ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸಂಕಷ್ಟ ತುಸು ಕಡಿಮೆಯಾಗುತ್ತದೆ

ಮೇಷ: ಅಧಿಕ ಶ್ರಮದಿಂದ ಕೂಡಿದ ಧನಾರ್ಜನೆ. ಅಣ್ಣನಿಂದ ನಿರೀಕ್ಷಿತ ಸಹಾಯ ಲಭ್ಯ. ಆಸ್ತಿ ವಿಚಾರದಲ್ಲಿ ಗಮನಾರ್ಹ ಪ್ರಗತಿಯಿದೆ. ಶುಭಸಂಖ್ಯೆ: 9

ವೃಷಭ: ಮಾಧ್ಯಮ ಕ್ಷೇತ್ರದವರಿಗೆ ನಿರೀಕ್ಷಿತ ಅಭಿವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಒತ್ತಡ. ಕಾರ್ಯ ಸಾಧಿಸಿದ ಸಮಾಧಾನ ಇರಲಿದೆ. ಶುಭಸಂಖ್ಯೆ: 2

ಮಿಥುನ: ಆರೋಗ್ಯದಲ್ಲಿ ಗಣನೀಯ ಸುಧಾರಣೆಯಾಗುವುದು. ವ್ಯವಹಾರದಲ್ಲಿ ಹೆಚ್ಚಿದ ಗಮನ. ಮಕ್ಕಳ ವಿಚಾರದಲ್ಲಿ ಸಕ್ಷಿಂತಸದ ಸುದ್ದಿ. ಶುಭಸಂಖ್ಯೆ: 2

ಕಟಕ: ಗಾಯನ ವಿಭಾಗದ ವಿದ್ಯಾರ್ಥಿಗಳಿಗೆ ಗುರು ಹಿರಿಯರಿಂದ ಪೋ›ತ್ಸಾಹ. ಪ್ರಯಾಣದಿಂದ ದೇಹಯಾಸ. ಹಳೆಯ ಮಿತ್ರರ ಭೇಟಿ. ಶುಭಸಂಖ್ಯೆ: 9

ಸಿಂಹ: ಆತ್ಮವಿಶ್ವಾಸ ಬೆಳೆಸಿಕೊಳ್ಳುವಿರಿ. ಸಾಹಸದ ಗುಣದಿಂದಾಗಿ ಎಲ್ಲ ಸವಾಲುಗಳನ್ನು ಗೆಲ್ಲುವಿರಿ. ಯೋಚಿಸಿ ಕೆಲಸಕ್ಕೆ ಮುಂದಾಗಿ. ಶುಭಸಂಖ್ಯೆ: 4

ಕನ್ಯಾ: ಆರ್ಥಿಕ ಸಂಕಷ್ಟ ತುಸು ಕಡಿಮೆಯಾಗುತ್ತದೆ. ಶಿಕ್ಷಕಿಯರಿಗೆ ಬಡ್ತಿ ಸಮೇತ ವರ್ಗಾವಣೆ ಸಾಧ್ಯತೆ. ರಾಜಕಾರಣಿಗಳಿಗೆ ಅಶುಭ. ಶುಭಸಂಖ್ಯೆ: 7

ತುಲಾ: ಕುಟುಂಬ ವರ್ಗದವರಿಂದ ಧನಸಹಾಯ ಒದಗಿ ಬರಲಿದೆ. ಪ್ರಯಾಣದಿಂದ ವ್ಯಾವಹಾರಿಕ ಯಶ. ಉದ್ಯೋಗದಲ್ಲಿ ಶುಭ. ಶುಭಸಂಖ್ಯೆ: 2

ವೃಶ್ಚಿಕ: ಚಾಲನೆಯಲ್ಲಿ ಗಾಯಗಳಾಗುವ ಸಂಭವ, ಹುಷಾರಾಗಿರಿ. ಬಂಧುಗಳೊಂದಿಗೆ ನಿಷ್ಠುರ. ಲೋಹಗಳ ವ್ಯಾಪಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ: 7

ಧನಸ್ಸು: ಉದ್ಯೋಗದಲ್ಲಿ ಬಡ್ತಿಯೋಗ. ಪತ್ನಿಯ ಆರೋಗ್ಯಕ್ಕಾಗಿ ಧನವ್ಯಯವಾದೀತು. ಅತಿಯಾದ ಆತ್ಮವಿಶ್ವಾಸ ದಿಂದ ಆರ್ಥಿಕ ನಷ್ಟ. ಶುಭಸಂಖ್ಯೆ:1

ಮಕರ: ರೇಷ್ಮೆ ಉತ್ಪಾದಕರಿಗೆ ಶುಭ. ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ಸಾಂಸ್ಕೃತಿಕ ಕಾರ್ಯದಲ್ಲಿ ಚುರುಕುತನ ತೋರಿಸುವಿರಿ. ಶುಭಸಂಖ್ಯೆ: 8

ಕುಂಭ: ಸಣ್ಣ ವಿಚಾರದಿಂದ ಗೊಂದಲಕ್ಕೀಡಾಗುವಿರಿ. ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಆರ್ಥಿಕತೆಯಲ್ಲಿ ತೊಂದರೆ ಕಡಿಮೆ. ಶುಭಸಂಖ್ಯೆ:6

ಮೀನ: ಸಂತಾನಾಕಾಂಕ್ಷಿಗಳಿಗೆ ಅಶುಭ ಫಲ. ಅಪಾಯದ ಕೆಲಸಗಳು ಸುಲಭವಾಗುತ್ತವೆ. ಹೊಸ ಯೋಜನೆಯಿಂದ ಲಾಭ ಬರಲಿದೆ. ಶುಭಸಂಖ್ಯೆ:5