ನ್ಯೂಸ್

ಈ ರಾಶಿಯವರಿಂದು ಯಾವುದೇ ಕಾರಣಕ್ಕೂ ಕಪ್ಪು ವಸ್ತ್ರ ಧರಿಸಬೇಡಿ

ಮೇಷ:  ನಿಮ್ಮದೇ ಸ್ವಂತ ಉದ್ಯೋಗದ ಘಟಕವನ್ನು ಹೊಂದಿದ್ದರೆ ಕಾರ್ವಿುಕರಿಂದ ಉತ್ತಮವಾದ ಬೆಂಬಲ ಲಭ್ಯವಾಗಲಿದೆ. ಶುಭಸಂಖ್ಯೆ: 7

ವೃಷಭ: ನೀವು ಬಟ್ಟೆಬರೆ ವ್ಯಾಪಾರಿಗಳಾಗಿದ್ದರೆ ವ್ಯಾಪಾರದ ಸ್ಥಳದ ವಿನ್ಯಾಸ ಹೊಸದಾಗಿಡಲು ಪ್ರಯತ್ನಿಸಿ. ಲಾಭವಿದೆ. ಶುಭಸಂಖ್ಯೆ: 3

ಮಿಥುನ: ಕಿರಿಯ ಮಕ್ಕಳನ್ನು ನಿಯಂತ್ರಿಸಬೇಕು. ಆದರೆ ಅವರಿಗೆ ಸ್ವಲ್ಪ ಸ್ವಾತಂತ್ರ್ಯನ್ನೂ ನೀಡಿ. ಒಳಿತಿನ ದಾರಿ ಸಿಗಲಿದೆ. ಶುಭಸಂಖ್ಯೆ: 9

ಕಟಕ: ಹಲವಾರು ಜನರು ನಿಮ್ಮ ಪ್ರತಿಭೆಯನ್ನು ಗುರುತಿಸಿ ಹತ್ತಿರಕ್ಕೆ ಬರಲಿದ್ದಾರೆ. ಚಿಂತೆ ಮಾಡದೆ ನಿರಾಳರಾಗಿರಿ. ಶುಭಸಂಖ್ಯೆ: 5

ಸಿಂಹ: ನೀವು ಸತ್ಯವಂತರೆಂಬ ಹೆಸರುಳ್ಳವರು. ಆದರೆ ಅಯೋಗ್ಯ ಜನರ ಬಳಿ ಉದಾರತೆ ತೋರಿಸುವುದು ಬೇಡ. ಶುಭಸಂಖ್ಯೆ: 2

ಕನ್ಯಾ: ಸ್ವಲ್ಪ ಗಡಿಬಿಡಿಯಿಂದ ವರ್ತಿಸುತ್ತೀರಿ. ಕೆಲವು ಅವಕಾಶವಾದಿಗಳು ದುರುಪಯೋಗ ಮಾಡಿಕೊಳ್ಳಬಹುದು. ಶುಭಸಂಖ್ಯೆ: 8

ತುಲಾ: ಅಕಾರಣವಾಗಿ ಜಗಳಕ್ಕೆ ಬರುವವರ ಜತೆಗೆ ವಾಗ್ವಾದ ಮಾಡಲು ಹೋಗಬೇಡಿ. ಸುಮ್ಮನಿದ್ದರೆ ಲಾಭವಿದೆ. ಶುಭಸಂಖ್ಯೆ: 6

ವೃಶ್ಚಿಕ: ನಿಮ್ಮ ಜೀವನದ ಸರಳತೆಯನ್ನು ಕಂಡು ಎಲ್ಲರೂ ಗೌರವಿಸಲಿದ್ದಾರೆ. ಆದರೆ ಅದೇ ನಿಮ್ಮ ಪಾಲಿಗೆ ದೌರ್ಬಲ್ಯ ಆಗದಿರಲಿ. ಶುಭಸಂಖ್ಯೆ: 4

ಧನಸ್ಸು: ಅನಗತ್ಯವಾದ ಖರ್ಚುಗಳನ್ನು ಮುಲಾಜಿಲ್ಲದೆ ನಿಯಂತ್ರಿಸಿ. ಸದ್ಯಕ್ಕೆ ಜಾಣ್ಮೆಯೇ ನಿಮ್ಮ ಪಾಲಿನ ಮುಖ್ಯ ಆಸ್ತಿಯಾಗಿದೆ. ಶುಭಸಂಖ್ಯೆ: 1

ಮಕರ: ಬಾಳಸಂಗಾತಿಯ ಆಯ್ಕೆಯ ವಿಚಾರದಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಯೋಚಿಸಿಯೇ ತೀರ್ವನಿಸಿ. ಶುಭಸಂಖ್ಯೆ: 9

ಕುಂಭ: ನಿಮ್ಮ ಬೌದ್ಧಿಕತೆಯನ್ನು ಅಕ್ಷರರೂಪಕ್ಕೆ ತನ್ನಿ. ಇದರಿಂದ ಭವಿಷ್ಯದಲ್ಲಿ ನಿಮ್ಮ ಜೀವನಕ್ಕೇ ಒಳಿತಾಗಲಿದೆ. ಶುಭಸಂಖ್ಯೆ: 5

ಮೀನ: ಯಾವುದೇ ಕಾರಣಕ್ಕೂ ಕಪ್ಪು ವಸ್ತ್ರವನ್ನು ಧರಿಸಲು ಹೋಗದಿರಿ. ದೂರಪ್ರಯಾಣವನ್ನು ಮುಂದೂಡಿದರೆ ಉತ್ತಮ. ಶುಭಸಂಖ್ಯೆ: 7