ಮೇಷ:ವ್ಯಾಪಾರ ಮಳಿಗೆಗಳ ಮಾಲೀಕರಿಗೆ ನಷ್ಟ. ಹಣ್ಣು ತರಕಾರಿ ಮಾರಾಟದಲ್ಲಿ ಲಾಭ. ಸಾಂಸ್ಕೃತಿಕ ಪ್ರವಾಸದಿಂದ ಸಮಾಧಾನ. ಶುಭಸಂಖ್ಯೆ: 6
ವೃಷಭ:ಅನಗತ್ಯ ಮಾತಿನಿಂದ ಮನೆಯಲ್ಲಿ ಕಲಹ. ಮಹಿಳೆಯರಿಗೆ ಆರ್ಥಿಕವಾಗಿ ಅನುಕೂಲವಾಗುವುದು. ದಾಂಪತ್ಯ ಕಲಹ ಆದೀತು. ಶುಭಸಂಖ್ಯೆ: 9
ಮಿಥುನ:ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಹೆಣ್ಣು ಮಕ್ಕಳಿಂದ ಅನುಕೂಲವಿದೆ. ಸ್ವಂತ ವ್ಯಾಪಾರದಲ್ಲಿ ಹೊಸ ಬದಲಾವಣೆ ಉಂಟಾಗುವುದು. ಶುಭಸಂಖ್ಯೆ: 3
ಕಟಕ:ಪ್ರಯಾಣದ ಆಲೋಚನೆ. ಮಿತ್ರರೊಡನೆ ಮನಸ್ತಾಪ. ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಲಾಭ. ಅನಗತ್ಯ ಬೇಸರ. ಶುಭಸಂಖ್ಯೆ:7
ಸಿಂಹ:ಛಾಯಾಗ್ರಾಹಕರಿಗೆ ಅಧಿಕ ಒತ್ತಡ. ಶೈಕ್ಷಣಿಕ ಕ್ಷೇತ್ರದ ಕೆಲಸಗಾರರಿಗೆ ವರ್ಗಾವಣೆ. ಆಕಸ್ಮಿಕ ಧನ ನಷ್ಟ. ಉದ್ಯೋಗದ ಭರವಸೆ. ಶುಭಸಂಖ್ಯೆ:1
ಕನ್ಯಾ:ಶುಭ ಕಾರ್ಯಗಳಿಗೆ ಚಾಲನೆ ದೊರೆಯುವುದು. ಹಳೆಯ ಸ್ನೇಹಿತರ ಸಂಪರ್ಕ. ದಾಯಾದಿ ಕಲಹ. ತಂದೆಗೆ ಎದೆ ನೋವು. ಶುಭಸಂಖ್ಯೆ: 8
ತುಲಾ:ಐಟಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ. ರೇಷ್ಮೆ ಬೆಳೆಗಾರರಿಗೆ ಧನ ನಷ್ಟವಾದೀತು. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 1
ವೃಶ್ಚಿಕ:ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧಾರ. ಮಕ್ಕಳಿಂದ ಕಿರಿಕಿರಿ. ರಾಜಕಾರಣಿಗಳಿಗೆ ಅಪಮಾನ. ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ. ಶುಭಸಂಖ್ಯೆ: 9
ಧನುಸ್ಸು:ಸ್ಥಿರಾಸ್ತಿಯಿಂದ ಲಾಭ. ಪಾಲುದಾರಿಕೆಯಲ್ಲಿ ಅನಿರೀಕ್ಷಿತ ಹಣ ಸಂದಾಯ. ಕೃಷಿಕರಿಗೆ ಖರೀದಿಯಲ್ಲಿ ಮೋಸ. ಆಸ್ತಿ ವಿವಾದ ಅಂತ್ಯ. ಶುಭಸಂಖ್ಯೆ: 6
ಮಕರ:ಶುಭಕಾರ್ಯದ ಸಂಭ್ರಮ. ಸ್ವಯಂಕೃತ ಅಪರಾಧದಿಂದ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 5
ಕುಂಭ:ಸಾಲಗಾರರೊಂದಿಗೆ ವಾಗ್ವಾದ ಮಾಡುವಿರಿ. ಪ್ರೀತಿ ಪ್ರೇಮದ ವಿಚಾರದಲ್ಲಿ ಸಂಕಷ್ಟ. ಮಾನಸಿಕ ಉದ್ವೇಗ. ಆತುರದಿಂದ ತೊಂದರೆ. ಶುಭಸಂಖ್ಯೆ: 1
ಮೀನ:ಬಂಧು ಬಾಂಧವರೊಂದಿಗೆ ಕಿರಿಕಿರಿ ಉಂಟಾಗಲಿದೆ. ಗುರುಗಳಿಂದ ಆಶೀರ್ವಾದ ಸಿಗಲಿದೆ. ಔಷಧ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 4