ಮೇಷ: ಅತಿಯಾಸೆಯನ್ನು ತಡೆಯಿರಿ. ಚಿನ್ನ, ಒಡವೆ, ಬೆಲೆಬಾಳುವ ಹರಳುಗಳ ಖರೀದಿಯಿಂದ ತೊಂದರೆಯಾಗಲಿದೆ. ಶುಭಸಂಖ್ಯೆ: 9
ವೃಷಭ: ಕನಸುಗಳು ವಿಜಯ ಸಾಧಿಸಲಿ ಎಂಬ ನಿಮ್ಮ ಆಶಯ ತಪ್ಪಲ್ಲ. ಆದರೆ ಜಾಣ್ಮೆಯಿಂದ ಗೆಲುವು ಸಾಧಿಸಲು ಯತ್ನಿಸಿ. ಶುಭಸಂಖ್ಯೆ: 8
ಮಿಥುನ: ಸಾಕಷ್ಟು ಎಚ್ಚರಿಕೆ ಇರಲಿ. ಕಳ್ಳತನದ ಅಪಾಯದಿಂದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳಬೇಕಾದೀತು. ಶುಭಸಂಖ್ಯೆ: 7
ಕಟಕ: ಇಂದಿನ ಕೆಲಸವನ್ನು ಈಗಲೇ ಮಾಡಿ ಮುಗಿಸಿಬಿಡಿ. ಒಳಿತಿಗೆ ಬೇಕಾದ ಮಾರ್ಗ ಸಿಗಲು ಅಧಿಕ ಅವಕಾಶಗಳಿವೆ. ಶುಭಸಂಖ್ಯೆ: 6
ಸಿಂಹ: ಮನಬಂದಂತೆ ಮಾತಾಡಲು ಯತ್ನಿಸಬೇಡಿ. ದುಷ್ಟರಾದ ಜಾಣರಿಂದಲೇ ಅಧಿಕವಾದ ತೊಂದರೆಗಳು ಎದುರಾದಾವು. ಶುಭಸಂಖ್ಯೆ: 5
ಕನ್ಯಾ: ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುತ್ತೀರಿ. ನಾಯಕತ್ವ ಹೊಂದಿದರೂ ಗೆಲ್ಲುತ್ತೀರಿ. ಶುಭಸಂಖ್ಯೆ: 4
ತುಲಾ: ಪಿತ್ರಾರ್ಜಿತ ಆಸ್ತಿಯ ಅನೇಕ ವಿವಾದಗಳನ್ನು ರಾಜಿಯ ಮೂಲಕ ಬಗೆಹರಿಸಿಕೊಳ್ಳಲು ತಕ್ಕಂತಹ ಅವಕಾಶಗಳಿವೆ. ಶುಭಸಂಖ್ಯೆ: 3
ವೃಶ್ಚಿಕ: ಆಪ್ತವಾದ ಮಾತುಕತೆಯ ಮೂಲಕ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮಿತ್ರವೃಂದದ ಸಹಕಾರವಿದೆ. ಶುಭಸಂಖ್ಯೆ: 2
ಧನಸ್ಸು: ಸಂಬಂಧಿಗಳು ತಗಾದೆ ಎಬ್ಬಿಸಿ ಆತಂಕದ ಕ್ಷಣಗಳನ್ನು ಸೃಷ್ಟಿಸಬಹುದು. ಅಂಥವರನ್ನು ಚಾತುರ್ಯದಿಂದ ಎದುರಿಸಿ. ಶುಭಸಂಖ್ಯೆ: 1
ಮಕರ: ರಾಜಕೀಯ ಸಂಬಂಧಿ ಚಟುವಟಿಕೆಗಳು ವಿನೂತನವಾದ ಸಿದ್ಧಿಯನ್ನು ನಿಮಗೆ ಯಶಸ್ವಿಯಾಗಿ ತರಲಿವೆ. ಶುಭಸಂಖ್ಯೆ: 9
ಕುಂಭ: ಸಾಹಿತ್ಯ, ಸಂಗೀತ, ಕೃಷಿ ಇವುಗಳಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚಿನ ಸಾಧನೆಗೆ ವಿಶೇಷ ಅವಕಾಶಗಳು ಲಭ್ಯ. ಶುಭಸಂಖ್ಯೆ: 8
ಮೀನ: ಪಾಲುದಾರಿಕೆಯಲ್ಲಿ ಉದ್ಯಮವನ್ನು ವಿಸ್ತಾರ ಮಾಡಿಕೊಳ್ಳಬೇಕೆಂಬ ಕನಸು ನನಸಾಗುವ ಸಾಧ್ಯತೆಯಿದೆ. ಶುಭಸಂಖ್ಯೆ: 7