ನ್ಯೂಸ್

ಈ ರಾಶಿಯವರಿಗಿಂದು ಅಡೆತಡೆಗಳ ನಡುವೆಯೂ ಶುಭಕಾರ್ಯದಲ್ಲಿ ಯಶ: ನಿತ್ಯಭವಿಷ್ಯ

ಮೇಷ: ಬಟ್ಟೆ, ಲೋಹ ವ್ಯಾಪಾರಿಗಳಿಗೆ ವಿಶೇಷ ಆದಾಯ. ಹಣಕಾಸು ಸಂಸ್ಥೆಗಳ ಅಧಿಕಾರಿಗಳ ವ್ಯತಿರಿಕ್ತ ಸಲಹೆಯಿಂದಾಗಿ ನಷ್ಟಸಾಧ್ಯತೆ. ಶುಭಸಂಖ್ಯೆ: 9

ವೃಷಭ: ತರಕಾರಿ -ಹಣ್ಣು ವ್ಯಾಪಾರಸ್ಥರಿಗೆ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಶುಭಸಂಖ್ಯೆ: 9

ಮಿಥುನ: ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ನೆರೆಯವ ರೊಂದಿಗೆ ವಿರಸ ಉಂಟಾದೀತು. ಸಂಗಾತಿಗೆ ಭಾಗ್ಯೋದಯ ಸಾಧ್ಯತೆ ಇದೆ. ಶುಭಸಂಖ್ಯೆ: 5

ಕಟಕ: ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಸುತ್ತಾಟದಿಂದಾಗಿ ದೇಹಾಲಸ್ಯ. ಶುಭಸಂಖ್ಯೆ:7

ಸಿಂಹ: ಸಮಸ್ಯೆಗಳಿಗೆ ಪರಿಹಾರ. ತೈಲ ವ್ಯಾಪಾರಿಗಳಿಗೆ ವ್ಯವಹಾರದ ವೃದ್ಧಿಯಿಂದ ಧನಲಾಭ. ಲೆಕ್ಕಪತ್ರ ಮರುಪರಿಶೀಲನೆ ಅಗತ್ಯ. ಶುಭಸಂಖ್ಯೆ: 1

ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪ ಎದುರಿಸಬೇಕಾದೀತು. ಶುಭಸಂಖ್ಯೆ:7

ತುಲಾ: ಆಮದು ರಫ್ತು ವ್ಯವಹಾರ ನಡೆಸುತ್ತಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರ ಇರಿಸುಮುರಿಸು ತರುವ ಸಾಧ್ಯತೆ. ಶುಭಸಂಖ್ಯೆ:9

ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಅತಿ ಕಾರ್ಯಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಮೂಡುವ ಸಾಧ್ಯತೆ. ಶುಭಸಂಖ್ಯೆ:3

ಧನುಸ್ಸು: ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಕ್ಕಳಿಗೆ ವಿವಾಹ ವಿಷಯದಲ್ಲಿ ಒತ್ತಾಯ ಪೂರ್ವಕ ಪ್ರಸ್ತಾಪಗಳು ಬರಲಿವೆ. ಶುಭಸಂಖ್ಯೆ: 8

ಮಕರ: ಅಡೆತಡೆಗಳ ನಡುವೆಯೂ ಶುಭಕಾರ್ಯದಲ್ಲಿ ಯಶ. ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಔಷಧ ತಯಾರಕರಿಗೆ ಲಾಭ. ಶುಭಸಂಖ್ಯೆ: 9

ಕುಂಭ: ಸಂಗಾತಿಗೆ ನೆರೆಹೊರೆಯವರಿಂದ ಸ್ವಲ್ಪಮಟ್ಟಿನ ಪ್ರತಿರೋಧ. ನವೀನ ವ್ಯವಹಾರವೊಂದರಲ್ಲಿ ಹಣ ವಿನಿಯೋಗ ಮಾಡಲಿದ್ದೀರಿ. ಶುಭಸಂಖ್ಯೆ: 5

ಮೀನ: ಅಧಿಕಾರಿಗಳ ಅಸಹಕಾರದಿಂದಾಗಿ ಸರ್ಕಾರದಿಂದ ಆಗಬೇಕಾದ ಕೆಲಸಗಳು ವಿಳಂಬವಾಗುವ ಸಾಧ್ಯತೆ. ಕುಲದೇವರನ್ನು ಭಜಿಸಿ. ಶುಭ ಸಂಖ್ಯೆ 9