ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರಿಗೆ ದೂರವಾದವರ ನೆನಪು ಕಾಡಬಹುದು...

ಮೇಷ: ಅಂದವಾಗಿ ಕಾಣಬೇಕು ಎನಿಸುವುದರಿಂದ ಆ ನಿಟ್ಟಿನಲ್ಲಿ ಹೆಚ್ಚಿನ ಖರ್ಚು ಮಾಡುತ್ತೀರಿ. ನೆಮ್ಮದಿಯ ದಿನವಿದು. ಅದೃಷ್ಟಸಂಖ್ಯೆ: 3

ವೃಷಭ: ಮೂರನೆಯವರ ಪ್ರವೇಶದಿಂದ ಸ್ನೇಹಿತರೊಡನೆ ಇದ್ದ ಮನಸ್ತಾಪ, ಭಿನ್ನಾಭಿಪ್ರಾಯಗಳು ಶಮನವಾಗುತ್ತವೆ. ಅದೃಷ್ಟಸಂಖ್ಯೆ: 1

ಮಿಥುನ: ಕೆಲವರೊಂದಿಗೆ ಜಗಳ ಆಡಬಹುದು. ಆದ್ದರಿಂದ ಮಾತಿನ ಮೇಲೆ ತುಸು ಹಿಡಿತ ಇದ್ದರೆ ಒಳಿತು ಅನಿಸುತ್ತಿದೆ. ಅದೃಷ್ಟಸಂಖ್ಯೆ: 5

ಕಟಕ: ಹಿನ್ನಡೆಗಳು ಸಹಜ. ಆದರೆ ಬೇಗನೆ ಸರಿಹೋಗಿ ಧೃಢವಿಶ್ವಾಸ ಮೂಡಿಸುವಂಥ ಘಟನೆಗಳು ನಡೆಯುತ್ತವೆ. ಅದೃಷ್ಟಸಂಖ್ಯೆ: 7

ಸಿಂಹ: ಪ್ರಯಾಣ ಬೇಡ ಎಂದು ತೀರ್ವನಿಸಿಕೊಳ್ಳಿ. ಅಪಘಾತದ ಸಾಧ್ಯತೆ ಇದೆ. ಸಾರ್ವಜನಿಕ ವಾಹನ ಬಳಸಬಹುದು. ಅದೃಷ್ಟಸಂಖ್ಯೆ: 3

ಕನ್ಯಾ: ದಿನಕ್ಕಿಂತ ಭಿನ್ನ ಸಾಹಸಕಾರ್ಯ ಮಾಡೋಣ ಎನಿಸುತ್ತದೆ. ಆದರೆ ಇದು ಸೂಕ್ತ ಸಮಯವಲ್ಲ ಎಂಬ ಅರಿವಿರಲಿ. ಅದೃಷ್ಟಸಂಖ್ಯೆ: 2

ತುಲಾ: ಜ್ಞಾಪಕಶಕ್ತಿ ಕುಂದಿತೇ ಎಂಬ ಅನುಮಾನ ಕಾಡುತ್ತದೆ. ಪ್ರಮುಖ ವಿಚಾರವನ್ನು ಮರೆತು ಸಮಸ್ಯೆ ಎದುರಾದೀತು. ಅದೃಷ್ಟಸಂಖ್ಯೆ: 5

ವೃಶ್ಚಿಕ: ನಿಮ್ಮ ಬಳಿ ಹಣ ಕಡಿಮೆ ಇದ್ದರೂ ಪರಿಚಿತ ಬಡವರು ಸಹಾಯ ಮಾಡಲು ಕೇಳುತ್ತಾರೆ. ನಿಮಗೆ ಪರೀಕ್ಷಾಕಾಲವಿದು. ಅದೃಷ್ಟಸಂಖ್ಯೆ: 6

ಧನಸ್ಸು: ದುಡ್ಡು ಕೈಸೇರಬೇಕು ಎನ್ನುವಷ್ಟರಲ್ಲಿ ನಿಮ್ಮ ಸಿಟ್ಟು ಅದನ್ನು ಹಾಳು ಮಾಡಬಹುದು. ಆದ್ದರಿಂದ ತಾಳ್ಮೆ ವಹಿಸಿ. ಅದೃಷ್ಟಸಂಖ್ಯೆ: 1

ಮಕರ: ಚಿಕ್ಕ ಪುಟ್ಟ ಮನರಂಜನೆಗಳನ್ನು ಸಂತಸದಿಂದ ಅನುಭವಿಸುವಿರಿ. ಸಾಲ ತೀರಿಸುವುದರಿಂದ ಕೊಂಚ ನೆಮ್ಮದಿ ಲಭಿಸುತ್ತದೆ. ಅದೃಷ್ಟಸಂಖ್ಯೆ: 4

ಕುಂಭ: ದೂರವಾದವರ ನೆನಪು ಕಾಡುತ್ತದೆ. ಒಂಟಿಯಾಗಿರೋಣ ಎನಿಸಬಹುದು. ಮನಶ್ಶಾಂತಿಗೆ ಸಂಗೀತ ಕೇಳಿ. ಅದೃಷ್ಟಸಂಖ್ಯೆ: 9

ಮೀನ: ನಿಮ್ಮ ಮಾತುಗಳಿಂದ ಕುಟುಂಬದಲ್ಲಿ ಕಿರಿಕಿರಿ ಆಗಬಹುದು. ಎದುರುತ್ತರದಿಂದ ನಿಮಗೆ ಬೇಸರವಾದೀತು. ಅದೃಷ್ಟಸಂಖ್ಯೆ: 7