ಮೇಷ: ಹೋಟೆಲ್ ಉದ್ಯಮದಲ್ಲಿ ಪ್ರಗತಿ. ಪತ್ರ ವ್ಯವಹಾರದಲ್ಲಿ ಅನುಕೂಲ. ಶುಭ ಕಾರ್ಯಗಳಲ್ಲಿ ಯಶಸ್ಸು. ಪ್ರೀತಿ ಭಾವದಲ್ಲಿ ಯಶಸ್ಸು. ಶುಭಸಂಖ್ಯೆ: 5
ವೃಷಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ.ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ನ್ಯಾಯಾಲಯದ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9
ಮಿಥುನ: ಪತ್ರ ವ್ಯವಹಾರದಲ್ಲಿ ಗೊಂದಲ. ವೃತ್ತಿ ಕ್ಷೇತ್ರದ ಸ್ಥಳ ಬದಲಾವಣೆ ಆಗಬಹುದು. ನಿಮ್ಮ ನಿರ್ಧಾರದಿಂದ ಕುಟುಂಬಕ್ಕೆಲ್ಲ ಅನುಕೂಲ. ಶುಭಸಂಖ್ಯೆ: 7
ಕಟಕ: ಆಸ್ತಿ ಮಾರಾಟಕ್ಕೆ ಕುಟುಂಬದಿಂದ ಸಹಕಾರ. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗೃಹ ನಿರ್ಮಾಣ ಕಾರ್ಯದಲ್ಲಿ ಜಯ.ಶುಭಸಂಖ್ಯೆ:4
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಸ್ನೇಹಿತರಿಂದ ತೊಂದರೆ. ನಿಮ್ಮ ಮನವಿಗೆ ಅಧಿಕಾರಿಗಳಿಂದ ಸ್ಪಂದನೆ. ವಿವಾಹ ಪ್ರಯತ್ನದಲ್ಲಿ ಹಿನ್ನಡೆ. ಶುಭಸಂಖ್ಯೆ: 3
ಕನ್ಯಾ: ಪ್ರಯಾಣಕ್ಕೆ ಅಧಿಕ ಖರ್ಚು. ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಒತ್ತಡ. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 8
ತುಲಾ: ಆತ್ಮಾಭಿಮಾನಕ್ಕೆ ಪೆಟ್ಟು. ಮಾನಸಿಕ ಅಸಮತೋಲ. ಆಕಸ್ಮಿಕ ಧನಾಗಮನ. ಪ್ರಯಾಣದಲ್ಲಿ ಅಡೆತಡೆಗಳು ಎದುರಾದಾವು. ಶುಭಸಂಖ್ಯೆ:2
ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಕಿರಿಕಿರಿ, ಗುತ್ತಿಗೆ ಕ್ಷೇತ್ರದಲ್ಲಿರುವವರಿಗೆ ಲಾಭ, ಭೂ ವ್ಯವಹಾರದಲ್ಲಿ ಯಶಸ್ಸು. ಅಗ್ನಿ ಆಕಸ್ಮಿಕ ಸಾಧ್ಯತೆ. ಶುಭಸಂಖ್ಯೆ: 6
ಧನುಸ್ಸು: ಹೊಸ ವೃತ್ತಿಯಿಂದ ಸಂತಸ. ಮಹಿಳಾ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ತೆಂಗು ಬೇಸಾಯಗಾರರಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ:4
ಮಕರ: ಪ್ರೀತಿ ಪ್ರೇಮದ ಭಾವನೆಗಳಿಗೆ ಪೆಟ್ಟು. ರಾಜಕೀಯ ರಂಗದವರಿಗೆ ಅವಮಾನ, ಅಪವಾದ ಸಾಧ್ಯತೆ. ಮಕ್ಕಳಿಂದ ನಷ್ಟವಾದೀತು. ಶುಭಸಂಖ್ಯೆ:5
ಕುಂಭ: ಶುಭ ಕಾರ್ಯಗಳಲ್ಲಿ ಅನುಕೂಲವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 9
ಮೀನ: ನಂಬಿಕಸ್ಥರಿಂದಲೇ ಮೋಸ ಹೋಗುವಿರಿ. ಉದ್ಯೋಗ ಬದಲಾವಣೆಯಿಂದ ಅನುಕೂಲ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 7