ನ್ಯೂಸ್

ಈ ರಾಶಿಯವರಿಗೆ ಇಂದು ಉತ್ತಮ ಅವಕಾಶಗಳು ಒದಗಿಬರಲಿವೆ: ನಿತ್ಯಭವಿಷ್ಯ

ಮೇಷ: ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿರೀಕ್ಷಿಸಿದಂತೆ ಫಲಿತಾಂಶ ಬರಲಿದೆ. ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಶುಭಸಂಖ್ಯೆ: 8

ವೃಷಭ: ಮನಸ್ಥಿತಿ ಹದಗೆಡಬಹುದು. ಯೋಜನೆಗಳು ಉತ್ತವಾಗಿರುತ್ತವೆ. ಆರೋಗ್ಯದಲ್ಲಿ ಶಿಸ್ತು ಅಗತ್ಯ ಆರ್ಥಿಕವಾಗಿ ಜಾಗರೂಕತೆ. ಶುಭಸಂಖ್ಯೆ:1

ಮಿಥುನ: ಆದಾಯ ಉತ್ತಮವಾಗಿರುತ್ತದೆ, ಉದ್ಯೋಗ ಸ್ಥಳದಲ್ಲಿ ಗೊಂದಲಗಳು ನಿರ್ಮಾಣ ಆಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

ಕಟಕ: ಆಸ್ತಿ ವಿಚಾರದಲ್ಲಿ ಲಾಭವಾಗಲಿದೆ. ಒಳಿತಿಗಾಗಿ ಹೆಚ್ಚಿನ ಶ್ರಮ ವಹಿಸಬೇಕು. ಅತಿಯಾದ ಖರ್ಚು ಉಂಟಾದೀತು. ಶುಭಸಂಖ್ಯೆ: 2

ಸಿಂಹ: ಮನಸ್ಸಿನಲ್ಲಿ ಅಶಾಂತಿ. ಫಲಿತಾಂಶಗಳು ನಿಮ್ಮ ಪರವಾಗಿರಲಿವೆ. ಇತರರು ಹೇಳುವುದನ್ನು ಸಾವಧಾನದಿಂದ ಆಲಿಸಿ. ಶುಭಸಂಖ್ಯೆ: 8

ಕನ್ಯಾ: ಹಣಕಾಸಿನ ತೊಂದರೆಗಳ ಪರಿಹಾರ. ಕುಟುಂಬದಲ್ಲಿ ಭಿನ್ನ ಅಭಿಪ್ರಾಯಗಳು. ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು. ಶುಭಸಂಖ್ಯೆ: 7

ತುಲಾ: ಸಂಘರ್ಷಗಳಿಂದ ದೂರವಿರಿ. ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಆರಿಸಿ. ಶತ್ರುಗಳ ಕಾಟದಿಂದ ಮುಕ್ತಿ ದೊರೆಯಲಿದೆ. ಶುಭಸಂಖ್ಯೆ: 8

ವೃಶ್ಚಿಕ: ಸಹೋದ್ಯೋಗಿಗಳಿಂದ ಕಿರಿಕಿರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು. ಹಣಕಾಸಿನ ಹೂಡಿಕೆ ಮಾಡಬಾರದು. ಶುಭಸಂಖ್ಯೆ: 6

ಧನುಸ್ಸು: ಹೆಚ್ಚಿನ ಒತ್ತಡ ಎದುರಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ. ಶುಭಸಂಖ್ಯೆ: 4

ಮಕರ: ಉದ್ವೇಗಕ್ಕೆ ಒಳಗಾಗದಿರಿ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳುತ್ತವೆ. ಮಾತನಾಡುವಾಗ ಎಚ್ಚರ ವಹಿಸಿ. ಶುಭಸಂಖ್ಯೆ: 2

ಕುಂಭ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ. ಖರ್ಚುಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಿ. ಶುಭಸಂಖ್ಯೆ: 6

ಮೀನ: ಕಷ್ಟಗಳು ಕೊನೆಗೊಳ್ಳುತ್ತವೆ. ಕಾನೂನು ತೊಂದರೆಗಳಿಂದಾಗಿ ಸಮಸ್ಯೆ. ಉತ್ತಮ ಅವಕಾಶಗಳು ಒದಗಿಬರಲಿವೆ. ಶುಭಸಂಖ್ಯೆ: 8