ಮೇಷ: ಸುತ್ತಲಿನವರೆಲ್ಲ ಸುಖವಾಗಿದ್ದಾರೆ ಎನಿಸುತ್ತದೆ. ಆ ಚಿಂತೆಯನ್ನು ಬಿಟ್ಟುಬಿಡಿ. ನಿಮಗೂ ಸುಖದ ದಾರಿಯೊಂದು ತೆರೆಯಲಿದೆ. ಶುಭಸಂಖ್ಯೆ: 9
ವೃಷಭ: ಮೇಲಧಿಕಾರಿಗಳು ನಿಮ್ಮನ್ನು ಗಮನಿಸುತ್ತಿಲ್ಲ ಎಂದುಕೊಳ್ಳುತ್ತಿದ್ದೀರಿ. ಹಾಗೆ ಭಾವಿಸಬೇಡಿ. ವಿಶೇಷ ಪ್ರಶಂಸೆ ಪಡೆಯುವಿರಿ. ಶುಭಸಂಖ್ಯೆ: 6
ಮಿಥುನ: ಚಿಂತೆಯಿಂದ ಬಳಲಿದ್ದೀರಿ. ಲೆಕ್ಕಪರಿಶೋಧಕರ ಬಳಿ ವ್ಯವಹಾರದ ತಪಾಸಣೆ ಮಾಡಿಸಿಕೊಳ್ಳಿ. ಚಿಂತೆಗೆ ಪರಿಹಾರ ಸಿಗಲಿದೆ. ಶುಭಸಂಖ್ಯೆ: 2
ಕಟಕ: ಹೊಸ ದಿವಸ ಬಂದಿತೆಂದು ಸಂತೋಷಪಡಿ. ಹಿಂದಿನ ಹಲವು ಕಷ್ಟಗಳ ಅನುಭವದಿಂದ ದಿನಾಂತ್ಯಕ್ಕೆ ಗೆಲುವು ಸಿಗಲಿದೆ. ಶುಭಸಂಖ್ಯೆ: 7
ಸಿಂಹ: ಆತಂಕಕಾರಿ ಬೆಳವಣಿಗೆಗಳಿಂದ ಧೈರ್ಯ ಕಳೆದುಕೊಳ್ಳದಿರಿ. ಸಮಯಾವಧಾನದಿಂದ ಕಠಿಣ ಸ್ಥಿತಿ ಕೊನೆಗೊಳ್ಳಲಿದೆ. ಶುಭಸಂಖ್ಯೆ: 4
ಕನ್ಯಾ: ಕೆಲವು ಸ್ನೇಹಿತರ ಅಸಹಕಾರದ ಕಾರಣದಿಂದ ತೊಂದರೆ ಎದುರಾದೀತು. ಆದರೂ ಅವರ ಜತೆಗೆ ಉತ್ತಮ ನಂಟು ಇರಲಿ. ಶುಭಸಂಖ್ಯೆ: 1
ತುಲಾ: ಕೈಗೊಂಡ ಯೋಜನೆಯನ್ನೇ ಕೈಬಿಡುವ ಪರಿಸ್ಥಿತಿ ಬರಬಹುದು. ಮಂತ್ರಾಲಯದ ಗುರುರಾಯರನ್ನು ಸ್ತುತಿಸಿ. ಶುಭಸಂಖ್ಯೆ: 5
ವೃಶ್ಚಿಕ: ತಾಳಿದವನು ಬಾಳಿಯಾನು ಎಂಬ ಮಾತು ರೂಢಿಯಲ್ಲಿದೆಯಷ್ಟೆ. ಆದರೆ ಅತಿಯಾದ ತಾಳ್ಮೆಯೂ ಲಾಭಕರವೇನಲ್ಲ. ಶುಭಸಂಖ್ಯೆ: 3
ಧನುಸ್ಸು: ಹತ್ತಿರದವರಿಂದಲೇ ದ್ರೋಹ ಉಂಟಾಗಬಹುದು. ತಿಳಿದೂ ಸುಮ್ಮನೆ ಇದ್ದುಬಿಡಿ. ಆದರೆ ಯಾರನ್ನೂ ಒಮ್ಮೆಲೇ ನಂಬಿಬಿಡಬೇಡಿ. ಶುಭಸಂಖ್ಯೆ: 8
ಮಕರ: ದೂರದ ಬಂಧುಗಳೊಬ್ಬರನ್ನು ಭೇಟಿಯಾಗುವ ಸಂದರ್ಭವೊಂದು ಬಂದೀತು. ಈ ವೇಳೆ ಮುಖ್ಯ ವಿಚಾರವನ್ನೂ ಅರಿಯುವಿರಿ. ಶುಭಸಂಖ್ಯೆ: 9
ಕುಂಭ: ಮನೆಯಲ್ಲಿ ಹಲವು ಮಾರ್ಪಾಡು ಮಾಡಲು ಬಯಸಿದ್ದೀರಿ. ಶುಭಸ್ಯ ಶೀಘ್ರಂ ಎನ್ನುತ್ತಾರೆ. ಕೆಲಸ ಆರಂಭಿಸಬಹುದು. ಶುಭಸಂಖ್ಯೆ: 6
ಮೀನ: ವ್ಯಾವಹಾರಿಕವಾದ ಮಾತುಕತೆಗಳನ್ನಷ್ಟೇ ಆಡಬೇಕಾಗಬಹುದು. ಈ ಸಂದರ್ಭದಲ್ಲಿ ತುಸು ಚಾತುರ್ಯದಿಂದ ವರ್ತಿಸಿ. ಶುಭಸಂಖ್ಯೆ: 2