ಮೇಷ: ಕುಟುಂಬದ ಸಲಹೆ ಪಡೆದು ಆಸ್ತಿ ವಿಚಾರದಲ್ಲಿ ಮುಂದುವರಿಯಿರಿ. ಮಿತ್ರವರ್ಗದಿಂದ ಲಾಭ. ಕಲಾವಿದರಿಗೆ ಮಾನ ಸನ್ಮಾನ. ಶುಭಸಂಖ್ಯೆ: 9
ವೃಷಭ: ಅಗಣಿತ ಘಟನೆಗಳಿಗೆ ನೀವು ಸಾಕ್ಷಿಯಾಗುವ ಸಾಧ್ಯತೆ. ಸಹೋದ್ಯೋಗಿಗಳಿಂದ ಕಿರಿಕಿರಿ. ಮಕ್ಕಳ ಬಗ್ಗೆ ಕಾಳಜಿವಹಿಸಿ. ಶುಭಸಂಖ್ಯೆ: 1
ಮಿಥುನ: ಹಿತಶತ್ರುಗಳಿಂದ ತೊಂದರೆ. ಹಿರಿಯರ ಆರೋಗ್ಯದಲ್ಲಿ ಏರುಪೇರು. ಮಾವನ ಸಹಕಾರ ದೊರಕಿ ಸಮಸ್ಯೆ ಪರಿಹಾರ. ಶುಭಸಂಖ್ಯೆ: 3
ಕಟಕ: ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಬರಬಹುದು. ಅಮೂಲ್ಯ ವಸ್ತು ಸಂಗ್ರಹಿಸಲಿದ್ದೀರಿ. ಮಹಿಳೆಯರ ಆಸೆ ಈಡೇರಲಿದೆ. ಶುಭಸಂಖ್ಯೆ: 3
ಸಿಂಹ: ಮನೆ ಖರೀದಿಗೆ ನಿರ್ಧಾರ. ಕಬ್ಬಿಣ ವ್ಯಾಪಾರಿಗಳಿಗೆ ವಿಶೇಷ ಲಾಭ. ಮಿತ್ರರ ಕೆಲಸದಲ್ಲಿ ಸಿದ್ದಿ. ಭೂಮಿ ವ್ಯವಹಾರಗಳಲ್ಲಿ ಮೋಸ. ಶುಭಸಂಖ್ಯೆ: 7
ಕನ್ಯಾ: ಸಾಲ ಮರುಪಾವತಿಗೆ ಕಾಲ ಕೂಡಿ ಬರಲಿದೆ. ಹಿರಿಯರ ಮಾತು ಗೌರವಿಸಿ. ಆಭರಣ ವ್ಯಾಪಾರಿಗಳಿಗೆ ಮೋಸ ಸಾಧ್ಯತೆ. ಶುಭಸಂಖ್ಯೆ: 6
ತುಲಾ: ಧಾರ್ವಿುಕ ಆಚರಣೆಗಳಿಂದ ಮನಸ್ಸಿಗೆ ಆನಂದ. ದೂರ ಪ್ರಯಾಣ ಸಾಧ್ಯತೆ. ಸಂತೃಪ್ತ ದಾಂಪತ್ಯ ಜೀವನದ ಸಂತಸ. ಶುಭಸಂಖ್ಯೆ: 9
ವೃಶ್ಚಿಕ: ಕ್ರಿಯಾಶೀಲತೆಯಿಂದ ಯಶಸ್ಸು. ಕುಟುಂಬ ಸಮೇತ ಧಾರ್ವಿುಕ ಕ್ಷೇತ್ರಕ್ಕೆ ಯಾತ್ರೆ. ಸಹನೆಯಿಂದ ಕಲಹವನ್ನು ಪರಿಹರಿಸಿ. ಶುಭಸಂಖ್ಯೆ: 7
ಧನುಸ್ಸು: ಹೆಚ್ಚಿನ ಆಸಕ್ತಿಯಿಂದ ಮಾಡಿದ ಕೆಲಸಕ್ಕೆ ಮನ್ನಣೆ. ಗೃಹೋಪಕರಣ ಖರೀದಿ ಸಾಧ್ಯತೆ. ಸಮಾಜದಲ್ಲಿ ಗೌರವ ದೊರೆತು ನೆಮ್ಮದಿ. ಶುಭಸಂಖ್ಯೆ:5
ಮಕರ: ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 8
ಕುಂಭ: ನ್ಯಾಯಾಲಯದ ಪ್ರಕರಣದಲ್ಲಿ ಜಯ. ಖಾಸಗಿ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ. ಹಿರಿಯರ ಸಲಹೆಯಿಂದ ಸಮಾಧಾನ. ಶುಭಸಂಖ್ಯೆ: 8
ಮೀನ: ಪ್ರತಿಭಾನ್ವಿತರಿಗೆ ಅವಕಾಶ. ವೈಯಕ್ತಿಕ ಸಮಸ್ಯೆಗೆ ಆತ್ಮೀಯ ಸ್ನೇಹಿತನಿಂದ ಪರಿಹಾರ. ಪ್ರೇಮ ಪ್ರಕರಣದಲ್ಲಿ ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 7