಿನ ಅಡೆತಡೆಗಳಿಗೆ ಅಂತ್ಯವೂ ದೊರೆಯಲಿದೆ. ಶುಭಸಂಖ್ಯೆ: 9
ಮಕರ: ದೇಹದ ಬಗ್ಗೆ ಮೊದಲು ಕಾಳಜಿ ವಹಿಸುವುದು ಮುಖ್ಯವಾಗಲಿ. ವಿಷ್ಣು ಸಹಸ್ರನಾಮಾವಳಿ ಓದಿ. ಫಲಸಿದ್ಧಿ ಸಾಧ್ಯವಾಗಲಿದೆ. ಶುಭಸಂಖ್ಯೆ: 7
ಕುಂಭ: ಅನೇಕ ಹಳೆಯ ಗೆಳೆಯರನ್ನು ಭೇಟಿಯಾಗುವಿರಿ. ಅವರ ಸಲಹೆಗಳಿಂದ ಪ್ರಗತಿಯ ಜೀವನಕ್ಕೆ ವಿಸ್ತಾರವಾದ ದಾರಿ ಲಭಿಸಲಿದೆ. ಶುಭಸಂಖ್ಯೆ: 4
ಮೀನ: ಬಿಗುಮಾನ ಬಿಟ್ಟರೆ ಜಯ ಸಾಧಿಸುವಿರಿ. ಕೆಲವು ಮುಖ್ಯ ಸಂದರ್ಭಗಳಲ್ಲಿ ಬಾಳಸಂಗಾತಿಯ ಸಲಹೆಗಳಂತೆ ನಡೆದುಕೊಳ್ಳಿ. ಶುಭಸಂಖ್ಯೆ: 1