ಮೇಷ: ದುಂದುವೆಚ್ಚಗಳಿಗೆ ಕಡಿವಾಣ ಹಾಕಿ. ಶತ್ರು ಬಾಧೆ ನಿವಾರಣೆ. ಉನ್ನತ ಶಿಕ್ಷಣದಲ್ಲಿ ಪ್ರಗತಿ. ವಿದೇಶ ಪ್ರಯಾಣಕ್ಕೆ ಅವಕಾಶ. ಶುಭಸಂಖ್ಯೆ: 9
ವೃಷಭ: ಜನರ ಬೆಂಬಲ ನಿಮಗೆ ದೊರೆಯಲಿದೆ. ನಿರೀಕ್ಷೆಗೆ ತಕ್ಕಂತೆ ಆದಾಯ ಹರಿದು ಬರಲಿದೆ. ಸರ್ಕಾರಿ ಕೆಲಸಗಳಿಗೆ ಓಡಾಟ. ಶುಭಸಂಖ್ಯೆ: 4
ಮಿಥುನ: ಹಣಕಾಸು ವಿಚಾರದಲ್ಲಿ ಎಚ್ಚರ. ವೃತ್ತಿಯಲ್ಲಿ ಸಣ್ಣಪುಟ್ಟ ತೊಂದರೆ ಬಂದೀತು. ಪೀಠೋಪಕರಣಗಳ ಖರೀದಿಯಲ್ಲಿ ಅಸಮಾಧಾನ. ಶುಭಸಂಖ್ಯೆ: 6
ಕಟಕ: ವಾಹನ ಮಾರಾಟದಿಂದ ಲಾಭವಾಗುವುದು. ಪರಿಚಿತರಿಂದ ಮೋಸವಾದೀತು, ಎಚ್ಚರವಿರಿ. ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ. ಶುಭಸಂಖ್ಯೆ:1
ಸಿಂಹ: ಯತ್ನಿಸಿದ ಕಾರ್ಯಗಳಲ್ಲಿ ಜಯ. ಕ್ರಯವಿಕ್ರಯದಲ್ಲಿ ಅಲ್ಪ ಲಾಭ. ವ್ಯವಹಾರದಲ್ಲಿ ಜಾಣ್ಮೆಯಿಂದ ವರ್ತಿಸುವುದು ಉತ್ತಮ. ಶುಭಸಂಖ್ಯೆ: 8
ಕನ್ಯಾ: ಸ್ವಯಂ ಸಾಮರ್ಥ್ಯದಿಂದ ಅವಕಾಶ. ಅಲ್ಪ ಲಾಭ, ಅಧಿಕ ಖರ್ಚು. ನೂತನ ವಾಹನ ಖರೀದಿ. ಜಮೀನು ವಿಷಯಗಳ ಇತ್ಯರ್ಥ. ಶುಭಸಂಖ್ಯೆ: 2
ತುಲಾ: ಮಾಡಿದ ಕಾರ್ಯಗಳಿಂದ ಪಶ್ಚಾತಾಪ ಪಡುವಿರಿ, ರಾಜಕೀಯ ವ್ಯಕ್ತಿಗಳ ಭೇಟಿಯಾಗುವುದು. ಸೇವಕ ವರ್ಗದಿಂದ ತೊಂದರೆ. ಶುಭಸಂಖ್ಯೆ:4
ವೃಶ್ಚಿಕ: ಚಂಚಲ ಮನಸ್ಸು ನಿಯಂತ್ರಿಸಿ. ಸಹೋದರನಿಗೆ ಅನಾರೋಗ್ಯ. ಸ್ಥಳ ಬದಲಾವಣೆ ಸಾಧ್ಯತೆ. ಬಂಧುಮಿತ್ರರಲ್ಲಿ ವಿರೋಧ. ಶುಭಸಂಖ್ಯೆ:2
ಧನುಸ್ಸು: ಕಂಪನಿಯ ಕೆಲಸಕ್ಕೆ ಹೆಚ್ಚು ತಿರುಗಾಟ.ನಿವೇಶನ ಖರೀದಿಯಲ್ಲಿ ನೆರೆಯವರಿಂದ ತೊಂದರೆ. ಸಗಟು ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 8
ಮಕರ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ. ಮನೆ ನಿರ್ವಣದ ಕೆಲಸಗಳಿಗಾಗಿ ಖರ್ಚು ಮಾಡುವಿರಿ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ:2
ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಸಹವರ್ತಿಗಳಿಂದ ತೊಂದರೆ. ಮನೆಯಲ್ಲಿ ಶುಭ ಸಮಾರಂಭ. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ:1
ಮೀನ: ಕಮಿಷನ್ ಏಜೆಂಟ್ಗಳಿಗೆ ನಷ್ಟ. ಪತ್ನಿಯ ಆರೋಗ್ಯದಲ್ಲಿ ಏರುಪೇರು. ಶತ್ರು ಬಾಧೆ. ದ್ರವ್ಯಲಾಭ. ಸ್ತ್ರೀಯರಿಗೆ ಅನುಕೂಲ. ಶುಭಸಂಖ್ಯೆ:5