ಮೇಷ: ಸಾಲಬಾಧೆ ಕಾಡಬಹುದು. ಖರ್ಚಿನ ವಿಚಾರದಲ್ಲಿ ನಿಯಂತ್ರಣ ಅನಿವಾರ್ಯ. ಪಾಪ ಬುದ್ಧಿ ಒಳ್ಳೆಯದಲ್ಲ. ಚರ್ಮವ್ಯಾಧಿ. ಶುಭಸಂಖ್ಯೆ: 3
ವೃಷಭ: ಅನಿರೀಕ್ಷಿತ ಶುಭ ಫಲಗಳಿಂದ ಸಂತಸ. ಕುಟುಂಬ ಸೌಖ್ಯ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚುವುದು. ವ್ಯಾಪಾರದಲ್ಲಿ ಚೇತರಿಕೆ. ಶುಭಸಂಖ್ಯೆ: 9
ಮಿಥುನ: ಯಾರನ್ನೂ ಅತಿಯಾಗಿ ನಂಬಬೇಡಿ. ಮನಸ್ಸಿನಲ್ಲಿ ಅವ್ಯಕ್ತ ಭಯ. ಶತ್ರು ಬಾಧೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 1
ಕಟಕ: ಅನಗತ್ಯ ಸುತ್ತಾಟ ಮಾಡುವುದು ಕ್ಷೇಮವಲ್ಲ. ಮಾತಿನ ಮೇಲೆ ಹಿಡಿತವಿರಲಿ. ತಾಳ್ಮೆಯ ವರ್ತನೆ ತೀರ ಅಗತ್ಯವಾಗಿದೆ. ಶುಭಸಂಖ್ಯೆ: 9
ಸಿಂಹ: ಮಕ್ಕಳಿಗೆ ಅನಾರೋಗ್ಯ. ವಿಪರೀತ ಖರ್ಚು ಮಾಡಲೇಬೇಕಾಗುವುದು. ಕೈಗೊಂಡ ಕಾರ್ಯ ಸುಲಲಿತವಾಗಿ ನಡೆಯದು. ಶುಭಸಂಖ್ಯೆ: 4
ಕನ್ಯಾ: ಆದಾಯವಿದ್ದರೂ ಅಧಿಕ ಖರ್ಚು. ಅಭಿವೃದ್ಧಿ ಕುಂಠಿತವಾಗಿ ಬೇಸರ. ಯಾರೋ ಹೇಳಿದರೆಂದು ನಂಬಿ ಮುಂದುವರಿಯಬೇಡಿ. ಶುಭಸಂಖ್ಯೆ: 7
ತುಲಾ: ಖಾಸಗಿ ಕಂಪನಿಗಳಿಗೆ ನಷ್ಟವಾಗುವ ಸಾಧ್ಯತೆ. ಗುರು ಹಿರಿಯರಲ್ಲಿ ಹೆಚ್ಚಿನ ಭಕ್ತಿ ತೋರಿಸುವಿರಿ. ಶತ್ರುನಾಶವಾಗಿ ನೆಮ್ಮದಿ. ಶುಭಸಂಖ್ಯೆ: 3
ವೃಶ್ಚಿಕ: ಶರೀರದಲ್ಲಿ ಸ್ವಲ್ಪ ತಳಮಳ ಉಂಟಾಗಿ ಭಯ ಕಾಡಬಹುದು. ವೈದ್ಯರನ್ನು ಭೇಟಿ ಮಾಡಿ. ಅಲ್ಪ ಪ್ರಗತಿ. ಉದರ ಬಾಧೆ. ಶುಭಸಂಖ್ಯೆ: 9
ಧನುಸ್ಸು: ಮನಸಿನಲ್ಲಿ ಯಾತನೆ. ಧ್ಯಾನದ ಮೊರೆಹೋಗಿ. ತಾಯಿಯಿಂದ ಲಾಭ. ಸ್ನೇಹಿತರಿಂದ ನೆರವು ಸಿಗಲಿದೆ. ಸುಖ ಭೋಜನ. ಶುಭಸಂಖ್ಯೆ: 3
ಮಕರ: ಅತಿಯಾದ ಕೋಪ ಒಳ್ಳೆಯದಲ್ಲ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ದೃಷ್ಟಿ ದೋಷದಿಂದ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ: 6
ಕುಂಭ: ಚಂಚಲ ಮನಸ್ಸು ನಿಯಂತ್ರಿಸಲು ಯತ್ನಿಸಿ. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಮೋಸ. ಶುಭಸಂಖ್ಯೆ: 7
ಮೀನ: ಆಕಸ್ಮಿಕ ಧನ ಲಾಭವಾಗಿ ಸಂತಸ. ಮಾನಸಿಕ ಒತ್ತಡವನ್ನು ನಿಭಾಯಿಸಿ. ವಿನಾಕಾರಣ ಕಲಹ, ಸಮಾಧಾನದಿಂದಿರಿ. ಶುಭಸಂಖ್ಯೆ: 8