ನ್ಯೂಸ್

ಈ ರಾಶಿಯವರಿಗೆ ಇಂದು ಧನಾಗಮನಕ್ಕೆ ಕೊರತೆ ಇರದು: ನಿತ್ಯಭವಿಷ್ಯ

ಮೇಷ: ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಸಹೋದ್ಯೋಗಿಗಳ ಸಹಕಾರ. ಶುಭಸಂಖ್ಯೆ: 9

ವೃಷಭ: ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷದ ದಿನ. ದೀರ್ಘ ಪ್ರಯಾಣ ಯೋಗ. ದಾಂಪತ್ಯದಲ್ಲಿ ಸಾಮರಸ್ಯ. ಶುಭಸಂಖ್ಯೆ: 8

ಮಿಥುನ: ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಅಧಿಕ ಧನಾಗಮ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ. ಮಿತ್ರರ ಸಮಾಗಮ. ಶುಭಸಂಖ್ಯೆ:1

ಕಟಕ: ಆರೋಗ್ಯದತ್ತ ಗಮನಹರಿಸಿ. ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ನೂರಾರು ದಾರಿ. ವ್ಯವಹಾರಗಳಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2

ಸಿಂಹ: ಆರೋಗ್ಯ ಸ್ಥಿರ. ಪ್ರಯಾಣದಿಂದ ದೇಹಾಯಾಸ ತೋರೀತು. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಸಫಲತೆ. ಶುಭಸಂಖ್ಯೆ: 3

ಕನ್ಯಾ: ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಉತ್ತಮ ಸಂಪಾದನೆ. ಪಾಲುದಾರಿಕೆಯಲ್ಲಿ ಚರ್ಚೆ ಬೇಡ. ಶುಭ ಸಂಖ್ಯೆ 6

ತುಲಾ: ಆರೋಗ್ಯ ಉತ್ತಮ. ನಿರಂತರ ಧನಾರ್ಜನೆ. ನಿರೀಕ್ಷಿತ ಕಾರ್ಯ ಸಫಲತೆ. ಉದ್ಯೋಗ ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ಶುಭಸಂಖ್ಯೆ: 7

ವೃಶ್ಚಿಕ: ಆರೋಗ್ಯ ಸುದೃಢ. ಪರಸ್ಪರ ಸಹಕಾರ. ಮಕ್ಕಳ ವಿಚಾರದಲ್ಲಿ ಧನವ್ಯಯ. ಗುರುಹಿರಿಯರಿಂದ ಮಾನಸಿಕ ಸಂತೋಷ. ಶುಭಸಂಖ್ಯೆ: 8

ಧನುಸ್ಸು: ಸುಸ್ಥಿರ ಆರೋಗ್ಯ. ನಿಯಮ, ಶಿಸ್ತಿನಿಂದ ಕೂಡಿದ ಜೀವನಶೈಲಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಉದ್ಯೋಗದಲ್ಲಿ ಮನ್ನಣೆ. ಶುಭಸಂಖ್ಯೆ: 5

ಮಕರ: ಆರೋಗ್ಯಸುಧಾರಣೆ. ಪಾಲುದಾರಿಕೆಯಲ್ಲಿ್ಲ ಧನಾರ್ಜನೆ. ಉದ್ಯೋಗ ಸಂಬಂಧಿ ಪ್ರಯಾಣ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 9

ಕುಂಭ: ಆರೋಗ್ಯದ ಬಗ್ಗೆ ಗಮನಹರಿಸಿ. ಸರಿಯಾದ ಶಿಸ್ತು ಅಗತ್ಯ. ಉದಾಸೀನ ಮಾಡದಿರಿ. ಧನಾಗಮನಕ್ಕೆ ಕೊರತೆ ಇರದು. ಶುಭಸಂಖ್ಯೆ: 4

ಮೀನ: ಉತ್ತಮ ಅಭಿವೃದ್ಧಿದಾಯಕ ದೈಹಿಕ ಸ್ಥಿತಿ. ದೀರ್ಘ ಪ್ರಯಾಣದಿಂದ ನಿರೀಕ್ಷಿತ ಕಾರ್ಯದಲ್ಲಿ ಯಶ. ನೂತನ ಮಿತ್ರರ ಸಮಾಗಮ. ಶುಭಸಂಖ್ಯೆ: 7