ನ್ಯೂಸ್

ಈ ರಾಶಿಯವರಿಗಿಂದು ಉತ್ತಮ ಆದಾಯ ಬರುವ ಸಮಯ: ನಿತ್ಯಭವಿಷ್ಯ

ಮೇಷ: ಯಾವುದೇ ಸಂದರ್ಭದಲ್ಲೂ ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ಯಶಸ್ಸು. ಧಾರ್ವಿುಕ ಸಮಾರಂಭ ಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 9

ವೃಷಭ: ಪತ್ನಿಯ ಆರೋಗ್ಯದಲ್ಲಿ ಎಚ್ಚರ. ಆಕಸ್ಮಿಕವಾಗಿ ಧನಲಾಭ. ಮಾನಸಿಕ ಒತ್ತಡ ಹೆಚ್ಚಾಗುವುದು. ಧ್ಯಾನದ ಮೊರೆಹೋಗಿ. ಶುಭಸಂಖ್ಯೆ: 1

ಮಿಥುನ: ಹಿತಶತ್ರುಗಳ ಬಾಧೆ ಕಾಡಬಹುದು. ಎಚ್ಚರದಿಂದ ವ್ಯವಹರಿಸಿ. ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ಬಂಧುಗಳ ಭೇಟಿ. ಶುಭಸಂಖ್ಯೆ: 5

ಕಟಕ: ದಾಂಪತ್ಯದಲ್ಲಿ ಸಾಮರಸ್ಯ. ಉದ್ಯೋಗದಲ್ಲಿ ಒತ್ತಡ ಎದುರಿಸಬೇಕಾದೀತು. ಸಹೋದರರೊಂದಿಗೆ ಜಗಳ ಸಂಭವ, ಸಹನೆ ಇರಲಿ. ಶುಭಸಂಖ್ಯೆ: 2

ಸಿಂಹ: ವಿದ್ಯೆಯಲ್ಲಿ ನಿರಾಸಕ್ತಿ ಒಳ್ಳೆಯದಲ್ಲ. ಆಲಸ್ಯ ಬಿಟ್ಟು ಅಧ್ಯಯನ ಮಾಡಿ. ಕಾರ್ವಿುಕರಿಗೆ ಶುಭ. ದಾಂಪತ್ಯದಲ್ಲಿ ಸಾಮರಸ್ಯ. ಶುಭಸಂಖ್ಯೆ: 7

ಕನ್ಯಾ: ವಿದ್ಯೆಯಲ್ಲಿ ಆಸಕ್ತಿ. ಅಧಿಕ ಖರ್ಚು ತಲೆದೋರ ಬಹುದು. ಆರೋಗ್ಯದಲ್ಲಿ ಏರುಪೇರು ಆಗಬಹುದು. ವೈದ್ಯರನ್ನು ಭೇಟಿ ಮಾಡಿ. ಶುಭಸಂಖ್ಯೆ: 6

ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟ. ವೈಭವಯುಕ್ತ ವಸ್ತುಗಳ ಖರೀದಿ ಸಾಧ್ಯತೆ. ಕಾನೂನು ವ್ಯಾಜ್ಯಗಳಲ್ಲಿ ಜಯ ಸಾಧಿಸುವಿರಿ. ಶುಭಸಂಖ್ಯೆ: 2

ವೃಶ್ಚಿಕ: ಪಿತೃ ವರ್ಗದಿಂದ ಧನಸಹಾಯ. ಉದ್ಯೋಗದಲ್ಲಿ ನೆಮ್ಮದಿ. ಕೌಟುಂಬಿಕ ಕಲಹ ತಾರಕಕ್ಕೆ ಹೋಗ ಬಹುದು. ತಾಳ್ಮೆ ತೀರ ಅಗತ್ಯ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗ ನಿಮಿತ್ತ ವರ್ಗಾವಣೆ. ಸಹೋದ್ಯೋಗಿ ಗಳಿಂದ ಕಿರಿಕಿರಿ ಅನುಭವಿಸುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ: 3

ಮಕರ: ಸಿನಿಮಾರಂಗದವರಿಗೆ ಶುಭ ದಿನ. ಸಂಬಂಧಿಗಳಿಂದ ಧನಸಹಾಯ ಒದಗಿಬರಲಿದೆ. ಯಂತ್ರೋಪಕರಣ ಗಳಿಂದ ತೊಂದರೆ. ಶುಭಸಂಖ್ಯೆ: 4

ಕುಂಭ: ಭವಿಷ್ಯದ ಬಗ್ಗೆ ಚಿಂತೆ ಉಂಟಾಗಬಹುದು. ಉತ್ತಮ ಆದಾಯ ಬರುವ ಸಮಯ. ಔಷಧ ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 8

ಮೀನ: ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಹಿನ್ನಡೆ. ರಾಜಕಾರಣಿಗಳಿಗೆ ಹಿತಾನುಭವದ ಸಹಕಾರ ದೊರೆಯುತ್ತದೆ. ಶುಭಸಂಖ್ಯೆ: 7