ಮೇಷ: ಅನಿರೀಕ್ಷಿತ ಧನಾಗಮನ ಸಾಧ್ಯತೆ. ಮಕ್ಕಳಿಂದ ಶುಭ ಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಶುಭಸಂಖ್ಯೆ: 7
ವೃಷಭ: ಕೆಲಸದಲ್ಲಿ ಗೌರವ, ಮನ್ನಣೆ. ನಿಂತುಹೋಗಿರುವ ಯೋಜನೆಗಳಿಗೆ ಪುನಃ ಚಾಲನೆ. ಸಂತಸದ ವಾತಾವರಣ ನೆಲೆಸಲಿದೆ. ಶುಭಸಂಖ್ಯೆ: 4
ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ನೆನೆದ ಕಾರ್ಯ ಸಿದ್ಧಿಯಾಗುವ ದಿನವಾಗಿದೆ. ಸಹೋದರರಿಗೆ ಅಪಘಾತದ ಸಾಧ್ಯತೆ. ಶುಭಸಂಖ್ಯೆ: 6
ಕಟಕ: ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಿ ಪರಿಣಮಿಸಲಿದೆ. ಮಕ್ಕಳ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ. ಶುಭಸಂಖ್ಯೆ: 5
ಸಿಂಹ: ಆರೋಗ್ಯದಲ್ಲಿ ಸುಧಾರಣೆಯಾದರೂ ವಿಷ ಜಂತುಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಒಳಿತು. ವಿನಾಕಾರಣ ಅಧಿಕ ಖರ್ಚು. ಶುಭಸಂಖ್ಯೆ: 9
ಕನ್ಯಾ: ಕೆಲಸದಲ್ಲಿ ಕಿರಿಕಿರಿ ಸಾಧ್ಯತೆ. ಯಾರಮೇಲೂ ಅತಿಯಾದ ನಂಬಿಕೆ ಸಲ್ಲದು. ಮನೆ ಮಂದಿಯೊಂದಿಗೆ ಬಂಧುಗಳ ದರ್ಶನ. ಶುಭಸಂಖ್ಯೆ: 3
ತುಲಾ: ಬರಹಗಾರರಿಗೆ ಶುಭದಿನ. ಕಾರ್ಯಬಾಹುಳ್ಯ ದಿಂದಾಗಿ ಮಾನಸಿಕ ಗೊಂದಲ. ಆಯ್ಕೆಯ ಮೂಲಕ ಕೆಲಸ ಕೈಗೆತ್ತಿಕೊಂಡಲ್ಲಿ ಯಶ. ಶುಭಸಂಖ್ಯೆ: 2
ವೃಶ್ಚಿಕ: ಹೊಸ ಯೋಜನೆ ಪ್ರಾರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವೆಚ್ಚ. ಶುಭಸಂಖ್ಯೆ: 8
ಧನುಸ್ಸು: ಕೋರ್ಟ್ ಕಚೇರಿಗೆ ಸಂಬಂಧಿಸಿದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಅನಾರೋಗ್ಯ ಪೀಡಿತರಿಗೆ ಆರೋಗ್ಯದಲ್ಲಿ ಪ್ರಗತಿ. ಶುಭಸಂಖ್ಯೆ: 1
ಮಕರ: ಆರಕ್ಷಕರಿಗೆ ಬಿಡುವಿಲ್ಲದ ಕೆಲಸ. ಉಪನ್ಯಾಸಕ ವೃತ್ತಿಯಲ್ಲಿರುವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ. ಶುಭಸಂಖ್ಯೆ: 3
ಕುಂಭ: ಮನೆ ನಿರ್ಮಾಣ ಹಾಗೂ ಇತರ ಕೆಲಸಗಳಲ್ಲಿ ಪ್ರಗತಿ. ವಾಹನ ಖರೀದಿಗೆ ಪ್ರಶಸ್ತ ದಿನ. ಪಾಲುದಾರಿಕೆಯಲ್ಲಿ ಸ್ವಲ್ಪ ಬಿರುಕು. ಶುಭಸಂಖ್ಯೆ: 6
ಮೀನ: ಕಾರ್ಯಗಳಲ್ಲಿ ಹಿನ್ನಡೆ. ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ. ಸಂಗಾತಿಯ ಸಾಂತ್ವನದ ಮಾತುಗಳಿಂದ ಸಮಾಧಾನ. ಶುಭಸಂಖ್ಯೆ: 9