ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹದ ಪ್ರಸ್ತಾಪ ಬರಬಹುದು

ಮೇಷ: ಆಸ್ತಿಯ ಬಗ್ಗೆ ವಾಗ್ವಾದ ಬರಬಹುದು. ಹಠ ಬಿಟ್ಟರೆ ತಕ್ಕಮಟ್ಟಿನ ನೆಮ್ಮದಿಯಿದೆ. ದೇಹಕ್ಕೆ ಕಷ್ಟವಾಗುತ್ತದೆ. ಅದೃಷ್ಟ ಸಂಖ್ಯೆ: 4

ವೃಷಭ: ತನ್ನನ್ನು ಬಳಸಿ ಬಿಸಾಡಿದ್ದಾರೆಂದು ಮನಸ್ಸು ಅಳುತ್ತದೆ. ಈ ಬಗ್ಗೆ ಯಾರ ನೆರವನ್ನೂ ನಿರೀಕ್ಷಿಸಲು ಹೋಗಬೇಡಿ. ಅದೃಷ್ಟ ಸಂಖ್ಯೆ: 1

ಮಿಥುನ: ಅವಿವಾಹಿತರಿಗೆ ವಿವಾಹದ ಪ್ರಸ್ತಾಪ ಬರಬಹುದು. ಜಮೀನು ಖರೀದಿ ಯೋಚನೆ ಇದ್ದಲ್ಲಿ ಮುಂದುವರಿಸಿ. ಅದೃಷ್ಟ ಸಂಖ್ಯೆ: 3

ಕಟಕ: ನಾಯಕರಾಗುವಿರಿ. ವಾಗ್ವಾದದಲ್ಲಿ ನಿಮ್ಮನ್ನು ಸೋಲಿಸುವುದು ಕಷ್ಟ. ಎಲ್ಲ ಪ್ರಶ್ನೆಗಳಿಗೂ ನಿಮ್ಮಲ್ಲಿ ಉತ್ತರವಿದೆ. ಅದೃಷ್ಟ ಸಂಖ್ಯೆ: 9

ಸಿಂಹ: ನೀವೇ ಕರೆ ಇಲ್ಲವೇ ಭೇಟಿಯಾಗಿ ಮಿತ್ರರಿಗೆ ನೆರವಾದರೆ ಉತ್ತಮ. ಕ್ರೀಡಾಳುಗಳಿಗೆ ಗಾಯದ ಸಮಸ್ಯೆಯಿದೆ. ಅದೃಷ್ಟ ಸಂಖ್ಯೆ: 5

ಕನ್ಯಾ: ಸಾಲ ಕೇಳಲು ಬಂದಾರು. ಮಧುಮೇಹಿಗಳು ಎಚ್ಚರದಿಂದ ಇರಬೇಕು. ಕೆಲಸವನ್ನು ಮುಗಿಸಲು ತಡವಾದೀತು. ಅದೃಷ್ಟ ಸಂಖ್ಯೆ: 7

ತುಲಾ: ಕೆಟ್ಟ ಕನಸು ನೆನಪಾಗಿ ತಳಮಳ. ವ್ಯಾಪಾರಿಗಳಿಗೆ, ರೈತರಿಗೆ ಶ್ರಮದಿಂದ ಲಾಭ. ಗುರಿಯತ್ತಲೇ ದೃಷ್ಟಿ ಇರಲಿ. ಅದೃಷ್ಟ ಸಂಖ್ಯೆ: 1

ವೃಶ್ಚಿಕ: ಚಿಕ್ಕ ಕೆಲಸವೊಂದನ್ನು ಮುಗಿಸಲು ಹೆಚ್ಚು ಕಾಲ ಬೇಕಾಗುತ್ತದೆ. ಸಾಧ್ಯವಿದ್ದರೆ ಅರಿಶಿಣ ಕೊಂಬು ದಾನ ಮಾಡಿ. ಅದೃಷ್ಟ ಸಂಖ್ಯೆ: 3

ಧನಸ್ಸು: ಸಿಟ್ಟಿನಿಂದಾಗಿ ಕಡಿಮೆ ತಾಳ್ಮೆಯವರೆಂದು ಗುರುತಿಸಲ್ಪಡುವಿರಿ. ದ್ವಿಚಕ್ರವಾಹನ ಸಂಚಾರ ಸದ್ಯಕ್ಕೆ ಸುರಕ್ಷಿತವಲ್ಲ. ಅದೃಷ್ಟ ಸಂಖ್ಯೆ: 2

ಮಕರ: ಸಂಗಾತಿಗೆ ಉಡುಗೊರೆ ಕೊಡುವಿರಿ. ಅನಿರೀಕ್ಷಿತ ಖರ್ಚು ತಬ್ಬಿಬ್ಬುಗೊಳಿಸಬಹುದು. ಆದರೆ ಅದು ಅನಿವಾರ್ಯ. ಅದೃಷ್ಟ ಸಂಖ್ಯೆ: 6

ಕುಂಭ: ಕಷ್ಟವಾದರೂ ಕೆಲಸ ಮುಗಿಸಲು ಬಯಸಿದ ನೀವು ಹಿಂದೆ ಸರಿಯದಿರಿ. ತಂದೆಯ ಜತೆ ಉತ್ತಮ ಬಾಂಧವ್ಯ. ಅದೃಷ್ಟ ಸಂಖ್ಯೆ: 4

ಮೀನ: ಹಿರಿಯರ ನೆರವಿನಿಂದ ಸಂಗಾತಿಯ ಜತೆಗಿನ ಮನಸ್ತಾಪ ದೂರ. ಶರೀರದ ಉಷ್ಣ ಹೆಚ್ಚಾಗಿ ಆರೋಗ್ಯ ಬಾಧೆ. ಅದೃಷ್ಟ ಸಂಖ್ಯೆ: 1