ಮೇಷ: ಸಾರ್ವಜನಿಕ ಜೀವನದಲ್ಲಿ ಮಹತ್ವದ ತಿರುವು. ನಾನಾರೀತಿಯ ಚಿಂತೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಸಿಹಿ ಸುದ್ದಿ. ಶುಭಸಂಖ್ಯೆ: 9
ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಸಹೋದರರೊಂದಿಗೆ ವೈಮನಸ್ಯ. ಸಮಾಜದಲ್ಲಿ ಗೌರವ. ನೆಮ್ಮದಿಯ ವಾತಾವರಣ. ಶುಭಸಂಖ್ಯೆ: 5
ಮಿಥುನ: ಕುಟುಂಬದಲ್ಲಿ ಸಮಾರಂಭದ ವಾತಾವರಣ. ಸಂಗಾತಿಯ ಸಹಕಾರದಿಂದ ವೃತ್ತಿಯಲ್ಲಿ ಅಭಿವೃದ್ಧಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ:2
ಕಟಕ: ಕೈಗೊಂಡ ಯೋಜನೆಗೆ ಉತ್ತಮ ಪ್ರತಿಕ್ರಿಯೆ. ಸರ್ಕಾರಿ ನೌಕರರಿಗೆ ಬಡ್ತಿ ಸಾಧ್ಯತೆ. ಹಿತೈಷಿಗಳಿಂದ ಉತ್ತಮ ಸಹಕಾರ. ಶುಭಸಂಖ್ಯೆ: 7
ಸಿಂಹ: ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಮನಸ್ತಾಪ ಉಂಟಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಅಸ್ಥಿರತೆ ಕಾಡಬಹುದು. ಶುಭಸಂಖ್ಯೆ: 6
ಕನ್ಯಾ: ಸ್ನೇಹಿತರಿಂದಾಗಿ ಕಾರ್ಯಸಿದ್ಧಿ. ಹಣಕಾಸಿನ ವ್ಯವಹಾರದಲ್ಲಿ ಸಹೋದರರೊಂದಿಗೆ ಮನಸ್ತಾಪ. ಮಗಳ ಮದುವೆ ಪ್ರಸ್ತಾಪ. ಶುಭಸಂಖ್ಯೆ: 1
ತುಲಾ: ನಿಮ್ಮ ಧಾರ್ವಿುಕ ಪ್ರವೃತ್ತಿ ಹಲವರಿಗೆ ದಾರಿದೀಪ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7
ವೃಶ್ಚಿಕ: ವ್ಯಾಪಾರ- ಉದ್ಯೋಗದಲ್ಲಿ ಅನಿರೀಕ್ಷಿತ ಧನ ನಷ್ಟ. ಹೆಂಡತಿ ಮಕ್ಕಳೊಂದಿಗೆ ವಿಹಾರ. ಆರೋಗ್ಯದ ಕುರಿತು ಕಾಳಜಿ ಇರಲಿ. ಶುಭಸಂಖ್ಯೆ: 5
ಧನಸ್ಸು: ಬಂಧು ಮಿತ್ರರ ಪ್ರೀತಿ ವಿಶ್ವಾಸ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ವಿರೋಧಿಗಳ ಮುಖಭಂಗ. ಶುಭಸಂಖ್ಯೆ: 8
ಮಕರ: ಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗಲಿದೆ. ಕಲಾವಿದರಿಗೆ ವಿಶೇಷ ಮನ್ನಣೆ ದೊರೆಯಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3
ಕುಂಭ: ನಿಮ್ಮ ಸಲಹೆಗೆ ಉತ್ತಮ ಸ್ಪಂದನೆ. ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಗೆ ದೂರು. ಮನೆಯಲ್ಲಿ ಧಾರ್ವಿುಕ ಆಚರಣೆ. ಶುಭಸಂಖ್ಯೆ: 4
ಮೀನ: ಉತ್ಸಾಹ ಹೆಚ್ಚಿಸುವ ಸಂಭ್ರಮ ಕಳೆ ಕಟ್ಟಲಿದೆ. ಸುಖ ಭೋಜನ. ವ್ಯವಹಾರದಲ್ಲಿ ಅನಿರೀಕ್ಷಿತ ಗೆಲುವು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 7