ನ್ಯೂಸ್

ಈ ರಾಶಿಯವರಿಗಿಂದು ಅನಿರೀಕ್ಷಿತ ಧನ ಲಾಭ: ನಿತ್ಯಭವಿಷ್ಯ

ಮೇಷ: ವಿದ್ಯಾರ್ಥಿಗಳಿಗೆ ಹಿನ್ನಡೆಯಾಗುವುದು. ಆಭರಣ ವ್ಯಾಪಾರಸ್ಥರಿಗೆ ಶುಭಧಾಯಕ ದಿನ. ಕೆಲಸದ ಒತ್ತಡ, ವಿಶ್ರಾಂತಿಯ ಅಗತ್ಯವಿದೆ. ಶುಭಸಂಖ್ಯೆ: 5

ವೃಷಭ: ರಫ್ತು ಮೊದಲಾದ ವಿದೇಶಿ ಸಂಬಂಧಿ ವ್ಯಾಪಾರಸ್ಥರಿಗೆ ಲಾಭ ಬರಲಿದೆ. ಅಧಿಕ ವರಮಾನ. ಮನೆಯಲ್ಲಿ ಶುಭ ಕಾರ್ಯಕ್ಕೆ ತಯಾರಿ. ಶುಭಸಂಖ್ಯೆ: 1

ಮಿಥುನ: ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಲಭ್ಯ. ಕವಿಗಳಿಗೆ ಉತ್ತಮ ಫಲ ದೊರೆವ ದಿನ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 9

ಕಟಕ: ತೈಲ ಮಾರಾಟ ಮಾಡುವವರಿಗೆ ಶುಭ. ಹಿರಿಯರ ಮಾರ್ಗದರ್ಶನ. ಆಸ್ತಿ ವಿಚಾರದಲ್ಲಿ ವಿವಾದವಿರುತ್ತದೆ. ಸಮಾಧಾನ ಮುಖ್ಯ. ಶುಭಸಂಖ್ಯೆ:3

ಸಿಂಹ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಉತ್ತಮ ಪ್ರತಿಫಲ ದೊರೆಯುವುದು. ಆರೋಗ್ಯ ಸಮಸ್ಯೆ ಕಾಡುವುದು. ಕೆಲಸಗಳಲ್ಲಿ ಸಹಾಯ. ಶುಭಸಂಖ್ಯೆ: 1

ಕನ್ಯಾ: ಸ್ಥಿರಾಸ್ತಿ ಖರೀದಿ ಕುರಿತು ಚಿಂತನೆ ನಡೆಸುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣಿಸಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 8

ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ ದೊರೆಯುವುದು. ನೌಕರರಿಗೆ ಶುಭದಾಯಕ. ಸಾಲಗಾರರ ತೊಂದರೆ ಹೆಚ್ಚು ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ರಾಜಕಾರಣಿಗಳಿಗೆ ಪರ್ವಕಾಲ. ತೋಟಗಾರಿಕೆಯಲ್ಲಿ ಆದಾಯ. ಮಕ್ಕಳ ಆರೋಗ್ಯದಲ್ಲಿ ಕಾಳಜಿವಹಿಸುವುದು ಅಪೇಕ್ಷಣೀಯ. ಶುಭಸಂಖ್ಯೆ: 5

ಧನುಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ ಬರುವುದು. ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಿ ಸಂತಸ. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ. ಶುಭಸಂಖ್ಯೆ: 7

ಮಕರ: ಸರ್ಕಾರಿ ನೌಕರರಿಗೆ ನಿರೀಕ್ಷಿತ ಬೆಂಬಲ. ತಾಯಿಯಿಂದ ಸಹಕಾರ ಸಿಗಲಿದೆ. ಕೌಟುಂಬಿಕ ಅಗತ್ಯಗಳಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 6

ಕುಂಭ: ಹಣಕಾಸಿನಲ್ಲಿ ತೊಂದರೆಯಾಗಿ ನಾಳೆಯ ಚಿಂತೆ. ಬುದ್ಧಿ ಚಾಂಚಲ್ಯ ಅಧಿಕ. ನೂತನ ವಸ್ತು ಖರೀದಿ ಸದ್ಯಕ್ಕೆ ಮುಂದೂಡುವಿರಿ. ಶುಭಸಂಖ್ಯೆ: 4

ಮೀನ: ಮಹಿಳಾ ವರ್ಗದವರಿಗೆ ಆಭರಣ ಪ್ರಾಪ್ತಿ. ನೌಕರಿ ಯಲ್ಲಿ ಬಡ್ತಿ. ಕೆಲಸ ಕಾರ್ಯಗಳಲ್ಲಿ ವಿಘ್ನ ಬಂದೀತು. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 5