ಮೇಷ: ಗುಡಿ ಕೈಗಾರಿಕೆಯವರಿಗೆ ಲಾಭ. ಆರಕ್ಷಕರಿಗೆ ಹಲವು ದಿನಗಳ ಬಳಿಕ ಒತ್ತಡ ಕಡಿಮೆಯಾಗಲಿದೆ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 7
ವೃಷಭ: ಸಹೋದರರಲ್ಲಿ ಉಂಟಾದ ಭಿನ್ನಾಭಿಪ್ರಾಯವು ಸೇಡಿಗೆ ತಿರುಗದಂತೆ ಕಾಪಾಡಿಕೊಳ್ಳಿರಿ. ವ್ಯವಹಾರದಲ್ಲಿ ಮೋಸದ ಸಾಧ್ಯತೆ. ಶುಭಸಂಖ್ಯೆ: 5
ಮಿಥುನ: ಕಟ್ಟಡ ಬಾಡಿಗೆಗೆ ಕೊಡುವುದರಿಂದಾಗಿ ಆರ್ಥಿಕವಾಗಿ ಅಭಿವೃದ್ಧಿ. ಕಾರ್ಯ ಸಾಧಕರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನ. ಶುಭಸಂಖ್ಯೆ: 3
ಕಟಕ: ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆಯುವುದು. ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಇರುತ್ತದೆ. ಶುಭಸಂಖ್ಯೆ: 7
ಸಿಂಹ: ಗೃಹೋಪಕರಣ ಖರೀದಿಸುವಿರಿ. ದಾಂಪತ್ಯದಲ್ಲಿ ಅಸಮಾಧಾನ ಮೂಡುವುದು. ಮನದಲ್ಲಿ ಭಯ ತೋರಿಬಂದೀತು. ಶುಭಸಂಖ್ಯೆ: 3
ಕನ್ಯಾ: ನಡೆ-ನುಡಿಗಳು ಕಿರಿಯರಿಗೆ ಮಾರ್ಗದರ್ಶನದಂತಿರುವುದು. ಆಂತರಿಕ ಸಮಸ್ಯೆ ಪರಿಹಾರಕ್ಕೆ ಸಣ್ಣ ಪುಟ್ಟ ಬದಲಾವಣೆ ಅಗತ್ಯ. ಶುಭಸಂಖ್ಯೆ: 5
ತುಲಾ: ಮಹಿಳಾ ಉದ್ಯಮದಾರರಿಗೆ ಕೆಲಸಗಾರರ ಒತ್ತಡ. ರಾಜಕೀಯ ವರ್ಗದವರಿಗೆ ಜನಪ್ರಿಯತೆ ಹೆಚ್ಚುವುದರಿಂದ ಶತ್ರುಪೀಡೆ. ಶುಭಸಂಖ್ಯೆ: 7
ವೃಶ್ಚಿಕ: ಪಾಲಕರ ಹಿತವಚನವನ್ನು ಅಳವಡಿಸಿಕೊಳ್ಳಿ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಅಪರಿಚಿತ ವ್ಯಕ್ತಿಯಿಂದ ಮೋಸ. ಶುಭಸಂಖ್ಯೆ: 6
ಧನುಸ್ಸು: ಎಲ್ಲವನ್ನೂ ಮಾಡಬಲ್ಲೆನೆಂಬ ಹುಮ್ಮಸ್ಸು ಸಾಧನೆಗೆ ಮುಳ್ಳಾದೀತು. ಏಜೆನ್ಸಿಗಳ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚುವುದರಿಂದ ಲಾಭ. ಶುಭಸಂಖ್ಯೆ: 4
ಮಕರ: ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಉಪಾಯ ಕಾಣುವುದು. ರಾಜಕೀಯ ಭವಿಷ್ಯಕ್ಕೆ ಮೋಡ ಕವಿದಂತೆ ಆಗುತ್ತದೆ. ಶುಭಸಂಖ್ಯೆ: 7
ಕುಂಭ: ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲ. ಋಣಾತ್ಮಕ ಯೋಚನೆ ಬರಬಹುದು. ರಸಗೊಬ್ಬರ ಮತ್ತು ಕೀಟನಾಶಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:1
ಮೀನ: ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಅನಿವಾರ್ಯ ಪ್ರಯಾಣ. ವೃತ್ತಿಯಲ್ಲಿ ಬದಲಾವಣೆ ಬಯಸಿದಲ್ಲಿ ಕಾಯಿರಿ. ಶುಭಸಂಖ್ಯೆ: 9