ಮೇಷ: ಸರ್ಕಾರಿ ನೌಕರರಿಗೆ ವಿದೇಶ ಪ್ರವಾಸ ಯೋಗ. ಪತ್ರಕರ್ತರಿಗೆ ಹೆಚ್ಚಿದ ಒತ್ತಡ. ಹಠದಿಂದ ಉದ್ಯೋಗ ಕಳೆದುಕೊಳ್ಳುವ ಸಂದರ್ಭ. ಶುಭಸಂಖ್ಯೆ: 6
ವೃಷಭ: ಸಾರ್ವಜನಿಕ ಸೇವಾ ನಿರತರಿಗೆ ಸನ್ಮಾನ. ಅತಿಆಹಾರ ಸೇವನೆಯಿಂದ ಅನಾರೋಗ್ಯ. ಹೃದಯ ಸಂಬಂಧಿ ರೋಗ ಉಲ್ಬಣ. ಶುಭಸಂಖ್ಯೆ:5
ಮಿಥುನ: ಅಲಂಕಾರಿಕ ವಸ್ತ್ರ ಖರೀದಿಯಲ್ಲಿ ನಷ್ಟ. ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಅಧಿಕ ಲಾಭ ಸಿಗಲಿದೆ. ಪ್ರಯಾಣ ಮುಂದೆ ಹೋಗಲಿದೆ. ಶುಭಸಂಖ್ಯೆ:4
ಕಟಕ: ಸರ್ಕಾರಿ ಹರಾಜಿನಲ್ಲಿ ಭಾಗಿಯಾಗುವಿರಿ. ಕೃಷಿ ಪದಾರ್ಥಗಳ ಖರೀದಿಯಲ್ಲಿ ಸ್ವಲ್ಪಮಟ್ಟಿಗೆ ಕಷ್ಟ ವಾಗಲಿದೆ. ಗಂಡನೊಂದಿಗೆ ಕಲಹ. ಶುಭಸಂಖ್ಯೆ: 9
ಸಿಂಹ: ಪೂಜಾ ಸಾಮಗ್ರಿಗಳ ಅಂಗಡಿ ಪ್ರಾರಂಭಕ್ಕೆ ನಿರ್ಧಾರ ಮಾಡುವಿರಿ. ವಾಣಿಜ್ಯ ಉದ್ಯೋಗಿಗಳು ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 7
ಕನ್ಯಾ: ನೀರು, ಹಣ್ಣಿನ ವ್ಯಾಪಾರದಲ್ಲಿ ಲಾಭ. ರಾಜಕೀಯದವರು ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ:1
ತುಲಾ: ಹಳೆಯ ಸ್ನೇಹಿತನ ಭೇಟಿಯಾಗಲಿದೆ. ಸಮಾಧಾನಕರವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗ. ಆದಾಯಕ್ಕಿಂತ ಖರ್ಚು ಹೆಚ್ಚಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಪರರಿಗೆ ಸಹಾಯ ಮಾಡುವುದರಿಂದ ಸಮಾಧಾನ. ಸ್ತ್ರೀಯರಿಗೆ ಮಾತಿನಿಂದ ಕುಟುಂಬದಲ್ಲಿ ವೈರತ್ವ. ಹಿರಿಯರೊಂದಿಗೆ ಚರ್ಚೆ. ಶುಭಸಂಖ್ಯೆ: 4
ಧನಸ್ಸು: ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿರಲಿದೆ. ಸಹೋದ್ಯೋಗಿ ಮಹಿಳೆಯರಿಂದ ಸಹಾಯ. ಲೋಹ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ಮಕರ: ತಾಂತ್ರಿಕ, ಕಾನೂನು ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಯಶ. ನೂತನ ದಂಪತಿಗಳಿಗೆ ಸಂತಾನದ ವಿಷಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 7
ಕುಂಭ: ಬಾಡಿಗೆ ಮನೆ ಬದಲಾವಣೆ ಸಾಧ್ಯತೆ. ಕಚೇರಿಯ ನವೀಕರಣಕ್ಕೆ ಅಧಿಕ ಖರ್ಚು. ಅಡಿಕೆ ಮತ್ತು ತೆಂಗು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8
ಮೀನ: ಕಾಂಡಿಮೆಂಟ್ಸ್ ಮಾಲೀಕರಿಗೆ ಕೆಲಸಗಾರರಿಂದ ಮೋಸ. ವಕೀಲರಿಗೆ ಒತ್ತಡ. ಐಟಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 2