ಮೇಷ: ವಿವಾಹಾಪೇಕ್ಷಿಗಳಾದವರಿಗೆ ಹಿರಿಯ ಮಹಿಳೆಯೊಬ್ಬರ ನೆರವಿನ ಸುಸಂದರ್ಭ ಎದುರಾಗಿ ಬರಲಿದೆ. ಶುಭಸಂಖ್ಯೆ: 9
ವೃಷಭ: ಆಸ್ತಿಯ ವಿಚಾರದಲ್ಲಿ ಸೋದರಸಂಬಂಧಿಯ ನಡೆಯು ನಿಮಗೆ ಹೇರಳ ಸಂತೋಷಕ್ಕೆ ಕಾರಣವಾಗಬಹುದಾಗಿದೆ. ಶುಭಸಂಖ್ಯೆ: 2
ಮಿಥುನ: ಯಶಸ್ಸಿನ ಏಣಿಯನ್ನು ಏರುವುದಕ್ಕೆ ಬಯಸುತ್ತಿದ್ದೀರಿ. ವಿಘ್ನಗಳನ್ನು ನಿವಾರಿಸುವ ಗಣಪನ ಆರಾಧನೆ ಮಾಡಿ. ಶುಭಸಂಖ್ಯೆ: 7
ಕಟಕ: ಸೋಗಿನ ಮಾತುಗಳ ಮೂಲಕವೇ ನಿಮ್ಮನ್ನು ವಂಚಿಸಬಹುದಾದ ಅಪರಿಚಿತ ವ್ಯಕ್ತಿಗಳ ಮಾತಿನಲ್ಲಿ ಮೈಮರೆಯದಿರಿ. ಶುಭಸಂಖ್ಯೆ: 4
ಸಿಂಹ: ಹೊಸದಾದ ವ್ಯಕ್ತಿತ್ವದ ಸಿದ್ಧಿ ಪಡೆಯಲು ರಾಜಕಾರಣಿಗಳಿಗೆ ಅಧಿಕ ದಾರಿಗಳಿವೆ. ಮಹೇಶ್ವರನ ಸ್ತುತಿ ಮಾಡಿ. ಶುಭಸಂಖ್ಯೆ: 1
ಕನ್ಯಾ: ಒಳದಾರಿಯ ಮೂಲಕ ಹೆಚ್ಚಿನ ಹಣವನ್ನು ಗಳಿಸುವ ಪ್ರಯತ್ನ ಮಾಡದಿರಿ. ಸರಳ ಮಾರ್ಗದಲ್ಲೇ ಲಾಭ ಸಿಗಲಿದೆ. ಶುಭಸಂಖ್ಯೆ: 8
ತುಲಾ: ನಿಮ್ಮ ನಿಜವಾದ ಅರ್ಹತೆಯನ್ನು ಅರಿಯಲು ಮೇಲಧಿಕಾರಿಗಳಿಗೆ ಉತ್ತಮ ಸಂದರ್ಭ ಒದಗಿಬರಬಹುದಾಗಿದೆ. ಶುಭಸಂಖ್ಯೆ: 5
ವೃಶ್ಚಿಕ: ಇಂಜಿನಿಯರ್ಗಳು, ವೈದ್ಯ ವೃತ್ತಿಪರರ ಪಾಲಿಗೆ ಮಹತ್ವದ ದಿನ ಎನಿಸಲಿದೆ. ಸ್ಕಂದನನ್ನು ಭಕ್ತಿಯಿಂದ ಸ್ತುತಿಸಿ. ಕ್ಷೇಮ. ಶುಭಸಂಖ್ಯೆ: 3
ಧನಸ್ಸು: ದೂರದ ಬಂಧುಗಳೊಡನೆ ನೇರವಾಗಿಯೇ ಮಾತನಾಡಿ. ಸಮಾಧಾನದಿಂದ ಆಸ್ತಿಯ ವಿಚಾರ ನಿಭಾಯಿಸಬಹುದು. ಶುಭಸಂಖ್ಯೆ: 9
ಮಕರ: ಸಂಗಾತಿಯೊಡನೆ ನಡೆಸುವ ಚರ್ಚೆಯು ಮನೆಯ ವಿಚಾರದಲ್ಲಿ ಮಹತ್ವದ ದಾರಿಗೆ ಅವಕಾಶವನ್ನು ತೆರೆದಿಡಲಿದೆ. ಶುಭಸಂಖ್ಯೆ: 6
ಕುಂಭ: ನಿಮ್ಮ ಕ್ರಿಯಾಯೋಜನೆಯ ಫಲವಾಗಿ ಕೆಲವು ಬದಲಾವಣೆಗಳನ್ನು ಮಾಡುವ ಅವಕಾಶವಿದೆ. ಯಶಸ್ಸಿಗೂ ದಾರಿ ಸಿಗಲಿದೆ. ಶುಭಸಂಖ್ಯೆ: 1
ಮೀನ: ಬಹಳ ಹತ್ತಿರದ ಜನರೇ ಅವಮಾನಗಳಿಗೆ ಕಾರಣರಾಗಬಹುದು. ಜಾಗ್ರತರಾಗಿರಿ. ಯಾರ ಜತೆಗೂ ಹೆಚ್ಚಿನ ಚರ್ಚೆ ಬೇಡ. ಶುಭಸಂಖ್ಯೆ: 2