ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ

ಮೇಷ: ಆತ್ಮಸ್ಥೈರ್ಯದ ಕೊರತೆಯಾಗುವುದು. ಒರಟು ಮಾತಿನಿಂದ ಕಲಹ ಸಾಧ್ಯತೆ. ಭೂ ವಿವಾದ ಸಂಧಾನದ ಮೂಲಕ ಇತ್ಯರ್ಥ. ಶುಭಸಂಖ್ಯೆ: 5

ವೃಷಭ: ದಿನಸಿ ವ್ಯಾಪಾರದಲ್ಲಿ ಪ್ರಗತಿಯಿದೆ. ವೈಯಕ್ತಿಕ ವಿಷಯಗಳತ್ತ ಗಮನಹರಿಸಿ. ಕೃಷಿಕರಿಗೆ ಖರೀದಿಯಲ್ಲಿ ಮೋಸವಾಗಬಹುದು. ಶುಭಸಂಖ್ಯೆ: 9

ಮಿಥುನ: ಶಿಕ್ಷಣ ಸಂಸ್ಥೆಯ ಕೆಲಸಗಾರರಿಗೆ ವೇತನ ಏರಿಕೆ. ಅಲಂಕಾರಿಕ ವ್ಯಾಪಾರದಲ್ಲಿ ಶುಭಫಲ. ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 1

ಕಟಕ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗಲಿದೆ. ಕೋರ್ಟ್ ಕೆಲಸಗಳಲ್ಲಿ ಜಯ. ವಿವಾಹಾಕಾಂಕ್ಷಿಗಳಿಗೆ ನಿರಾಸೆಯಾಗುವುದು. ಶುಭಸಂಖ್ಯೆ: 4

ಸಿಂಹ: ಶಾಲಾ ಕಾಲೇಜು ಸಂಸ್ಥೆಯವರಿಗೆ ಜನಪ್ರಿಯತೆ ಲಭ್ಯ. ಹೋಟೆಲ್ ವ್ಯಾಪಾರದಲ್ಲಿ ಲಾಭದಾಯಕ. ವಾಹನ ಕೊಳ್ಳುವ ಚಿಂತನೆ. ಶುಭಸಂಖ್ಯೆ: 8

ಕನ್ಯಾ: ಪುಸ್ತಕ ವ್ಯಾಪಾರದಲ್ಲಿ ಲಾಭ. ಕಂಪ್ಯೂಟರ್ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟ ಸಾಧ್ಯತೆ. ಮಾನಸಿಕ ಒತ್ತಡ ನಿವಾರಣೆ. ಶುಭಸಂಖ್ಯೆ: 3

ತುಲಾ: ಕೌಟುಂಬಿಕ ಸಂತೋಷಕ್ಕೆ ಖರ್ಚು. ಸಿದ್ದ ಆಹಾರ ಮಾರಾಟಗಾರರಿಗೆ ಲಾಭ. ನಟರು ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ. ಶುಭಸಂಖ್ಯೆ:1

ವೃಶ್ಚಿಕ: ಬುದ್ಧಿವಂತಿಕೆಯಿಂದ ನಿಮ್ಮ ಕಾರ್ಯ ಸುಗಮವಾಗುವುದು. ಕಾನೂನು ವ್ಯವಹಾರದಲ್ಲಿ ಶುಭ. ಅನವಶ್ಯಕ ವಾದ-ವಿವಾದ. ಶುಭಸಂಖ್ಯೆ:8

ಧನಸ್ಸು:  ಕೃಷಿಭೂಮಿ ಕೊಳ್ಳುವ ಚಿಂತನೆ ಮಾಡುವಿರಿ. ಹೃದ್ರೋಗ ತಜ್ಞರಿಗೆ ಶುಭದಾಯಕ ದಿನ. ತಂತ್ರಜ್ಞಾನ ಉದ್ಯೋಗಿಗಳಿಗೆ ಕಿರಿಕಿರಿ. ಶುಭಸಂಖ್ಯೆ: 6

ಮಕರ: ಯೋಜನೆ ಆರಂಭಿಸುವ ಮುನ್ನ ವಿಚಾರಿಸಿ, ವೈವಾಹಿಕ ಮನಸ್ತಾಪದಿಂದ ನೋವು, ಧಾರ್ವಿುಕ ಕೆಲಸ ಶಿಸ್ತಿನಿಂದ ನಿರ್ವಹಿಸಿ. ಶುಭಸಂಖ್ಯೆ:1

ಕುಂಭ: ಕುಟುಂಬದಲ್ಲಿ ದೇವತಾರಾಧನೆ. ನೂತನ ಮಿತ್ರರ ಭೇಟಿ. ಮಹಿಳೆಯರಿಗೆ ಮಂಕು ಕವಿದ ಸ್ಥಿತಿ. ಐಟಿ ಉದ್ಯೋಗದಲ್ಲಿ ಕಿರಿಕಿರಿ.ಶುಭಸಂಖ್ಯೆ:3

ಮೀನ: ಅವಿವಾಹಿತರಿಗೆ ವಿವಾಹ ಯೋಗವಿದೆ. ರಾಜಕೀಯದವರಿಗೆ ಜನರ ಸಹಕಾರ. ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಸಿಗಲಿದೆ. ಶುಭಸಂಖ್ಯೆ: 9