ಮೇಷ: ಸಗಟು ವ್ಯಾಪಾರಿಗಳಿಗೆ ನಷ್ಟ. ಮಹಿಳಾ ಉದ್ಯೋಗಿಗಳಿಗೆ ಲಾಭ. ಸಾರ್ವಜನಿಕ ರಂಗದಲ್ಲಿ ಅವಮಾನ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 9
ವೃಷಭ: ಪತ್ನಿಯ ಆರೋಗ್ಯದಲ್ಲಿ ಏರುಪೇರು. ದಾನ ಧರ್ಮದಿಂದ ನೆಮ್ಮದಿ. ಖಾಸಗಿ ಉದ್ಯೋಗಿಗಳಿಗೆ ಶುಭಸುದ್ದಿ ಸಿಗಲಿದೆ. ಶುಭಸಂಖ್ಯೆ:1
ಮಿಥುನ: ಹಳೇ ಸ್ನೇಹಿತನ ಭೇಟಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಸಣ್ಣ ವ್ಯಾಪಾರಿಗಳಿಗೆ ಲಾಭ. ಸಾಲಗಾರರಿಂದ ಕಿರುಕುಳ. ಶುಭಸಂಖ್ಯೆ: 9
ಕಟಕ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರಾಸೆ. ನೂತನ ಗೃಹ ನಿರ್ಮಾಣ ಪ್ರಾರಂಭ. ಭೂ ಸಂಬಂಧಿತ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 5
ಸಿಂಹ: ಸರ್ಕಾರಿ ಕೆಲಸಗಳಲ್ಲಿ ಜಯ. ಧಾರ್ವಿುಕ ವಿಚಾರದಲ್ಲಿ ಅಸಹನೆ. ವ್ಯವಸಾಯಗಾರರಿಗೆ ಅನಾಸಕ್ತಿ. ಗುರುಹಿರಿಯರ ಭೇಟಿ. ಶುಭಸಂಖ್ಯೆ: 9
ಕನ್ಯಾ: ಆಕಸ್ಮಿಕ ಧನ ನಷ್ಟ. ಬಂಧು ಬಾಂಧವರಲ್ಲಿ ವೈಮನಸ್ಯ. ಪಿತ್ರಾರ್ಜಿತ ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡುವ ಸಾಧ್ಯತೆ. ಶುಭಸಂಖ್ಯೆ: 1
ತುಲಾ: ಮಹಿಳಾ ಉದ್ಯಮಿಗಳಿಗೆ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಭೂ ಸಂಬಂಧಿ ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ:1
ವೃಶ್ಚಿಕ: ಖಾಸಗಿ ಉದ್ಯೋಗದಿಂದ ಲಾಭ. ಸಣ್ಣಪುಟ್ಟ ಬೆಳಗಾರರಿಗೆ ಲಾಭ. ಕಬ್ಬಿಣದ ವ್ಯಾಪಾರದಿಂದ ಲಾಭ. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 9
ಧನುಸ್ಸು: ಅವಿವಾಹಿತರಿಗೆ ವಿವಾಹ ನಿಶ್ಚಯ. ನಿವೇಶನ ಖರೀದಿ ಸಾಧ್ಯತೆ. ಸಾಲಗಾರರಿಂದ ಕಿರುಕುಳ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 8
ಮಕರ: ನ್ಯಾಯಾಲಯದಲ್ಲಿರುವ ವಿವಾದಕ್ಕೆ ತಾರ್ಕಿಕ ಅಂತ್ಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಅನಾರೋಗ್ಯ. ಶುಭಸಂಖ್ಯೆ: 3
ಕುಂಭ: ಮಹಿಳಾ ಪಾಲುದಾರರಿಗೆ ಸಮಸ್ಯೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ. ನಟರಿಗೆ, ಗಾಯಕರಿಗೆ ವಿಶೇಷ ವೇದಿಕೆ ದೊರೆಯಲಿದೆ. ಶುಭಸಂಖ್ಯೆ:1
ಮೀನ: ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಪ್ರಯಾಣದಲ್ಲಿ ಆಯಾಸ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಕುಟುಂಬ ಕಲಹ ತಾರಕಕ್ಕೆ. ಶುಭಸಂಖ್ಯೆ: 9