ನ್ಯೂಸ್

ಈ ರಾಶಿಯವರಿಗಿಂದು ಆತ್ಮೀಯರಿಂದ ಸಾಲದ ಸಹಾಯ ದೊರೆಯುವುದು: ನಿತ್ಯಭವಿಷ್ಯ

ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲ. ಕುಟುಂಬದಲ್ಲಿ ಅಪಮಾನ, ನಿಂದನೆ. ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರವಿರುವಿರಿ. ಶುಭಸಂಖ್ಯೆ: 7

ವೃಷಭ: ಬಂಧುಗಳೊಂದಿಗೆ ಮನಸ್ತಾಪ. ಮಾನಸಿಕ ವೇದನೆ. ಆರೋಗ್ಯದಲ್ಲಿ ವ್ಯತ್ಯಾಸ. ಸ್ಥಿರಾಸ್ತಿ ನಷ್ಟವಾಗುವ ಆತಂಕ ಕಾಡಬಹುದು. ಶುಭಸಂಖ್ಯೆ: 8

ಮಿಥುನ: ನಿರೀಕ್ಷಿತ ಪ್ರಯಾಣದ ವೇಳೆ ಅನಾರೋಗ್ಯ. ಪ್ರೇಮದ ವಿಷಯಗಳ ಪ್ರಸ್ತಾಪ. ಗುರುನಿಂದನೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

ಕಟಕ: ನಂಬಿದವರಿಂದಲೇ ಆರ್ಥಿಕವಾಗಿ ಮೋಸ. ಭೂಮಿ, ವಾಹನ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಶುಭಸಂಖ್ಯೆ:1

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ದೈಹಿಕ, ಮಾನಸಿಕ ತೊಂದರೆ. ಮಕ್ಕಳ ನಡವಳಿಕೆಯಿಂದ ಬೇಸರ. ಪ್ರೇಮದ ವಿಷಯದಲ್ಲಿ ಚಿಂತೆ. ಶುಭಸಂಖ್ಯೆ: 4

ಕನ್ಯಾ: ರಾಜಕೀಯ ವ್ಯಕ್ತಿಯಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ನಿದ್ರಾಭಂಗ. ಕೆಟ್ಟ ಕನಸು. ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4

ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾದಾರು. ಆತ್ಮಗೌರವಕ್ಕೆ ಚ್ಯುತಿಯಾಗಲಿದೆ. ಉತ್ತಮ ಅವಕಾಶಗಳು ಲಭಿಸುವವ್ತು. ಶುಭಸಂಖ್ಯೆ: 6

ವೃಶ್ಚಿಕ: ದುರಾಲೋಚನೆಗಳು ದಾರಿತಪ್ಪಿಸಬಹುದು. ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಶುಭಸಂಖ್ಯೆ: 3

ಧನುಸ್ಸು: ಆತ್ಮೀಯರಿಂದ ಸಾಲದ ಸಹಾಯ ದೊರೆಯುವುದು. ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ. ವ್ಯಾಪಾರಸ್ಥರಿಗೆ ನಿಂದನೆಯ ಭೀತಿ. ಶುಭಸಂಖ್ಯೆ: 9

ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಆರ್ಥಿಕ ಸಮಸ್ಯೆಗಳು ಹೆಚ್ಚು. ಪ್ರೀತಿಪಾತ್ರರು ದೂರವಾಗುವರು. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 1

ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತೆ, ಆತಂಕ. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 4

ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಸಾಹಿತಿಗಳು ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಸೂಕ್ತ ಲಾಭ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8